ಆ್ಯಪ್ನಗರ

ಒಬಾಮಾ-ಮಿಶೆಲ್‌ ದಂಪತಿ ಪುತ್ರಿಯರ ಜನ್ಮ ರಹಸ್ಯ ಬಯಲು

'ಸಾಮಾನ್ಯವಾಗಿ ಗರ್ಭಪಾತದ ಬಗ್ಗೆ ಮಾತನಾಡದ ನಾನು, ಗರ್ಭಪಾತ ಸರ್ವೆ ಸಾಮಾನ್ಯ ಎಂದು ತಿಳಿದಿರಲಿಲ್ಲ. ಹೀಗಾಗಿ ನನಗೆ ಗರ್ಭಪಾತವಾದ ಸಂದರ್ಭದಲ್ಲಿ ಹತಾಶಳಾಗಿದ್ದೆ'

TIMESOFINDIA.COM 9 Nov 2018, 9:38 pm
ವಾಷಿಂಗ್ಟನ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಹಾಗೂ ಮಿಶೆಲ್ ಒಬಾಮಾ ದಂಪತಿಯ ಪುತ್ರಿಯರ ಜನ್ಮ ರಹಸ್ಯ ಬಯಲಾಗಿದೆ.
Vijaya Karnataka Web MI


ಹೌದು, 20 ವರ್ಷದ ಹಿಂದೆ ತಮಗೆ ಗರ್ಭಪಾತವಾದ ಸಂದರ್ಭದಲ್ಲಿ ಏನನ್ನೊ ಕಳೆದಕೊಂಡಂತೆ ಹಾಗೂ ಒಬ್ಬಂಟಿ ತರ ಅನಿಸುತ್ತಿತ್ತು ಎಂದು ಮನದಾಳದ ಮಾತು ಹಂಚಿಕೊಂಡಿರುವ ಮಿಚೆಲ್ ಒಬಾಮಾ, ತನ್ನಿಬ್ಬರ ಪುತ್ರಿಯನ್ನು ಇನ್ ವಿಟ್ರೊ ಫರ್ಟಿಲೈಜೇಶನ್ (ಐವಿಎಫ್) ಮೂಲಕ ಪಡೆದಿರುವುದಾಗಿ ತಿಳಿಸಿದ್ದಾರೆ.

ಖಾಸಗಿ ಚಾನೆಲ್‌ನಲ್ಲಿ ಪ್ರಸಾರವಾದ 'ಗುಡ್ ಮಾರ್ನಿಂಗ್ ಅಮೆರಿಕ' ಕಾರ್ಯಕ್ರಮದಲ್ಲಿ ಮಾತನಾಡಿರುವ ಮಿಶೆಲ್‌ ಅವರು, 'ಗರ್ಭಪಾತದ ಬಗ್ಗೆ ಯಾರ ಜೊತೆಯೂ ಚರ್ಚಿಸಿಲ್ಲವಾದರಿಂದ ಇದು ಸಾಮಾನ್ಯ ಪ್ರಕ್ರಿಯೆ ಎಂಬ ಅರಿವು ನನಗಿರಲಿಲ್ಲ. ಹೀಗಾಗಿ ಗರ್ಭಪಾತವಾದಾಗ ಹತಾಶಳಾಗಿದ್ದೆ' ಎಂದು ಮಿಶೆಲ್ ಹೇಳಿಕೊಂಡಿದ್ದಾರೆ.

54 ವರ್ಷದ ಮಿಶೆಲ್ ಅವರ ಆತ್ಮ ಚರಿತ್ರೆ 'Becoming' ಮಂಗಳವಾರ ಬಿಡುಗಡೆಯಾಗಲಿದೆ. ವರ್ಣಭೇದ ನೀತಿ ಹಾಗೂ ಶಿಕಾಗೋದಲ್ಲಿ ಕಳೆದ ಬಾಲ್ಯ ನೆನಪುಗಳು ಸೇರಿದಂತೆ ಒಬಾಮಾ ಅವರು ರಾಜಕೀಯ ಜೀವನಕ್ಕೆ ಕಾಲಿಟ್ಟ ನಂತರ ವೈವಾಹಿಕ ಬದುಕಿನಲ್ಲಿ ಎದುರಿಸಿದ ಸವಾಲುಗಳ ಬಗ್ಗೆ ಆತ್ಮ ಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ