ಆ್ಯಪ್ನಗರ

ಮಿಸೈಲ್‌ ದಾಳಿ 'ಅಮೆರಿಕಾ ಮುಖಕ್ಕೆ ಕಪಾಳಮೋಕ್ಷ': ಇರಾನ್‌ ಸರ್ವೋಚ್ಚ ನಾಯಕ ಖಮೇನಿ

“ಕಳೆದ ರಾತ್ರಿ ನಾವು ಅವರ ಮುಖಕ್ಕೆ ಕಪಾಳ ಮೋಕ್ಷ ಮಾಡಿದ್ದೇವೆ,” ಎಂದಿರುವ ಖಮೇನಿ, ಸೇನಾ ಪ್ರತೀಕಾರ ಸಾಕಾಗಿಲ್ಲ ಎಂದಿದ್ದಾರೆ. “ಈ ಪ್ರದೇಶದಲ್ಲಿ ಅಮೆರಿಕಾದ ಭ್ರಷ್ಟ ಉಪಸ್ಥಿತಿಯು ಕೊನೆಗೊಳ್ಳಬೇಕು ಎಂಬುದು ಮುಖ್ಯ,” ಎಂದು ಕಿಡಿಕಾರಿದ್ದಾರೆ.

Agencies 8 Jan 2020, 4:06 pm

ತೆಹ್ರಾನ್‌: ಇರಾಕ್‌ನಲ್ಲಿರುವ ಅಮೆರಿಕಾ ಸೇನಾ ನೆಲೆಗಳ ಮೇಲಿನ ಇರಾನ್‌ ದಾಳಿಯನ್ನು ಆ ದೇಶದ ಸರ್ವೋಚ್ಚ ನಾಯಕ ಅಯಾತೊಲ್ಲ ಅಲಿ ಖಮೇನಿ, 'ಅಮೆರಿಕಾ ಮುಖಕ್ಕೆ ಕಪಾಳಮೋಕ್ಷ' ಎಂದು ಬಣ್ಣಿಸಿದ್ದಾರೆ. ಮಾತ್ರವಲ್ಲ ಅಮೆರಿಕಾ ಸೇನೆ ಈ ಪ್ರದೇಶ ಬಿಟ್ಟು ಹೊರಡಬೇಕು ಎಂದು ತಾಕೀತು ಮಾಡಿದ್ದಾರೆ.
Vijaya Karnataka Web Ayatollah Ali Khamenei


ಅಂಬರ್‌ನಲ್ಲಿರುವ ಐನ್‌ ಅಲ್‌ ಅಸದ್‌ ಮತ್ತು ಎರ್ಬಿಲ್‌ನ ನೆಲೆಗಳ ಮೇಲೆ ರಾಕೆಟ್‌ ದಾಳಿ ಬೆನ್ನಿಗೆ ಅವರು ಟಿವಿ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳವಾರ ಮುಂಜಾನೆ 1-45 ರಿಂದ 2-15ರ ಅವಧಿಯಲ್ಲಿ ಎರಡೂ ನೆಲೆಗಳ ಮೇಲೆ 22 ಮಿಸೈಲ್‌ಗಳಿಂದ ದಾಳಿ ನಡೆದಿದೆ. ಇದಕ್ಕೂ ಮೊದಲು ಇರಾನ್‌ನ ಸೇನಾಧಿಕಾರಿ ಖಾಸಿಮ್‌ ಸುಲೈಮಾನಿ ಮತ್ತು ಇರಾಕ್‌ನ ಹಶ್ದ್‌ ಅಲ್‌ ಶಾಬಿಯ ಡೆಪ್ಯುಟಿ ಕಮಾಂಡರ್‌ ಮೆಹ್ದಿ ಅಲ್‌ ಮುಹಾಂದಿಸ್‌ರನ್ನು ಅಮೆರಿಕಾ ಡ್ರೋನ್‌ ದಾಳಿಯಲ್ಲಿ ಕೊಂದು ಹಾಕಿತ್ತು. ಈ ಘಟನೆ ಬೆನ್ನಿಗೆ ದೊಡ್ಡ ಮಟ್ಟದ ಪ್ರತ್ಯುತ್ತರ ನೀಡುವುದಾಗಿ ಖಮೇನಿ ಶಪಥ ಮಾಡಿದ್ದರು. ಅದರಂತೆ ಬುಧವಾರ ರಾಕೆಟ್‌ ದಾಳಿ ನಡೆದಿದೆ.

ತಂಟೆಗೆ ಬಂದ್ರೆ 'ಅದ್ಭುತ ಹೊಡೆತ' ಕೊಡ್ತೇವೆ..! ಅಮೆರಿಕಕ್ಕೆ ಬೆಂಬಲ ಘೋಷಿಸಿ ಇರಾನ್‌ಗೆ ಪಂಥಾಹ್ವಾನ ನೀಡಿದ ಇಸ್ರೇಲ್..!

“ಕಳೆದ ರಾತ್ರಿ ನಾವು ಅವರ ಮುಖಕ್ಕೆ ಕಪಾಳ ಮೋಕ್ಷ ಮಾಡಿದ್ದೇವೆ,” ಎಂದಿರುವ ಖಮೇನಿ, ಸೇನಾ ಪ್ರತೀಕಾರ ಸಾಕಾಗಿಲ್ಲ ಎಂದಿದ್ದಾರೆ. “ಈ ಪ್ರದೇಶದಲ್ಲಿ ಅಮೆರಿಕಾದ ಭ್ರಷ್ಟ ಉಪಸ್ಥಿತಿಯು ಕೊನೆಗೊಳ್ಳಬೇಕು ಎಂಬುದು ಮುಖ್ಯ,” ಎಂದು ಕಿಡಿಕಾರಿದ್ದಾರೆ.

ರಾಜಧಾನಿ ತೆಹ್ರಾನ್‌ನಲ್ಲಿ ದೊಡ್ಡ ಸಂಖ್ಯೆಯಲ್ಲಿ ಸೇರಿದ್ದ ಜನರನ್ನು ಉದ್ದೇಶಿಸಿ ಅವರು ಈ ಮಾತುಗಳನ್ನಾಡಿದ್ದಾರೆ. ಇದರಲ್ಲಿ ಪಾಲ್ಗೊಂಡಿದ್ದ ಹೆಚ್ಚಿನವರು ಸೊಲೈಮನಿ ಚಿತ್ರವನ್ನು ಹಿಡಿದುಕೊಂಡಿದ್ದರು. ಕೆರ್ಮನ್‌ನಲ್ಲಿ ಮಂಗಳವಾರ ನಡೆದ ಸೊಲೈಮನಿ ಅಂತಿಮ ಯಾತ್ರೆ ವೇಳೆ ನಡೆದ ಕಾಲ್ತುಳಿತದಲ್ಲಿ 52ಕ್ಕೂ ಹೆಚ್ಚು ಜನರು ಅಸುನೀಗಿದ್ದರು.

ಅಮೆರಿಕ ಮೇಲೆ ಇರಾನ್ ಪ್ರತೀಕಾರ..! ಡಜನ್‌ಗಟ್ಟಲೆ ಕ್ಷಿಪಣಿ ದಾಳಿಗೆ ‘ಆಲ್‌ ಈಸ್ ವೆಲ್‌’ ಎಂದ ಟ್ರಂಪ್..!

“ನಾನು ಇದಕ್ಕೆ ಕ್ಷಮೆ ಕೇಳುತ್ತೇನೆ. ಈ ಘಟನೆಯಿಂದ ನನಗೆ ನೋವಾಗಿದೆ,” ಎಂದು ಖಮೇನಿ ಹೇಳಿದ್ದು, “ಅವರ ಕುಟುಂಬದವರಿಗೆ ನನ್ನ ಸಂತಾಪಗಳು. ಅವರ ಉತ್ಸಾಹ, ಆತ್ಮ ಸೊಲೈಮನಿ ಆತ್ಮದ ಜೊತೆ ಸೇರಲಿ ಎಂದು ನಾನು ಹಾರೈಸುತ್ತೇನೆ,” ಎಂದಿದ್ದಾರೆ.

‘ಇರಾನ್‌ ಶಸ್ತ್ರ ಸಜ್ಜಿತವಾಗಿದೆ’

ದಾಳಿ ಬೆನ್ನಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಮೊಹಮ್ಮದ್‌ ಜಾವದ್‌ ಝರೀಫ್‌, ಇರಾನ್‌ ಸ್ವರಕ್ಷಣೆಗೆ ಬೇಕಾದ ಕ್ರಮಗಳನ್ನು ವಿಶ್ವಸಂಸ್ಥೆಯ ನಿಯಮಾವಳಿಯ ಆರ್ಟಿಕಲ್‌ 51ರಂತೆ ತೆಗೆದುಕೊಂಡಿದೆ. ನಾವು ಯುದ್ಧ ಬಯಸುತ್ತಿಲ್ಲ. ಆದರೆ ಯಾವುದೇ ತರಹದ ಆಕ್ರಮಣದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ ಎಂದಿದ್ದಾರೆ.

ಖಮೇನಿ ಕೂಡ ತಮ್ಮ ಭಾಷಣದಲ್ಲಿ ಇರಾನ್‌ ಯಾವುದೇ ರೀತಿಯ ಆಕ್ರಮಣವನ್ನು ತಡೆಯಲು ಸನ್ನದ್ಧವಾಗಿದೆ ಎಂದಿದ್ದಾರೆ. ಇದಲ್ಲದೆ ಒಂದೊಮ್ಮೆ ಬುಧವಾರದ ದಾಳಿಗೆ ಅಮೆರಿಕಾ ಪ್ರತೀಕಾರ ತೆಗೆದುಕೊಂಡಿದ್ದೇ ಆದಲ್ಲಿ ಮತ್ತಷ್ಟು ತೀವ್ರವಾಗಿ ಪ್ರತ್ಯುತ್ತರ ನೀಡಬೇಕಾಗುತ್ತದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ