ಆ್ಯಪ್ನಗರ

ಮುಸ್ಲಿಂ ವಿದ್ಯಾರ್ಥಿನಿಯ ‘ಹಿಜಾಬ್‌’ ಕಿತ್ತೆಸೆದ ವಿದ್ಯಾರ್ಥಿ

ಶಾಲೆಯಲ್ಲಿ ಸಹಪಾಠಿಗಳೆದುರೆ ವಿದ್ಯಾರ್ಥಿಯೊಬ್ಬ ಮುಸ್ಲಿಂ ವಿದ್ಯಾರ್ಥಿನಿಯ ಹಿಜಾಬ್‌(ತಲೆವಸ್ತ್ರ) ಕಿತ್ತೆಸೆದು ಆಕೆಯ ಕೂದಲನ್ನು ಎಳೆದು ಅವಮಾನಿಸಿದ ಘಟನೆ ಮಿನ್ನೆಸೊಟಾದಲ್ಲಿ ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ 17 Nov 2016, 1:06 am
ಶಿಕಾಗೊ: ಶಾಲೆಯಲ್ಲಿ ಸಹಪಾಠಿಗಳೆದುರೆ ವಿದ್ಯಾರ್ಥಿಯೊಬ್ಬ ಮುಸ್ಲಿಂ ವಿದ್ಯಾರ್ಥಿನಿಯ ಹಿಜಾಬ್‌(ತಲೆವಸ್ತ್ರ) ಕಿತ್ತೆಸೆದು ಆಕೆಯ ಕೂದಲನ್ನು ಎಳೆದು ಅವಮಾನಿಸಿದ ಘಟನೆ ಮಿನ್ನೆಸೊಟಾದಲ್ಲಿ ವರದಿಯಾಗಿದೆ.
Vijaya Karnataka Web muslim girls hijab ripped off in front of students in us
ಮುಸ್ಲಿಂ ವಿದ್ಯಾರ್ಥಿನಿಯ ‘ಹಿಜಾಬ್‌’ ಕಿತ್ತೆಸೆದ ವಿದ್ಯಾರ್ಥಿ


ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಅಮೆರಿಕಾದಾದ್ಯಂತ ಮುಸ್ಲಿಮರು, ಮೆಕ್ಸಿಕೊ ಪ್ರಜೆಗಳ ಮೇಲೆ ದಾಳಿ ಮತ್ತು ಬೆದರಿಕೆ ಪ್ರಕರಣಗಳು ಹೆಚ್ಚಾಗಿದ್ದು, ಮಿನ್ನೆಸೊಟಾದ ಕೂನ್‌ ರಾರ‍ಯಪಿಡ್ಸ್‌ನ ನಾರ್ಥಡೆಲ್‌ ಮಿಡಲ್‌ ಸ್ಕೂಲ್‌ನಲ್ಲಿ ಘಟನೆ ನಡೆದಿದೆ.

ಅಮೆರಿಕನ್‌ ಇಸ್ಲಾಮಿಕ್‌ ರಿಲೆಷನ್‌ ಸಂಘಟನೆ (ಸಿಎಐಆರ್‌)ಘಟನೆಯನ್ನು ಖಂಡಿಸಿದ್ದು ಈ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದೆ. ಶುಕ್ರವಾರ ಘಟನೆ ನಡೆದಿದ್ದರೂ, ಆಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಂಘಟನೆ ಆಪಾದಿಸಿದೆ.

'' ಧರ್ಮ ಮತ್ತು ನಂಬಿಕೆಯನ್ನು ಪರಿಗಣಿಸದೇ ಎಲ್ಲ ವಿದ್ಯಾರ್ಥಿಗಳಿಗೂ ಸುರಕ್ಷಿತ ಕಲಿಕಾ ವಾತಾವರಣವನ್ನು ಶಾಲೆಗಳು ಸೃಷ್ಟಿಸಬೇಕು,'' ಎಂದಿರುವ ಸಂಘನೆಯ ಕಾರ್ಯಕಾರಿ ನಿರ್ದೇಶಕ ಜಲ್ಯಾನಿ ಹುಸೇನ್‌, ಆಕ್ರಮಣಕಾರ ಇತರ ಮುಸ್ಲಿಂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿದ್ದ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾಲಾ ಆಡಳಿತ ಮಂಡಳಿ ಮುಸ್ಲಿಂ ವಿದ್ಯಾರ್ಥಿನಿಯ ಮೇಲಿನ ದಾಳಿ ಅಸಮಂಜಸ ಎಂದು ಹೇಳಿದೆ. ಇದು ಯಾವುದೇ ಜನಾಂಗೀಯ ದ್ವೇಷದಿಂದ ಪ್ರೇರಿತವಲ್ಲದ ಪ್ರತ್ಯೇಕ ಘಟನೆ ಎಂದೂ ಅದು ವಾದಿಸಿದೆ.

ಚುನಾವಣೆಯಲ್ಲಿ ಟ್ರಂಪ್‌ ಗೆಲುವು ಸಾಧಿಸುತ್ತಿದ್ದಂತೆ, ಮಿನ್ನೆಸೊಟಾದ ಶಾಲೆಗಳಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಮಾಪ್ಲೆ ಹೈಸ್ಕೂಲ್‌ನ್ಲಲಿ ಜನಾಂಗೀಯ ದ್ವೇಷ ಸಾರುವ ಬರಹಗಳು ಕಂಡುಬಂದಿದ್ದವು. ಅದಲ್ಲದೆ ದೇಶಾದ್ಯಂತ ಮುಸ್ಲಿಮರ ವಿರುದ್ಧ ಅಸಹನೆ ಭುಗಿಲೆದ್ದಿದ್ದು, ಕಳೆದವಾರ ಹಿಜಾಬ್‌ ಧರಿಸಿದ್ದ ಮಿಚಿಗನ್‌ ಯುನಿವರ್ಸಿಟಿಯ ವಿದ್ಯಾರ್ಥಿನಿಗೆ ಆಗಂತುಕನೊಬ್ಬ ಸ್ಕಾರ್ಫ್‌ ತೆಗೆಯದಿದ್ದರೆ ಬೆಂಕಿ ಹಚ್ಚುವದಾಗಿ ಬೆದರಿಕೆ ಹಾಕಿದ್ದ. ಜಾರ್ಜಿಯಾದ ಶಿಕ್ಷಕಿಯೊಬ್ಬರಿಗೆ 'ನಿಮ್ಮ ತಲೆ ವಸ್ತ್ರದಿಂದ ನೇಣು ಬಿಗಿದುಕೊಳ್ಳಿ' ಎಂಬ ದ್ವೇಷಪತ್ರ ಆಕೆಯ ತರಗತಿಯಲ್ಲೆ ದೊರಕಿತ್ತು.

ನಿಯೋಜಿತ ಅಧ್ಯಕ್ಷರ ಗೆಲುವು ದೇಶಾದ್ಯಂತ ಇಸ್ಲಾಮೋಫೋಬಿಯಾ ಹುಟ್ಟುಹಾಕಿದೆ ಎಂದು ಸಿಎಐಆರ್‌ ಅಭಿಪ್ರಾಯ ಪಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ