ಆ್ಯಪ್ನಗರ

ಬಿಗ್ ಬ್ಯಾಂಗ್ ಬಳಿಕ ಮತ್ತೊಂದು ಮಹಾ ಸ್ಫೋಟ: ಬಲ್ಲವರ‍್ಯಾರು ಬ್ರಹ್ಮಾಂಡದ ಆಟ?

ಬಿಗ್ ಬ್ಯಾಂಗ್ ಬಳಿಕ ನಮ್ಮ ಬ್ರಹ್ಮಾಂಡದಲ್ಲಿ ಮತ್ತೆಂದೂ ಸ್ಫೋಟ ಸಂಭವಿಸಿಯೇ ಇಲ್ಲವೇ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಬಿಗ್ ಬ್ಯಾಂಗ್ ಬಳಿಕ ಈ ಅನಂತ ವಿಶ್ವದಲ್ಲಿ ಮತ್ತೊಂದು ಭಾರೀ ಸ್ಫೋಟ ಸಂಭವಿಸಿರುವುದು ದೃಢಪಟ್ಟಿದೆ. ಭೂಮಿಯಿಂದ ಸುಮಾರು 390 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರುವ ಬೃಹತ್ ಕಪ್ಪುಕುಳಿ(ಬ್ಲ್ಯಾಕ್ ಹೋಲ್) ವಿಸ್ಫೋಟದಿಂದಾಗಿ ಬ್ರಹ್ಮಾಂಡದಲ್ಲಿ ಅಗಾಧ ಪ್ರಮಾಣದ ಶಕ್ತಿಯ ಹರಿಯುವಿಕೆಯನ್ನು ಖಗೋಳ ವಿಜ್ಞಾನಿಗಳು ಗುರುತಿಸಿದ್ದಾರೆ.

Vijaya Karnataka Web 1 Mar 2020, 2:31 pm
ವಾಷಿಂಗ್ಟನ್: ವಿಶ್ವ ರಚನೆಗೆ ಮೂಲ ಕಾರಣವಾಗಿರುವ ಬಿಗ್ ಬ್ಯಾಂಗ್ ಅಥವಾ ಮಹಾ ವಿಸ್ಫೋಟದ ಕುರಿತು ಖಗೋಳ ವಿಜ್ಞಾನಿಗಳು ಎಡಬಿಡದೇ ಅಧ್ಯಯನ ನಡೆಸಿದ್ದಾರೆ. ಬ್ರಹ್ಮಾಂಡದ ಉಗಮಕ್ಕೆ ಕಾರಣವಾಗಿರರುವ ಈ ಮಹಾ ವಿಸ್ಫೋಟದ ಅನುಕರಣೆಯನ್ನೂ ಭೂಮಿ ಮೇಲೆ ಈಗಾಗಲೇ ಮಾಡಿಯಾಗಿದೆ.
Vijaya Karnataka Web Big Bang
Big Bang Explosion


ಆದರೆ ಬಿಗ್ ಬ್ಯಾಂಗ್ ಬಳಿಕ ನಮ್ಮ ಬ್ರಹ್ಮಾಂಡದಲ್ಲಿ ಮತ್ತೆಂದೂ ಸ್ಫೋಟ ಸಂಭವಿಸಿಯೇ ಇಲ್ಲವೇ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ. ಬಿಗ್ ಬ್ಯಾಂಗ್ ಬಳಿಕ ಈ ಅನಂತ ವಿಶ್ವದಲ್ಲಿ ಮತ್ತೊಂದು ಭಾರೀ ಸ್ಫೋಟ ಸಂಭವಿಸಿರುವುದು ದೃಢಪಟ್ಟಿದೆ.

ಭೂಮಿಯಿಂದ ಸುಮಾರು 390 ಮಿಲಿಯನ್ ಜ್ಯೋತಿರ್ವರ್ಷ ದೂರದಲ್ಲಿರುವ ಬೃಹತ್ ಕಪ್ಪುಕುಳಿ(ಬ್ಲ್ಯಾಕ್ ಹೋಲ್) ವಿಸ್ಫೋಟದಿಂದಾಗಿ ಬ್ರಹ್ಮಾಂಡದಲ್ಲಿ ಅಗಾಧ ಪ್ರಮಾಣದ ಶಕ್ತಿಯ ಹರಿಯುವಿಕೆಯನ್ನು ಖಗೋಳ ವಿಜ್ಞಾನಿಗಳು ಗುರುತಿಸಿದ್ದಾರೆ.

ವಸುಧೆಯ ಮಡಿಲಿಗೆ ಮತ್ತೊಂದು ಚಂದಿರ: 'ಮಿನಿ ಮೂನ್' ಎಂಬ ಕುತೂಹಲದ ಆಗರ!

ಒಫಿಯುಚಸ್ ಕ್ಲಸ್ಟರ್ ಎಂದು ಕರೆಯಲ್ಪಡುವ ಗ್ಯಾಲಕ್ಸಿಗಳ ಸಮೂಹದಲ್ಲಿ ಈ ಮಹಾ ವಿಸ್ಫೋಟ ಸಂಭವಿಸಿದ್ದು, ಈ ಹಿಂದನ ಸ್ಫೋಟದ ಐದು ಪಟ್ಟು ಅಧಿಕ ಶಕ್ತಿಯನ್ನು ಹೊರಸೂಸಿದೆ ಎಂದು ಹೇಳಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಅಂತಾರಾಷ್ಟ್ರೀಯ ರೆಡಿಯೋ ಸಂಶೋಧನಾ ಕೇಂದ್ರದ ಖಗೋಳ ವಿಜ್ಞಾನಿ ಮೆಲೆನಿ ಜಾನ್ಸನ್ ಹಾಲಿಟ್, ಗ್ಯಾಲಕ್ಸಿಗಳಲ್ಲಿ ನಕ್ಷತ್ರಗಳು ಹಾಗೂ ಕಪ್ಪುಕುಳಿಳ ಸ್ಫೋಟ ಸಾಮಾನ್ಯ ಸಂಗತಿಯಾದರೂ ಈ ಬಾರಿ ಗುರುತಿಸಲಾದ ಸ್ಫೋಟ ಊಹೆಗೂ ನಿಲುಕದಷ್ಟು ಅಗಾಧವಾಗಿದೆ ಎಂದು ಹೇಳಿದ್ದಾರೆ.

15ಕ್ಕೂ ಹೆಚ್ಚು ಹಾಲುಹಾದಿ(ಮಿಲ್ಕಿ ವೇ) ಗ್ಯಾಲಕ್ಸಿಗಳನ್ನು ಸೇರಿಸಬಹುದಾದಷ್ಟು ಅಗಾಧ ಪ್ರದೇಶದಲ್ಲಿ ಈ ಮಹಾ ವಿಸ್ಫೋಟ ಸಂಭವಿಸಿದ್ದು, ಇದರಿಂದಲೇ ಇದು ಹೊರಸೂಸಿರಬಹುದಾದ ಶಕ್ತಿಯ ಪ್ರಮಾಣವನ್ನು ಅಳೆಯಬಹುದು ಎಂದು ಖಗೋಳ ವಿಜ್ಞಾನಿಗಳು ಹೇಳಿದ್ದಾರೆ.

ಮಂಗಳ ಗ್ರಹದಲ್ಲೂ ಭೂಕಂಪ: ನೆಲ ನಡುಗಿಸಲು ತೋರದು ಅನುಕಂಪ!

2016ರಲ್ಲೇ ನಾಸಾದ ಚಂದ್ರ ಆಬ್ಸರ್ವೇಟರಿ ಈ ಮಹಾ ವಿಸ್ಫೋಟದ ಕುರುಹನ್ನು ಪತ್ತೆ ಮಡಿತ್ತು. ಬಳಿಕ ನೆದ ಸುದೀರ್ಘ ಸಂಶೋಧನೆಯಲ್ಲಿ ಬಿಗ್ ಬ್ಯಾಂಗ್ ನಂತರದ ಮಹಾ ವಿಸ್ಫೋಟದ ಕುರಿತು ಖಚಿತ ಮಾಹಿತಿ ಲಭಿಸಿದೆ ಎಂದು ನಾಸಾ ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ