ಆ್ಯಪ್ನಗರ

ಚಂದ್ರನಲ್ಲಿ ಇಳಿಯಲಿದ್ದಾಳೆ ಈ ಮಹಿಳಾ ಗಗನಯಾತ್ರಿ!

ಕೆಲ ತಿಂಗಳ ಹಿಂದೆ ಮುಂದಿನ ಬಾರಿ ಚಂದ್ರನೆಡೆಗೆ ಮಹಿಳಾ ಗಗನಯಾತ್ರಿಯನ್ನು ಕಳುಹಿಸುವುದಾಗಿ ಹೇಳಿದ್ದ ನಾಸಾ, ಇದೀಗ ಈ ಮಾತನ್ನು ನಿಜಗೊಳಿಸಲು ಅಡಿಗಾಲಿಟ್ಟಿದೆ. ಚಂದ್ರನ ಮೇಲ್ಮೈಗೆ ಮಹಿಳೆಯರನ್ನು ಕಳುಹಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಾಸಾ ಪಾತ್ರವಾಗಲಿದೆ.

Indiatimes 15 May 2019, 4:43 pm
[This story originally published in Indiatimes.com on May 15,2019]
Vijaya Karnataka Web astronut


ನಾಸಾ ಸಂಸ್ಥೆ 2024ರಲ್ಲಿ ಚಂದ್ರನಲ್ಲಿಗೆ ಮಹಿಳಾ ಗಗನಯಾತ್ರಿಯನ್ನು ಕಳುಹಿಸಲಿದೆ.

ಕೆಲ ತಿಂಗಳ ಹಿಂದೆ ಮುಂದಿನ ಬಾರಿ ಚಂದ್ರನೆಡೆಗೆ ಮಹಿಳಾ ಗಗನಯಾತ್ರಿಯನ್ನು ಕಳುಹಿಸುವುದಾಗಿ ಹೇಳಿದ್ದ ನಾಸಾ, ಇದೀಗ ಈ ಮಾತನ್ನು ನಿಜಗೊಳಿಸಲು ಅಡಿಗಾಲಿಟ್ಟಿದೆ. ಚಂದ್ರನ ಮೇಲ್ಮೈಗೆ ಮಹಿಳೆಯರನ್ನು ಕಳುಹಿಸಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆಗೆ ನಾಸಾ ಪಾತ್ರವಾಗಲಿದೆ.

ಅಪೋಲೋ ಮೂಲಕ ವಿಶ್ವದಲ್ಲೇ ಮೊತ್ತ ಮೊದಲ ಬಾರಿಗೆ ಚಂದ್ರನಲ್ಲಿಗೆ ಹೆಜ್ಜೆ ಇಟ್ಟಿದ್ದ ಯೋಜನೆಯ ಬಳಿಕ ಇದೀಗ ಅರ್ಟಿಮಿಸ್‌ ಯೋಜನೆಯಗೆ ನಾಸಾ ಸಿದ್ಧತೆ ನಡೆಸಿದೆ. ಈ ಯೋಜನೆ ಮೂಲಕ ಮಹಿಳಾ ಗಗನಯಾತ್ರಿಯನ್ನು ಚಂದ್ರನ ಮೇಲೆ ಇಳಿಸಲು ಸಿದ್ಧತೆ ಆರಂಭಿಸಿದೆ. ಮೂಲಗಳ ಪ್ರಕಾರ ನಾಸಾದ ಗಗನಯಾತ್ರಿ ಅನ್ನಿ ಮೆಕ್ಲೇನ್‌ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.

50 ವರ್ಷಗಳ ಬಳಿಕ ಅಂದರೆ ಅಪೋಲೋ ಯೋಜನೆಯ ಬಳಿಕ ಮತ್ತೊಂದು ಮೈಲಿಗಲ್ಲಿಗೆ ಆರ್ಟೆಮಿಸ್‌ ಸಿದ್ಧವಾಗುತ್ತಿದೆ. ಎರಡನೇ ಬಾರಿಗೆ ಚಂದ್ರನ ಕಡೆಗೆ ಓರ್ವ ಪುರುಷ ಗಗನಯಾತ್ರಿ ಹಾಗೂ ಚಂದ್ರನಲ್ಲಿ ಕಾಲಿಡುತ್ತಿರುವ ಮೊದಲ ಮಹಿಳೆ ಇರಲಿದ್ದಾರೆ. ಇಬ್ಬರನ್ನು ಚಂದ್ರನಲ್ಲಿ ಕಳುಹಿಸಲು ಯೋಜನೆ ರೂಪಿಸಲಾಗಿದೆ. ಇದೊಂದು ಹೆಮ್ಮೆಯ ಸಂಗತಿ ಎಂದು ನಾಸಾ ಅಡ್ಮಿನಿಸ್ಟ್ರೇಟರ್‌ ಜಿಮ್‌ ಬ್ರೈಡೆಂನ್‌ಸ್ಟೈನ್‌ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಈ ಯೋಜನೆಗಾಗಿ ನಾಸಾ ವಿಶೇಷ ಕ್ರ್ಯು ಕ್ಯಾಪ್ಸುಲ್‌ ಹಾಗೂ ರಾಕೆಟ್‌ಗಳನ್ನು ಸಿದ್ಧಪಡಿಸುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತ ಅವಧಿಯಲ್ಲೇ ನಾಸಾ ಚಂದ್ರನ ಕಡೆಗೆ ಮಾನವ ಸಹಿತ ಯೋಜನೆ ಕೈಗೊಳ್ಳಲು ಆಗ್ರಹಿಸಲಾಗಿದೆ. ಈ ಸಂಬಂಧ ಯುಎಸ್‌ ಕಾಂಗ್ರೆಸ್‌ನಿಂದ ಅಗತ್ಯ ಯೋಜನಾ ಅನುಮತಿ, ಹಣಕಾಸು ಇತ್ಯಾದಿಗಳ ಬಗ್ಗೆ ಅನುಮತಿ ಸಿಗಬೇಕಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ