ಆ್ಯಪ್ನಗರ

ಕೊರೊನಾ ವೈರಸ್ ಗದ್ದಲದಲ್ಲಿ ಮರೆತ ನಿಯೋವಿಸ್ ಧೂಮಕೇತುವಿನ ಆಗಮನ ನೆನಪಿಸಿದ ನಾಸಾ!

ಇತ್ತೀಚಿಗೆ ಸೌರ ಮಂಡಲಕ್ಕೆ ಆಗಮಿಸಿ ಸೂರ್ಯನನ್ನು ಸಂದರ್ಶಿಸಿರುವ C/2020 F3 ನಿಯೋವಿಸ್ ಧೂಮಕೇತುವಿನ ಕುರಿತು ನಾಸಾ ರೋಚಕ ಸಂಗತಿಗಳನ್ನು ಹೊರಗೆಡವಿದೆ. ​​ಕಳೆದ ಜುಲೈ 3ರಂದೇ ಸೂರ್ಯನನ್ನು ಸುತ್ತು ಹಾಕಿ ಮರಳಿ ಸೌರ ಮಂಡಲವನ್ನು ದಾಟಲು ಅಣಿಯಾಗಿರುವ C/2020 F3 ಧೂಮಕೇತು, ಮುಂಬರುವ ಆಗಸ್ಟ್‌ನಲ್ಲಿ ಭೂ ಕಕ್ಷೆಯನ್ನು ಹಾದು ಹೋಗಲಿದೆ.

Vijaya Karnataka Web 9 Jul 2020, 6:39 pm
ವಾಷಿಂಗ್ಟನ್: ಜಗತ್ತು ಈಗ ಕೊರೊನಾ ವೈರಸ್ ಹಾವಳಿಯ ಕುರಿತಾಗಿಯೇ ಚರ್ಚೆ ನಡೆಸುತ್ತಿದೆ. ಇಡೀ ವಿಶ್ವದಾದ್ಯಂತ ವ್ಯಾಪಿಸಿರುವ ಕೊರೊನಾ ವೈರಸ್ ಮಾನವ ಸೃಷ್ಟಿಯ ಸಕಲ ಕ್ಷೇತ್ರಗಳ ಮೇಲೂ ದುಷ್ಪರಿಣಾಮ ಬೀರಿದೆ.
Vijaya Karnataka Web C 2020 F3 Comet
C 2020 F3 ಧೂಮಕೇತು


ಆದರೆ ಇದ್ಯಾವುದರ ಪರಿವೆ ಇಲ್ಲದಂತೆ ಬ್ರಹ್ಮಾಂಡ ಮಾತ್ರ ತನ್ನ ಎಂದಿನ ಕಾರ್ಯ ಕಲಾಪಗಳಲ್ಲಿ ಮಗ್ನವಾಗಿದೆ. ದಿಗಂತದಲ್ಲಿ ವಿಸ್ಮಯಕಾರಿ ಖಗೋಳ ಘಟನೆಗಳು ನಡೆಯುತ್ತಲೇ ಇದ್ದು, ಈ ಕುರಿತು ಖಗೋಳಕ್ಷೇತ್ರ ಗಮನವಿಟ್ಟಿದೆ.

ಅದರಂತೆ ಇತ್ತೀಚಿಗೆ ಸೌರ ಮಂಡಲಕ್ಕೆ ಆಗಮಿಸಿ ಸೂರ್ಯನನ್ನು ಸಂದರ್ಶಿಸಿರುವ C/2020 F3 ನಿಯೋವಿಸ್ ಧೂಮಕೇತುವಿನ ಕುರಿತು ನಾಸಾ ರೋಚಕ ಸಂಗತಿಗಳನ್ನು ಹೊರಗೆಡವಿದೆ.

ಸೂರ್ಯನ 10 ವರ್ಷ ಅವಧಿಯ ಕಾರ್ಯಚಟುವಟಿಕೆಯ ವಿಡಿಯೋ: ನಾಸಾ ಕಂಡಂತೆ ಭಾಸ್ಕರ!

ಬ್ರಹ್ಮಾಂಡದಿಂದ ನಮ್ಮ ಸೌರಮಂಡಲಕ್ಕೆ ಅತಿಥಿಯಾಗಿ ಆಗಮಿಸಿರುವ C/2020 F3 ಧೂಮಕೇತು ಸದ್ಯ ಬುಧ ಗ್ರಹದ ಕಕ್ಷೆ ದಾಟಿ ಸೂರ್ಯನನ್ನು ಸಂದರ್ಶಿಸಿದೆ. ಮಂಜುಗಡ್ಡೆಯಿಂದ ಕೂಡಿರುವ ಈ ಧೂಮಕೇತು ಸದ್ಯ ಸೂರ್ಯನ ಬೆಳಕಿನಿಂದ ಹೊಳೆಯುತ್ತಿದೆ.


ಕಳೆದ ಜುಲೈ 3ರಂದೇ ಸೂರ್ಯನನ್ನು ಸುತ್ತು ಹಾಕಿ ಮರಳಿ ಸೌರ ಮಂಡಲವನ್ನು ದಾಟಲು ಅಣಿಯಾಗಿರುವ C/2020 F3 ಧೂಮಕೇತು, ಮುಂಬರುವ ಆಗಸ್ಟ್‌ನಲ್ಲಿ ಮತ್ತೆ ಭೂ ಕಕ್ಷೆಯನ್ನು ಹಾದು ಹೋಗಲಿದೆ.

ಕಾಫಿಯನ್ನು ಹೋಲುವ ನಕ್ಷತ್ರಪುಂಜದ ಚಿತ್ರ ಬಿಡುಗಡೆ ಮಾಡಿದ ನಾಸಾ

ನಾಸಾ C/2020 F3 ಧೂಮಕೇತುವಿನ ಅಪರೂಪದ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಸೌರ ಮಂಡಲದ ಅಪರೂಪದ ಅತಿಥಿಯನ್ನು ಖಗೋಳ ಪ್ರಿಯರು ಕಣ್ತುಂಬಿಕೊಳ್ಳುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ