ಆ್ಯಪ್ನಗರ

ತಿಂಗಳಾಂತ್ಯಕ್ಕೆ ಮೋದಿ-ಷರೀಫ್ ಭೇಟಿ?

ಅಮೆರಿಕದಲ್ಲಿ ಮಾರ್ಚ್ 31ರಿಂದ ಆರಂಭವಾಗಲಿರುವ ‘ಪರಮಾಣು ಭದ್ರತಾ ಶೃಂಗಸಭೆಯ’ ವೇಳೆ, ಪಾಕ್ ಪಿಎಂ ನವಾಜ್ ಷರೀಫ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.

ಏಜೆನ್ಸೀಸ್ 13 Mar 2016, 4:59 am
ವಾಷಿಂಗ್ಟನ್: ಅಮೆರಿಕದಲ್ಲಿ ಮಾರ್ಚ್ 31ರಿಂದ ಆರಂಭವಾಗಲಿರುವ ‘ಪರಮಾಣು ಭದ್ರತಾ ಶೃಂಗಸಭೆಯ’ ವೇಳೆ, ಪಾಕ್ ಪಿಎಂ ನವಾಜ್ ಷರೀಫ್ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡುವ ಸಾಧ್ಯತೆಯಿದೆ.
Vijaya Karnataka Web modi sharif meeting month
ತಿಂಗಳಾಂತ್ಯಕ್ಕೆ ಮೋದಿ-ಷರೀಫ್ ಭೇಟಿ?


‘‘ಶೃಂಗಸಭೆಯ ನೇಪಥ್ಯದಲ್ಲಿ ಉಭಯ ನಾಯಕರೂ ಭೇಟಿ ಮಾಡುವ ಸಾಧ್ಯತೆ ಇದೆ. ಅವರಿಬ್ಬರೂ ಪರಸ್ಪರ ಚರ್ಚೆ ನಡೆಸುವ ಸಂಭವವೂ ಇದೆ. ಆದರೆ, ಪೂರ್ವ ನಿಗದಿತ ಸಮಾಲೋಚನೆ ಬಗ್ಗೆ ಖಾತರಿಪಡಿಸಲು ಸಾಧ್ಯವಿಲ್ಲ. ಪರಿಸ್ಥಿತಿಗಳನ್ನು ಆಧರಿಸಿ ಅದು ತೀರ್ಮಾನವಾಗಲಿದೆ,’’ ಎಂದು ಪಾಕ್ ಪ್ರಧಾನಿಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಹೇಳಿದ್ದಾರೆ.

ಪ್ರಸ್ತುತ ಅಜೀಜ್ ಅವರು 6ನೇ ‘ಅಮೆರಿಕ-ಪಾಕ್ ರಕ್ಷಣಾ ಮಾತುಕತೆ’ಯಲ್ಲಿ ವಾಷಿಂಗ್ಟನ್ ಪ್ರವಾಸದಲ್ಲಿದ್ದಾರೆ.

ಒಬಾಮಾ ಅವರ ಆಹ್ವಾನದ ಮೇರೆಗೆ ಪಾಕ್ ಪ್ರಧಾನಿ ಷರೀಫ್ ಮಾರ್ಚ್ 31 ಹಾಗೂ ಏಪ್ರಿಲ್ 1ರಂದು ನಡೆಯಲಿರುವ ‘ಪರಮಾಣು ಭದ್ರತಾ ಶೃಂಗಸಭೆ’ಯಲ್ಲಿ ಭಾಗವಹಿಸಲಿದ್ದಾರೆ.

ಈ ಶೃಂಗಸಭೆಗೆ ಭಾರತದ ಪ್ರಧಾನಿ ಮೋದಿ ಅವರಿಗೂ ಆಹ್ವಾನ ನೀಡಲಾಗಿದ್ದು, ಇನ್ನೂ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ