ಆ್ಯಪ್ನಗರ

66 ವರ್ಷಗಳ ಬಳಿಕ ಉಗುರು ಕತ್ತರಿಸಿದ ಶ್ರೀಧರ್‌ ಚಿಲ್ಲಾಲ್‌

ಶ್ರೀಧರ್‌ ಚಿಲ್ಲಾಲ್‌ ಎಂಬ 82 ವರ್ಷದ ಭಾರತೀಯ ಪ್ರಜೆ ಕೊನೆಗೂ ಬುಧವಾರ, 'ಅಭೂತಪೂರ್ವ' ಕೆಲಸವೊಂದನ್ನು ಮಾಡಿ ಮುಗಿಸಿದ್ದಾರೆ.

Vijaya Karnataka 12 Jul 2018, 10:23 am
ನ್ಯೂಯಾರ್ಕ್‌: ಶ್ರೀಧರ್‌ ಚಿಲ್ಲಾಲ್‌ ಎಂಬ 82 ವರ್ಷದ ಭಾರತೀಯ ಪ್ರಜೆ ಕೊನೆಗೂ ಬುಧವಾರ, 'ಅಭೂತಪೂರ್ವ' ಕೆಲಸವೊಂದನ್ನು ಮಾಡಿ ಮುಗಿಸಿದ್ದಾರೆ. 16ನೇ ವಯಸ್ಸಿನಲ್ಲಿ ಉಗುರು ಕತ್ತರಿಸುವುದನ್ನು ಸ್ಥಗಿತಗೊಳಿಸಿದ್ದ ಚಿಲ್ಲಾಲ್‌, ಬುಧವಾರ, ಜಗತ್ತಿನಲ್ಲೇ ಅತಿ ಉದ್ದದ, 66 ವರ್ಷಗಳಷ್ಟು ಹಳೆಯದಾದ, ಉಗುರುಗಳನ್ನು ಕತ್ತರಿಸಿಕೊಳ್ಳುವ ಕೈಂಕರ್ಯ ನೆರವೇರಿಸಿಕೊಂಡರು.
Vijaya Karnataka Web Nail


ಗಿನ್ನಿಸ್‌ ದಾಖಲೆಗೂ ಭಾಜನರಾಗಿರುವ ಚಿಲ್ಲಾಲ್‌, 1952ರಿಂದ ಉಗುರು ಕತ್ತರಿಸಿಕೊಂಡಿರಲಿಲ್ಲ. ಸುದೀರ್ಘ ಆರು ದಶಕಗಳ ಬಳಿಕ ಆ ಕೆಲಸ ಮಾಡಿ ಮುಗಿಸಿದರು.

ಈ ಸಂಬಂಧ ಬುಧವಾರ ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿರುವ 'ದ ರಿಪ್ಲೀಸ್‌ ಬಿಲೀವ್‌ ಇಟ್‌ ಆರ್‌ ನಾಟ್‌' ಮ್ಯೂಸಿಯಮ್‌ನಲ್ಲಿ 'ಉಗುರು ಕತ್ತರಿಸುವ ಸಮಾರಂಭ' ನಡೆಯಿತು.

ಅಂದಹಾಗೆ, ಪುಣೆಯ ಶ್ರೀಧರ್‌ ಚಿಲ್ಲಾಲ್‌ ಅವರ ಉಗುರುಗಳ ಒಟ್ಟು ಉದ್ದ 909.6 ಸೆಂಟಿಮೀಟರ್‌ಗಳು. ಈ ಪೈಕಿ, ಹೆಬ್ಬೆರಳಿನ ಉಗುರು ಅತಿ ಉದ್ದವಾಗಿದ್ದು, 197.8 ಸೆಂಟಿಮೀಟರ್‌ಗಳಷ್ಟಿದೆ. ಚಿಲ್ಲಾಲ್‌ 2016ರಲ್ಲೇ ಗಿನ್ನಿಸ್‌ ದಾಖಲೆಗೆ ಪಾತ್ರರಾಗಿದ್ದರು.

ತಮ್ಮ ಉಗುರುಗಳು ಮ್ಯೂಸಿಯಮ್‌ನಲ್ಲಿ ಅಮರವಾಗಬೇಕೆಂಬ ಬೇಡಿಕೆ ಇಟ್ಟಿದ್ದರಿಂದ ಚಿಲ್ಲಾಲ್‌ ಅವರನ್ನು ಅಮೆರಿಕಕ್ಕೆ ಆಮಂತ್ರಿಸಿತ್ತು ರಿಪ್ಲೀಸ್‌. ಕೊನೆಗೂ ಅವರ ಇಚ್ಛೆ ನೆರವೇರಿದೆ. ಅವರ ಉಗುರುಗಳನ್ನು ಮ್ಯೂಸಿಯಮ್‌ನಲ್ಲಿ ಇಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ