ಆ್ಯಪ್ನಗರ

San Antonio: ಟೆಕ್ಸಾಸ್‌ ದುರಂತ: ರೈಲ್ವೆ ಟ್ರ್ಯಾಕ್ ಪಕ್ಕ ನಿಲ್ಲಿಸಿದ್ದ ಟ್ರಕ್‌ನಲ್ಲಿ ಕನಿಷ್ಠ 46 ಶವ ಪತ್ತೆ

Migrants Dies In San Antonio: ಅಮೆರಿಕದ ಸ್ಯಾನ್ ಆಂಟೋನಿಯೋ ನಗರದ ಹೊರವಲಯದಲ್ಲಿನ ರೈಲ್ವೆ ಹಳಿಯೊಂದರ ಪಕ್ಕದಲ್ಲಿ ನಿಲ್ಲಿಸಿದ್ದ ಬೃಹತ್ ಟ್ರಕ್‌ನಲ್ಲಿ ಮೆಕ್ಸಿಕೋ ಮೂಲಕ ಕಳ್ಳಸಾಗಣೆಯಾಗುತ್ತಿದ್ದ ಕನಿಷ್ಠ 46 ವಲಸಿಗರ ಮೃತದೇಹಗಳು ಪತ್ತೆಯಾಗಿವೆ.

Edited byಅಮಿತ್ ಎಂ.ಎಸ್ | Vijaya Karnataka Web 28 Jun 2022, 9:55 am

ಹೈಲೈಟ್ಸ್‌:

  • ಅಮೆರಿಕದ ಸ್ಯಾನ್ ಆಂಟೋನಿಯೋ ನಗರದಲ್ಲಿ ಸೋಮವಾರ ಘಟನೆ
  • ರೈಲ್ವೆ ಹಳಿ ಪಕ್ಕ ನಿಲ್ಲಿಸಿದ್ದ ಬೃಹತ್ ಟ್ರಕ್ ಒಳಗೆ 46 ವಲಸಿಗರ ಶವ
  • ಮೆಕ್ಸಿಕೋ ಗಡಿ ಮೂಲಕ ಅಮೆರಿಕಕ್ಕೆ ಕಳ್ಳಸಾಗಣೆಯಾಗುತ್ತಿದ್ದ ವಲಸಿಗರು
  • ವಿಪರೀತ ಬಿಸಿಲು ಮತ್ತು ಬಳಲಿಕೆಯಿಂದ ಜನರು ಮೃತಪಟ್ಟಿರುವ ಶಂಕೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web more than 40 dead bodies found in truck parked next to rail tracks on us city outskirts
San Antonio: ಟೆಕ್ಸಾಸ್‌ ದುರಂತ: ರೈಲ್ವೆ ಟ್ರ್ಯಾಕ್ ಪಕ್ಕ ನಿಲ್ಲಿಸಿದ್ದ ಟ್ರಕ್‌ನಲ್ಲಿ ಕನಿಷ್ಠ 46 ಶವ ಪತ್ತೆ
ವಾಷಿಂಗ್ಟನ್: ಅಮೆರಿಕದ ಟೆಕ್ಸಾಸ್‌ನ ಸ್ಯಾನ್ ಆಂಟೋನಿಯೋದಲ್ಲಿ ಸೋಮವಾರ ಟ್ರ್ಯಾಕ್ಟರ್ ಟ್ರೈಲರ್‌ನ ಒಳಗೆ ಕನಿಷ್ಠ 46 ಶವಗಳು ಪತ್ತೆಯಾಗಿವೆ ಎಂದು ಕಾನೂನು ಜಾರಿ ಅಧಿಕಾರಿಗಳು ತಿಳಿಸಿದ್ದಾರೆ. ಮೃತರೆಲ್ಲರೂ ವಲಸಿಗರಾಗಿದ್ದು, ಮೆಕ್ಸಿಕೋದಿಂದ ಅಮೆರಿಕಕ್ಕೆ ಟ್ರಕ್‌ಗಳ ಒಳಗೆ ಕೂರಿಸಿ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎನ್ನಲಾಗಿದೆ.
ಟ್ರಕ್ ಒಂದರ ಒಳಗೆ 46 ಜನರ ಮೃತದೇಹ ಸಿಕ್ಕಿವೆ ಎಂದು ಸ್ಯಾನ್ ಆಂಟೋನಿಯೋದ ಕೆಸ್ಯಾಟ್ ಟೆಲಿವಿಷನ್, ಸ್ಯಾನ್ ಆಂಟೋನಿಯೋ ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ವರದಿ ಮಾಡಿದೆ. ಇತರರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಗರದ ದಕ್ಷಿಣ ಭಾಗದ ಹೊರವಲಯದಲ್ಲಿರುವ ದೂರದ ಪ್ರದೇಶದಲ್ಲಿನ ರೈಲ್‌ರೋಡ್ ಹಳಿಯ ಪಕ್ಕದಲ್ಲಿ ಈ ಟ್ರಕ್ ಪತ್ತೆಯಾಗಿದೆ.
ಕೆನಡಾ- ಅಮೆರಿಕ ಗಡಿಯಲ್ಲಿ ಹೆಪ್ಪುಗಟ್ಟಿ ಮೃತಪಟ್ಟ ಭಾರತೀಯ ಕುಟುಂಬದ ಗುರುತು ಪತ್ತೆ

ಬೃಹತ್ ಟ್ರಕ್‌ನ ಸುತ್ತಲೂ ಪೊಲೀಸ್ ವಾಹನಗಳು ಮತ್ತು ಆಂಬುಲೆನ್ಸ್‌ಗಳು ನಿಂತಿರುವುದನ್ನು ಕೆಸ್ಯಾಟ್ ವರದಿಗಾರ ಟ್ವೀಟ್ ಮಾಡಿರುವ ಫೋಟೊಗಳು ತೋರಿಸಿವೆ.

ಮೃತರೆಲ್ಲರೂ ವಲಸಿಗರಾಗಿದ್ದಾರೆ ಎಂದು ನಗರದ ಅಗ್ನಿಶಾಮಕ ಇಲಾಖೆ ತಿಳಿಸಿದೆ. ಅಮೆರಿಕ- ಮೆಕ್ಸಿಕೋ ಗಡಿಯಲ್ಲಿ ಮಾನವ ಕಳ್ಳಸಾಗಣೆಯ ಇತ್ತೀಚಿನ ಅತ್ಯಂತ ಭಯಾನಕ ಘಟನೆಗಳಲ್ಲಿ ಒಂದಾಗಿದೆ. ವಿಪರೀತ ಬಿಸಿಲಿನ ಝಳ ಮತ್ತು ಬಳಲಿಕೆಯಿಂದ ಮೃತರಾದ 16 ಮಂದಿಯ ಶವಗಳು ಟ್ರೈಲರ್ ಒಳಗೆ ಪತ್ತೆಯಾಗಿವೆ. ಇವರಲ್ಲಿ ನಾಲ್ವರು ಅಪ್ರಾಪ್ತ ವಯಸ್ಕರು ಇದ್ದಾರೆ. ಘಟನೆಯ ಸಂಬಂಧ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆನಡಾದಲ್ಲಿ ಚಳಿಗೆ ನಾಲ್ವರು ಭಾರತೀಯರ ಬಲಿ: ಗುಜರಾತ್‌ನಲ್ಲಿ ಆತಂಕ

ಟ್ರಕ್‌ನಲ್ಲಿ ವಲಸಿಗರು ಉಸಿರುಗಟ್ಟಿ ಮೃತರಾಗಿರುವುದು 'ಟೆಕ್ಸಾಸ್‌ನಲ್ಲಿನ ದುರಂತ' ಎಂದು ಮೆಕ್ಸಿಕೋ ವಿದೇಶಾಂಗ ಸಚಿವ ಮಾರ್ಕೆಲೋ ಹೇಳಿದ್ದಾರೆ. ಈ ಸ್ಥಳಕ್ಕೆ ಸ್ಥಳೀಯ ಕಾನ್ಸುಲೇಟ್ ಅಧಿಕಾರಿಗಳು ತೆರಳುತ್ತಿದ್ದಾರೆ. ಮೃತಪಟ್ಟವರು ಯಾವ ದೇಶಗಳಿಗೆ ಸೇರಿದವರು ಎನ್ನುವುದು ಖಚಿತವಾಗಿಲ್ಲ.

ಇತ್ತೀಚಿನ ಕೆಲವು ತಿಂಗಳಿನಿಂದ ಅಮೆರಿಕ- ಮೆಕ್ಸಿಕೋ ಗಡಿಯಲ್ಲಿ ದಾಖಲೆ ಪ್ರಮಾಣದ ವಲಸಿಗರ ಕಳ್ಳಸಾಗಣೆ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ವಲಸೆ ನೀತಿಗಳ ವಿರುದ್ಧ ಇದು ಟೀಕೆಗಳಿಗೆ ಕಾರಣವಾಗಿದೆ.
ಸರಣಿ ಹತ್ಯೆಗಳ ಬಳಿಕ ಕೊನೆಗೂ ಎಚ್ಚೆತ್ತ ಅಮೆರಿಕ: ಬಂದೂಕು ನಿಯಂತ್ರಣ ಮಸೂದೆಗೆ ಜೋ ಬೈಡನ್ ಸಹಿ

ಮೆಕ್ಸಿಕನ್ ಗಡಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ಸ್ಯಾನ್ ಆಂಟೊನಿಯೋದಲ್ಲಿ ಸೋಮವಾರ ತಾಪಮಾನ 103 ಡಿಗ್ರಿ ಫ್ಯಾರನ್‌ಹೀಟ್ (39.4 ಡಿಗ್ರಿ ಸೆಲ್ಸಿಯಸ್) ತಲುಪಿತ್ತು.

2017ರ ಜುಲೈನಲ್ಲಿ ವಾಲ್ ಮಾರ್ಟ್ ಪಾರ್ಕಿಂಗ್ ಸ್ಥಳದಲ್ಲಿ ಟ್ರ್ಯಾಕ್ಟರ್- ಟ್ರೈಲರ್‌ನ ಒಳಗೆ ಸಾಗಣೆ ಮಾಡುತ್ತಿದ್ದ 10 ವಲಸಿಗರ ಶವಗಳನ್ನು ಸ್ಯಾನ್ ಆಂಟೋನಿಯೋ ಪೊಲೀಸರು ಪತ್ತೆ ಮಾಡಿದ್ದರು.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ