ದುಬೈ: ಕೋವಿಡ್ ಉಂಟು ಮಾಡಿರುವ ಅಧ್ವಾನಕ್ಕೆ ತತ್ತರಿಸಿರುವ ದುಬೈನ ಹಳೇಯ ಖಾಸಗಿ ಬ್ಯಾಂಕ್ ಮಶ್ರೆಖ್, ವೆಚ್ಚ ಕಡಿತ ಮಾಡಲೋಸುಗ ತನ್ನ ಶೇ.50 ರಷ್ಟು ನೌಕರರನ್ನು ಭಾರತ ಹಾಗೂ ಪಾಕಿಸ್ತಾನ ಸಹಿತ ಹಲವು ರಾಷ್ಟ್ರಗಳಿಗೆ ವರ್ಗ ಮಾಡಲು ಮುಂದಾಗಿದೆ. ಅಲ್ಲದೇ ಕೆಲವು ನೌಕರರನ್ನು ಕೆಲಸದಿಂದ ವಜಾ ಮಾಡಲೂ ಚಿಂತನೆ ನಡೆಸಿದೆ. ದುಬೈನ ಮೂರನೇ ಅತೀ ದೊಡ್ಡ ಸಾಲ ನೀಡುವ ಬ್ಯಾಂಕ್ ಆಗಿರುವ ಮಶ್ರೆಖ್, ಭಾರತ, ಈಜಿಪ್ಟ್ ಹಾಗೂ ಪಾಕಿಸ್ತಾನಕ್ಕೆ ತನ್ನ ನೌಕರರನ್ನು ಕಳುಹಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಅಲ್ಲದೇ ಕೆಲವರಿಗೆ ವರ್ಕ್ ಫ್ರಂ ಹೋಮ್ ಆಯ್ಕೆ ನೀಡುವುದು ಹಾಗೂ ಇನ್ನು ಕೆಲವರನ್ನು ಕೆಲಸದಿಂದ ಕಿತ್ತು ಹಾಕುವ ಬಗ್ಗೆಯೂ ನಿರ್ಧಾರ ಮಾಡಿರುವುದಾಗಿ ತಿಳಿದು ಬಂದಿದೆ.
ದುಬೈ ಡ್ಯೂಟಿ ಫ್ರೀ ರಾಫೆಲ್ ವಿಜೇತನಾದ ಭಾರತೀಯ ಮೂಲದ ವ್ಯಕ್ತಿ: ಜೇಬಿಗಿಳಿಸಿದ್ದು 1 ಮಿಲಿಯನ್ ಡಾಲರ್!
ಹಾಲಿ ಇರುವ ಕೆಲ ಹುದ್ದೆಗಳನ್ನು ತೆಗೆದು ಹಾಕಿ ಹೊಸ ಹುದ್ದೆಗಳನ್ನು ಸೃಷ್ಠಿ ಮಾಡುವುದು, ವೆಚ್ಚ ಕಡಿಮೆ ಇರುವ ಪ್ರದೇಶಗಳಿಗೆ ನೌಕರರನ್ನು ವರ್ಗ ಮಾಡುವುದು, ವೇತನ ಕಡಿತ ಹಾಗೂ ವರ್ಕ್ ಫ್ರಂ ಆಯ್ಕೆ ನೀಡುವ ಆಯ್ಕೆಗಳು ಬ್ಯಾಂಕ್ ಮುಂದೆ ಇದ್ದು, ಕಂಪನಿಯ ಪುನಶ್ಚೇತನದ ಅಂಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಬ್ಯಾಂಕ್ನಲ್ಲಿ ಸುಮಾರು 5000 ಉದ್ಯೋಗಿಗಳಿದ್ದು, ಮೂರು ಹಂತದಲ್ಲಿ ವರ್ಗಾವಣೆ ಕಾರ್ಯ ನಡೆಯಲಿದೆ. ಅಕ್ಟೋಬರ್ ವೇಳೆ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ಲಭಿಸಿದೆ.
ಕೋವಿಡ್ನಿಂದಾಗಿ ನಷ್ಟದ ಸುಳಿಯಲ್ಲಿ ಸಿಲುಕಿರುವ ಬ್ಯಾಂಕ್ ಅರ್ಧ ವಾರ್ಷಿಕ ಲಾಭದಲ್ಲಿ ಶೇ.56ರಷ್ಟು ಕುಸಿತ ಉಂಟಾಗಿತ್ತು. ಇದರ ಬೆನ್ನಲ್ಲೇ ಆರ್ಥಿಕ ಚೇತರಿಕೆಗೆ ಬ್ಯಾಂಕ್ ಮುಂದಾಗಿದ್ದು, ತನ್ನ ನೌಕರರ ಮೇಲೆ ಬರೆ ಎಳೆಯಲು ಮುಂದಾಗಿದೆ.