ಆ್ಯಪ್ನಗರ

ಪೆಸಿಫಿಕ್‌ ದ್ವೀಪ ರಾಷ್ಟ್ರಗಳಿಗೆ 150 ಮಿಲಿಯನ್‌ ಡಾಲರ್‌ ಸಾಲ ಘೋಷಿಸಿದ ಮೋದಿ

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಪೆಸಿಫಿಕ್‌ ದ್ವೀಪ ರಾಷ್ಟ್ರಗಳಿಗೆ ಬಂಪರ್‌ ಕೊಡುಗೆ ಘೋಷಿಸಿದ್ದಾರೆ. ವಿವಿಧ ಯೋಜನೆಗಳ ಮೇಲೆ ಹೂಡಿಕೆ ಮಾಡಲು 150 ಮಿಲಿಯನ್‌ ಡಾಲರ್‌ 'ಲೈನ್‌ ಆಫ್ ಕ್ರೆಡಿಟ್‌' ಸಾಲ ಘೋಷಿಸಿದ್ದಾರೆ.

PTI 25 Sep 2019, 5:57 pm
ನ್ಯೂಯಾರ್ಕ್‌ : ಪೆಸಿಫಿಕ್‌ ಸಾಗರದ ದ್ವೀಪ ರಾಷ್ಟ್ರಗಳಿಗೆ ಪ್ರಧಾನಿ ಮೋದಿ 150 ಮಿಲಿಯನ್‌ ಡಾಲರ್‌ ಸಾಲ ನೀಡುವುದಾಗಿ ಘೋಷಿಸಿದ್ದಾರೆ. ಸಾಲವನ್ನು ಲೈನ್‌ ಆಫ್ ಕ್ರೆಡಿಟ್‌ ಮಾದರಿಯಲ್ಲಿ ನೀಡಲಿದೆ. ಈ ಹಣ ದ್ವೀಪರಾಷ್ಟ್ರಗಳಲ್ಲಿ ಸೌರಶಕ್ತಿ, ನವೀಕರಿಸಲಾಗುವ ಶಕ್ತಿ ಹಾಗೂ ಹವಾಮಾನ ವೈಪರೀತ್ಯಕ್ಕೆ ಸಂಬಂಧಿಸಿದ ಯೋಜನೆಗಳಲ್ಲಿ ಹೂಡಿಕೆಯಾಗಲಿದೆ.
Vijaya Karnataka Web modi


ಇಂಡೋ-ಪೆಸಿಫಿಕ್ ಐಲ್ಯಾಂಡ್ಸ್‌ ಡೆವಲಪಿಂಗ್ ಸ್ಟೇಟ್ಸ್‌ (PSIDS) ನಾಯಕರುಗಳ ಸಭೆಯಲ್ಲಿ ಭಾಗವಹಿಸಿ ಈ ಘೋಷಣೆ ಮಾಡಿದ್ದಾರೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 74ನೇ ಸಭೆಗೆ ಹಾಜರಾಗಿದ್ದು, ಇದೇ ಸಂರ್ಭದಲ್ಲಿ ಇಂಡೋ-ಪೆಸಿಫಿಕ್ ಐಲ್ಯಾಂಡ್ಸ್‌ ಡೆವಲಪಿಂಗ್ ಸ್ಟೇಟ್ಸ್‌ ನಾಯಕರ ಸಭೆಯಲ್ಲಿ ಪಾಲ್ಗೊಂಡು ಈ ಮಹತ್ವದ ಘೋಷಣೆ ಹೊರಡಿಸಿದ್ದಾರೆ.

'ರಾಷ್ಟ್ರಪಿತ ಮೋದಿ' ವಿರೋಧಿಗಳು ಭಾರತೀಯರೇ ಅಲ್ಲ: ಜಿತೇಂದ್ರ ಸಿಂಗ್‌

ಈ ಸಭೆಯಲ್ಲಿ ಫಿಜಿ, ಕಿರಿಬಾಟ್‌ ಗಣರಾಜ್ಯ, ಮಾರ್ಷಲ್‌ ದ್ವೀಪಗಳ ಗಣರಾಜ್ಯ, ಮೈಕ್ರೊನೇಷಿಯಾ ರಾಜ್ಯಗಳ ಒಕ್ಕೂಟ, ರಿಪಬ್ಲಿಕ್‌ ಆಫ್‌ ನೌರು, ರಿಪಬ್ಲಿಕ್‌ ಆಫ್‌ ಪಲಾವ್, ಪಪುವಾ ನ್ಯೂಗಿನಿಯಾ ಗಣರಾಜ್ಯ, ಸಮಾವೋ ಗಣರಾಜ್ಯ, ಸೋಲೋಮನ್‌ ಸ್ವೀಪ, ಟೋಂಗಾ ಸಾಮ್ರಾಜ್ಯ, ತುವಾಲೋ ಮತ್ತು ವನುವಾಟು ಗಣರಾಜ್ಯಗಳು ಸೇರಿದ್ದವು.

ಮೋದಿಗೆ 'ಗ್ಲೋಬಲ್ ಗೋಲ್ಕೀಪರ್' ಗರಿ: ಸ್ವಚ್ಛ ಭಾರತ ಹರಿಕಾರನಿಗೆ ವಿಶ್ವಮನ್ನಣೆ

ಲೈನ್‌ ಆಫ್‌ ಕ್ರೆಡಿಟ್‌ ಎಂದರೇನು?
ಆಯಾ ರಾಷ್ಟ್ರಗಳು ಇಚ್ಚೆಪಟ್ಟ ಅವಧಿಗೆ ನಿರ್ದಿಷ್ಟ ಮೊತ್ತದ ಸಾಲ ಒದಗಿಸುವುದಕ್ಕೆ ಲೈನ್ ಆಫ್ ಕ್ರೆಡಿಟ್ ಎನ್ನುತ್ತಾರೆ. ರಾಷ್ಟ್ರಗಳು ತಮಗೆ ಬೇಕಾದಷ್ಟು ಮೊತ್ತ ಮಾತ್ರ ತೆಗೆದುಕೊಂಡು, ಅಷ್ಟಕ್ಕೆ ಮಾತ್ರ ಬಡ್ಡಿ ಪಾವತಿಸುತ್ತವೆ. ಒಂದು ವೇಳೇ ಸಾಲ ಪಡೆದ ರಾಷ್ಟ್ರದ ಬಳಿ ಹೆಚ್ಚಿನ ಹಣ ಇದ್ದಾಗ ಸಾಲದ ಮೊತ್ತವನ್ನು ಅವಧಿಗೆ ಮುನ್ನವೇ ಮರುಪಾವತಿಸಬಹುದು. ಒಂದು ವೇಳೆ ಮತ್ತೆ ಹಣದ ಅಗತ್ಯ ಕಂಡುಬಂದಲ್ಲಿ ಪಾವತಿಸಿದ ಮೊತ್ತವನ್ನು ಪಡೆಯಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ