ಆ್ಯಪ್ನಗರ

ಹಿಂದೂಗಳಿಗೆ ರೇಷನ್ ಕೊಡದ ಪಾಕ್ ಸರ್ಕಾರ: ಅಲ್ಪಸಂಖ್ಯಾತರ ಗೋಳಿನ ಕತೆಗಳು!

ಮಾರಕ ಕೊರೊನಾ ವಿರುದ್ಧ ಇಡೀ ಜಗತ್ತು ಒಂದಾಗಿ ಹೋರಾಡುತ್ತಿದ್ದರೆ ಪಾಕಿಸ್ತಾನ ಮಾತ್ರ ಇನ್ನೂ ಹಿಂದೂ-ಮುಸ್ಲಿಂ ಎಂಬ ತನ್ನ ತಾರತಮ್ಯದ ನೀತಿಯನ್ನು ಮುಂದುವರೆಸಿದೆ. ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಲಾಕ್‌ಡೌನ್ ಆದ ಪ್ರದೇಶಗಳಲ್ಲಿ ಹಿಂದೂ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದವರಿಗೆ ಪಾಕಿಸ್ತಾನ ಸರ್ಕಾರ ರೇಷನ್ ಕೊಡುತ್ತಿಲ್ಲ.

Vijaya Karnataka Web 1 Apr 2020, 12:43 pm
ನವದೆಹಲಿ: ಪ್ರಧಾನಿ ಮೋದಿ ಅವರ ಲಾಕ್‌ಡೌನ್ ಆದೇಶವನ್ನು ಕುಹುಕವಾಡಿ ಉಗಿಸಿಕೊಂಡಿದ್ದ ಪಾಕಿಸ್ತಾನ ಪ್ರಧಾನಇ ಇಮ್ರಾನ್ ಖಾನ್, ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲೂ ಹಿಂದೂ-ಮುಸ್ಲಿಂ ಎಂಬ ತಮ್ಮ ಮತಾಂಧ ನೀತಿಯನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದಾರೆ.
Vijaya Karnataka Web Pakistan
ಸಾಂದರ್ಭಿಕ ಚಿತ್ರ


ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೆಲವು ಪ್ರದೇಶಗಳಲ್ಲಿ ಲಾಕ್‌ಡೌನ್ ಆದೇಶ ಘೋಷಣೆ ಮಾಡಲಾಗಿದೆ. ಅಲ್ಲದೇ ಈ ಪ್ರದೇಶಗಳಿಗೆ ಸರ್ಕಾರವೇ ರೇಷನ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸುತ್ತಿದೆ.


ಆದರೆ ಇದರಲ್ಲೂ ಹಿಂದೂ-ಮುಸ್ಲಿಂ ಎಂಬ ತನ್ನ ತಾರತಮ್ಯ ನೀತಿಯನ್ನು ಮುಂದುವರೆಸಿರುವ ಪಾಕಿಸ್ತಾನ ಸರ್ಕಾರ, ಹಿಂದೂ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದ ಜನರು ವಾಸಿಸುವ ಪ್ರದೇಶಗಳಿಗೆ ರೇಷನ್ ರವಾನಿಸುತ್ತಿಲ್ಲ.

ಹಿಂದೂ, ಕ್ರಿಶ್ಚಿಯನ್ ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯದ ಜನರು ವಾಸಿಸುವ ಪ್ರದೇಶಗಳಿಗೆ ರೇಷನ್ ಪೂರೈಸಲು ಸ್ಥಳೀಯ ಆಡಳಿತದ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.

ಕೊರೊನಾ ವೈರಸ್ ಸೋಂಕಿತರನ್ನು ಭಾರತದ ಗಡಿಗೆ ತಂದು ಸುರಿಯುತ್ತಿದೆ ಪಾಕ್ ಸೇನೆ..!

ಅಲ್ಪಸಂಖ್ಯಾತ ಪ್ರದೇಶಗಳಿಗೆ ರೇಷನ್ ಹಾಘೂ ಇತರ ಅಗತ್ಯ ವಸ್ತುಗಳನ್ನು ರವಾನಿಸಲು ನಿರಾಕರಿಸಿರುವ ಅಧಿಕಾರಿಗಳು, ಕೇವಲ ಮುಸ್ಲಿಂ ಸಮುದಾಯದ ಜನರು ಅಧಿಕವಾಗಿ ನೆಲೆಸಿರುವ ಪ್ರದೇಶಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದಾರೆ.

ಮೊದಲಿಗೆ ಎಲ್ಲರಿಗೂ ರೇಷನ್ ಸೇರಿದಂತೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು ಎಂದು ಭರವಸೆ ನೀಡಿದ್ದ ಸ್ಥಳಿಯ ಆಡಳಿತ, ಇದೀಗ ಕೇವಲ ಮುಸ್ಲಿಂ ಸಮುದಾಯಕ್ಕೆ ಮಾತ್ರ ಸೌಲಭ್ಯ ಒದಗಿಸಿ ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.


ಈ ಕುರಿತು ಅಲವತ್ತುಕೊಂಡಿರುವ ಅಲ್ಪಸಂಖ್ಯಾತ ಸಮುದಾಯ, ಸಂಕಷ್ಟದ ಸಮಯದಲ್ಲೂ ಧರ್ಮ ನೋಡುತ್ತಿರುವ ಸರ್ಕಾರದ ನೀತಿಯಿಂದಾಗಿ ನಾವು ಉಪವಾಸ ಇರಬೇಕಾದ ಪರಿಸ್ಥಿತಿ ಬಂದಿದೆ ಎಂದು ನೋವು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ