ಆ್ಯಪ್ನಗರ

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಇಂದು 'ನಮೋ' ಮೇನಿಯಾ

ವಿಶ್ವಸಂಸ್ಥೆ ಮಹಾಧಿವೆಶನದಲ್ಲಿಇದು ಮೋದಿಯವರ ಎರಡನೇ ಬಾರಿ ಭಾಷಣ ಮಾಡಲಿದ್ದಾರೆ. ಈ ಹಿಂದೆ 2014ರಲ್ಲಿ ಪ್ರಧಾನಿ ಮಾತನಾಡಿದ್ದರು.

PTI 27 Sep 2019, 7:56 am
ನ್ಯೂಯಾರ್ಕ್: ವಿಶ್ವಸಂಸ್ಥೆಯ 74ನೇ ಮಹಾಧಿವೇಶನ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಮಾತನಾಡಲಿದ್ದಾರೆ. ವಿಶ್ವಸಂಸ್ಥೆ ಮಹಾಧಿವೆಶನದಲ್ಲಿಇದು ಮೋದಿಯವರ ಎರಡನೇ ಭಾಷಣ ಇದಾಗಿದ್ದು, ಈ ಹಿಂದೆ 2014ರಲ್ಲಿ ಪ್ರಧಾನಿ ಮಾತನಾಡಿದ್ದರು. ಈ ಅಧಿವೇಶನದಲ್ಲಿ ಮೋದಿ ಬಳಿಕ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಮಾತನಾಡಲಿದ್ದಾರೆ.
Vijaya Karnataka Web modi-PTI


ಸ್ವಚ್ಛ ಭಾರತ ರೂವಾರಿಗೆ ‘ಗೋಲ್‌ಕೀಪರ್‌’ ಪ್ರದಾನ

''ಕಾಶ್ಮೀರ ವಿಚಾರ ಮರೆತು ಬಿಡಿ. ಅದು ಭಾರತದ ಅವಿಭಾಜ್ಯ ಅಂಗ. ಅನ್ಯ ವಿಷಯಗಳ ಕುರಿತು ತಲೆ ಕೆಡಿಸಿಕೊಳ್ಳಬೇಡಿ. ಭಯೋತ್ಪಾದನೆ ನಿರ್ಮೂಲನೆ ಮುಖ್ಯ. ಆ ಬಗ್ಗೆ ಮಾತಾಡೋಣ,'' ಎಂದು ಭಾರತ ಈಗಾಗಲೇ ಹಲವು ಜಾಗತಿಕ ವೇದಿಕೆಗಳ ಮೂಲಕ ಸ್ಪಷ್ಟಪಡಿಸಿದೆ. ಆದರೆ, ಪಾಕಿಸ್ತಾನಕ್ಕೆ ವಿಶ್ವ ವೇದಿಕೆಯಲ್ಲಿ ಕಾಶ್ಮೀರ ಬಿಟ್ಟು ಬೇರೆ ವಿಷಯವೇ ಇಲ್ಲ. ಭಯೋತ್ಪಾದನೆ ಬಗ್ಗೆ ಮಾತಾಡಿದರೆ ಅದು ಅವರಿಗೇ ತಿರುಗುಬಾಣವಾಗುತ್ತದೆ. ಉದ್ಯಮ, ವ್ಯಾಪಾರ, ವಿಶ್ವ ನಾಯಕತ್ವದ ಬಗ್ಗೆ ಚರ್ಚಿಸುವ ಸಾಮರ್ಥ್ಯ ಆ ದೇಶಕ್ಕೆ ಇಲ್ಲ. ಹೀಗಾಗಿ ಶುಕ್ರವಾರ ಇಮ್ರಾನ್‌ ಖಾನ್‌ ಪುನಃ ಕಾಶ್ಮೀರವನ್ನೇ ಅಜೆಂಡಾ ಮಾಡಿಕೊಂಡು ಗೋಳು ಮಂಡಿಸುವ ತಯಾರಿಯಲ್ಲಿದ್ದಾರೆ.

ಕಾಶ್ಮೀರ ವಿಚಾರದಲ್ಲಿ ಪಾಕ್ ಪ್ರಯತ್ನ ವಿಫಲ

''ಪಾಕಿಸ್ತಾನದ ರೀತಿ ಕೆಳಮಟ್ಟಕ್ಕೆ ಇಳಿದು ಭಾರತ ಗೋಳು ತೋಡಿಕೊಳ್ಳುವುದಿಲ್ಲ. ಜಾಗತಿಕ ನಿರೀಕ್ಷೆಗಳು ಮತ್ತು ಭಾರತದ ಪಾತ್ರ ಕುರಿತು ಮೋದಿಯವರು ದೂರದರ್ಶಿತ್ವದ ಭಾಷಣ ಮಾಡಲಿದ್ದಾರೆ. ಅಭಿವೃದ್ಧಿ, ಭದ್ರತೆ, ಶಾಂತಿ ಮತ್ತು ಇತರ ಉನ್ನತ ವಿಷಯಗಳ ಕುರಿತು ಭಾರತದ ನಿರೀಕ್ಷೆಗಳೇನು ಎನ್ನುವುದನ್ನು ಪ್ರಧಾನಿಯವರು ಮಂಡಿಸಲಿದ್ದಾರೆ. ಕಾಶ್ಮೀರ ಕುರಿತು ಪಾಕಿಸ್ತಾನ ಮಾತಾಡುವುದಿದ್ದರೆ ಮಾತಾಡಲಿ, ಅದಕ್ಕೆ ನಮ್ಮ ಅಭ್ಯಂತರ ಇಲ್ಲ,'' ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಹೇಳಿದ್ದಾರೆ. ''ಕಾಶ್ಮೀರವನ್ನು ಅಂತಾರಾಷ್ಟ್ರೀಯ ವಿಷಯವಾಗಿ ಪರಿವರ್ತಿಸಬೇಕು ಎನ್ನುವುದು ಪಾಕಿಸ್ತಾನದ ಅಚಲ ನಿರ್ಧಾರ. ವಿಶ್ವಸಂಸ್ಥೆಯಲ್ಲಿಇದಕ್ಕೆ ಇಮ್ರಾನ್‌ ಖಾನ್‌ ಒತ್ತು ನೀಡಲಿದ್ದಾರೆ,'' ಎಂದು ಪಾಕ್‌ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಚೀನಾ ವಿರುದ್ಧ ಗುಡುಗಿದ ಟ್ರಂಪ್‌,

ದ್ವಿತೀಯ ಭಾಷಣ: 2014ರಲ್ಲಿಎನ್‌ಡಿಎ ಮೊದಲ ಅವಧಿಯಲ್ಲಿ ಪ್ರಧಾನಿ ಮೋದಿ ವಿಶ್ವಸಂಸ್ಥೆ ಮಹಾಧಿವೇಶನ ಉದ್ದೇಶಿಸಿ ಪ್ರಥಮ ಭಾಷಣ ಮಾಡಿದ್ದರು. ಅದಾಗಿ ನಾಲ್ಕು ವರ್ಷ ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಭಾರತದ ಅಭಿಪ್ರಾಯ ಮಂಡಿಸಿದ್ದರು. ಈಗ ಎರಡನೇ ಬಾರಿ ಮೋದಿ ಅವರು ಮಹಾ ಅಧಿವೇಶನದಲ್ಲಿಮಾತಾಡಲಿದ್ದಾರೆ.

ಮೋದಿ ಭಾಷಣ ಲೈವ್‌

ಶುಕ್ರವಾರದ ಕಾರ್ಯಸೂಚಿಯಲ್ಲಿನರೇಂದ್ರ ಮೋದಿ ಅವರು ಏಳನೇ ಗಣ್ಯರಾಗಿ ಮಾತಾಡಲಿದ್ದಾರೆ. ಭಾರತೀಯ ಕಾಲಮಾನದಂತೆ ರಾತ್ರಿ 8.30ರಿಂದ 9 ಗಂಟೆವರೆಗೆ ಅವರು ಮಾತನಾಡಲಿದ್ದಾರೆ. ಜಗತ್ತಿನ ಎಲ್ಲ ಪ್ರಮುಖ ಸುದ್ದಿವಾಹಿನಿಗಳಲ್ಲಿ ಮೋದಿ ಭಾಷಣ ನೇರ ಪ್ರಸಾರಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ