ಆ್ಯಪ್ನಗರ

ಮಿತಭಾಷಿ ಮನಮೋಹನ್‌ ಸಿಂಗ್ ಕೂಡ ಪಾಕಿಸ್ತಾನ ಮೇಲೆ ಯುದ್ಧ ಸಾರಲು ಗುಡುಗಿದ್ದರಂತೆ!

ಅತ್ಯಂತ ಮೃದು ಭಾಷಿಯಾಗಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಕೆಲಮೊಮ್ಮೆ ಕಠಣ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿರಲಿಲ್ಲ. ಬ್ರಿಟನ್ ಮಾಜಿ ಪ್ರಧಾನಿ ಡೇವಿಡ್ ಕ್ಯಾಮರಾನ್ ಇದನ್ನು ಬಹಿರಂಗಪಡಿಸಿದ್ದಾರೆ.

Vijaya Karnataka Web 19 Sep 2019, 10:18 pm
ಲಂಡನ್‌: ಅತ್ಯಂತ ಮಿತಭಾಷಿ ಪ್ರಧಾನಮಂತ್ರಿಯಾಗಿದ್ದ ಮನಮೋಹನ್‌ ಸಿಂಗ್‌ ಕೂಡ ಕೆಲವೊಮ್ಮೆ ಗುಡುಗಿದ್ದರಂತೆ.
Vijaya Karnataka Web ಡೇವಿಡ್ ಕ್ಯಾಮರಾನ್
ಡೇವಿಡ್ ಕ್ಯಾಮರಾನ್


ಈ ವಿಷಯ ಇಷ್ಟು ವರ್ಷಗಳಾದ ಮೇಲೆ ಬಹಿರಂಗಗೊಂಡಿದೆ. ಈ ವಿಷಯ ಗೊತ್ತಾಗಿದ್ದು ನಮ್ಮ ದೇಶದವರಿಂದ ಅಲ್ಲ ವಿದೇಶಿ ವ್ಯಕ್ತಿಗಳಿಂದ.

ಬ್ರಿಟನ್‌ ಮಾಜಿ ಪ್ರಧಾನಮಂತ್ರಿಯೇ ಈ ವಿಷಯ ಬಹಿರಂಗಪಡಿಸಿದ್ದಾರೆ. ಬ್ರಿಟನ್‌ ಮಾಜಿ ಪ್ರಧಾನಿ ಡೇವಿಡ್‌ ಕ್ಯಾಮರಾನ್‌ ಅವರು ಈ ವಿಷಯವನ್ನು ತಿಳಿಸಿದ್ದಾರೆ.

ತಮ್ಮ ಆತ್ಮಚರಿತ್ರೆಯನ್ನು ಡೇವಿಡ್‌ ಕ್ಯಾಮರಾನ್‌ ಬಿಡುಗಡೆ ಮಾಡಿದ್ದು, ಅದರಲ್ಲಿ ಮನಮೋಹನ್‌ ವೀರತ್ವದ ಬಗ್ಗೆ ವಿವರಿಸಲಾಗಿದೆ.

ಅತ್ಯಂತ ಮಿತಭಾಷಿ, ಸಾಧು ಮನುಷ್ಯರಾಗಿದ್ದ ಭಾರತದ ಅಂದಿನ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಪಾಕಿಸ್ತಾನದ ಮೇಲೆ ಯುದ್ಧ ಸಾರಲು ಮುಂದಾಗಿದ್ದರು ಎಂದು ಅತ್ಮಚರಿತ್ರೆಯಲ್ಲಿ ವಿವರಿಸಿದ್ದಾರೆ.

ಫಾರ್‌ ದ ರೆಕಾರ್ಡ್‌ ಎಂಬ ಆತ್ಮಚರಿತ್ರೆಯನ್ನು ಡೇವಿಡ್‌ ಕ್ಯಾಮರಾನ್‌ ಬಿಡುಗಡೆ ಮಾಡಿದ್ದಾರೆ. 2010ರಿಂದ 2016ರವರೆಗೆ ಭಾರತದ ಜತೆಗಿನ ತಮ್ಮ ಒಡನಾಟವನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ಡೇವಿಡ್‌ ಕ್ಯಾಮರಾನ್‌ ಮೂರು ಭಾರಿ ಭಾರತಕ್ಕೆ ಭೇಟಿ ನೀಡಿದ್ದರು.

ಮನಮೋಹನ್‌ ಸಿಂಗ್ ಅವರ ಬಗ್ಗೆ ಕಿರು ಅಧ್ಯಾಯವನ್ನೇ ಬರೆದಿದ್ದಾರೆ.

ಅವರೊಬ್ಬ ಸಾಧು ಮನುಷ್ಯ. ಆದರೆ ದೇಶ ಎದುರಿಸುತ್ತಿದ್ದ ಸವಾಲುಗಳು, ಬೆದರಿಕೆಗಳು ಬಂದಾಗ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದರು. ಮುಂಬೈ ದಾಳಿ ಮಾದರಿಯಲ್ಲಿ ಮತ್ತೆ ಉಗ್ರ ದಾಳಿ ನಡೆದರೆ ಪಾಕಿಸ್ತಾನದ ವಿರುದ್ಧ ಯುದ್ಧ ಸಾರಲಾಗುವುದು ಎಂದು ನಾನು ಭಾರತಕ್ಕೆ ಭೇಟಿಯಾದಾಗ ಮನಮೋಹನ್‌ ಸಿಂಗ್ ಹೇಳಿದ್ದರು ಎಂದು ಡೇವಿಡ್‌ ಕ್ಯಾಮರಾನ್‌ ಸ್ಮರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ