ಆ್ಯಪ್ನಗರ

‘ಸಿಎಎ ವಿರೋಧಿ’ ಮಹಥಿರ್‌ಗೆ ನಿರಾಸೆ, ಮಲೇಷ್ಯಾ ನೂತನ ಪ್ರಧಾನಿಯಾಗಿ ಯಾಸಿನ್‌ ನೇಮಕ

ಶನಿವಾರ ಬೆಳಿಗ್ಗೆ 94 ವರ್ಷದ ಮಹಥಿರ್‌, ತಮಗೆ ಹಳೆ ವೈರಿ ಅನ್ವರ್‌ ಇಬ್ರಾಹಿಂ ಬೆಂಬಲ ಸಿಕ್ಕಿದೆ ಎಂದು ತಿಳಿಸಿದ್ದರು. ಹೀಗಾಗಿ ಮತ್ತೆ ಮಹಥಿರ್‌ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

TIMESOFINDIA.COM 29 Feb 2020, 6:25 pm

ಕೌಲಾಲಂಪುರ್‌: ರಾಜಕೀಯ ಪ್ರಕ್ಷುಬ್ಧತೆಯನ್ನು ಎದುರಿಸುತ್ತಿದ್ದ ಮಲೇಷ್ಯಾದ ನೂತನ ಪ್ರಧಾನಿಯಾಗಿ ಮುಹಿದ್ದೀನ್‌ ಯಾಸಿನ್‌ ನೇಮಕವಾಗಿದ್ದಾರೆ. ಈ ಮೂಲಕ ಮತ್ತೆ ಅಧಿಕಾರಕ್ಕೇರುವ ಮಹಥಿರ್‌ ಮೊಹಮ್ಮದ್‌ ಪ್ರಯತ್ನ ವಿಫಲವಾಗಿದೆ.
Vijaya Karnataka Web Muhyiddin Yassin


ಮಹಥಿರ್‌ ಅವರ ಬೆರ್ಸಾಟು ಪಕ್ಷದ ಅಧ್ಯಕ್ಷರಾಗಿರುವ ಮುಹಿದ್ದೀನ್‌ ಯುನೈಟೆಡ್‌ ಮಲಯ್ಸ್‌ ನ್ಯಾಷನಲ್‌ ಆರ್ಗನೈಸೇಷನಲ್‌ನ ಬೆಂಬಲದೊಂದಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಲಿದ್ದಾರೆ. ಇದೇ ಒಕ್ಕೂಟ 2018ರ ಚುನಾವಣೆಯಲ್ಲಿ ಮಹಥಿರ್‌ ನೇತೃತ್ವದ ಮೈತ್ರಿಕೂಟ ಪಕಟನ್‌ ಹರಪನ್‌ ವಿರುದ್ಧ ಸೋಲುಂಡಿತ್ತು.

ಕಳೆದ ವಾರ ಮಹಥಿರ್‌ ಮಲೇಷ್ಯಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಪಕಟನ್‌ ಹರಪ್ಪನ್‌ ಮೈತ್ರಿಕೂಟ ಇನ್ನೋರ್ವ ಪ್ರಭಾವಿ ನಾಯಕ ಅನ್ವರ್‌ ಇಬ್ರಾಹಿಂರನ್ನು ಬೆಂಬಲಿಸಲು ಮುಂದಾಗಿತ್ತು. ಅವರು ಇನ್ನೇನು ಅಧ್ಯಕ್ಷರಾಗಲಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು.

ಸಿಎಎ, ಕಾಶ್ಮೀರ ವಿಚಾರದಲ್ಲಿ ಮೋದಿ ಟೀಕಿಸಿದ್ದ ಮಲೇಷ್ಯಾ ಪ್ರಧಾನಿ ಅಚ್ಚರಿಯ ರಾಜೀನಾಮೆ

ಇದರ ನಡುವೆ ಶನಿವಾರ ಬೆಳಿಗ್ಗೆ 94 ವರ್ಷದ ಮಹಥಿರ್‌, ತಮಗೆ ಹಳೆ ವೈರಿ ಅನ್ವರ್‌ ಇಬ್ರಾಹಿಂ ಬೆಂಬಲ ಸಿಕ್ಕಿದೆ ಎಂದು ತಿಳಿಸಿದ್ದರು. ಹೀಗಾಗಿ ಮತ್ತೆ ಮಹಥಿರ್‌ ಅಧ್ಯಕ್ಷರಾಗಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.

ಇದೀಗ ಅಲ್ಲಿನ ರಾಜ ಸುಲ್ತಾನ್‌ ಅಬ್ದುಲ್ಲಾ ಸುಲ್ತಾನ್‌ ಅಹಮದ್‌ ಶಾ ಮಾಜಿ ಆಂತರಿಕ ಭದ್ರತೆ ಸಚಿವ ಮುಹಿದ್ದೀನ್‌ ಯಾಸಿನ್‌ ಮುಂದಿನ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಿಲಿದ್ದಾರೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಎಲ್ಲಾ ಪಕ್ಷಗಳ ನಾಯಕರು ಮತ್ತು ಪಕ್ಷೇತರ ಅಭ್ಯರ್ಥಿಗಳು ಮನವಿ ಮೇರೆಗೆ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ. 72 ವರ್ಷದ ಮುಹಿದ್ದೀನ್‌ ಈ ಹಿಂದೆ ನಜೀಬ್‌ ರಜಾಕ್‌ ಸರಕಾರದಲ್ಲಿ ಉಪ ಪ್ರಧಾನಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ