ಆ್ಯಪ್ನಗರ

ಷರೀಫ್‌, ಕುಟುಂಬ ಸದಸ್ಯರ ವಿದೇಶ ಪ್ರಯಾಣಕ್ಕೆ ನಿರ್ಬಂಧ

ಪನಾಮಾ ಪೇಪರ್ಸ್‌ ಹಗರಣದಲ್ಲಿ ಆರೋಪಿಗಳಾಗಿರುವ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರು ದೇಶ ಬಿಟ್ಟು ತೆರಳದಂತೆ ಶೀಘ್ರವೇ ನಿರ್ಬಂಧ

Vijaya Karnataka 19 Nov 2017, 8:48 am

ಇಸ್ಲಾಮಾಬಾದ್‌: ಪನಾಮಾ ಪೇಪರ್ಸ್‌ ಹಗರಣದಲ್ಲಿ ಆರೋಪಿಗಳಾಗಿರುವ ಪಾಕ್‌ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಅವರ ಕುಟುಂಬದ ನಾಲ್ವರು ಸದಸ್ಯರು ದೇಶ ಬಿಟ್ಟು ತೆರಳದಂತೆ ಶೀಘ್ರವೇ ನಿರ್ಬಂಧ ಹೇರಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

Vijaya Karnataka Web nawaz sharif family members may face travel restrictions
ಷರೀಫ್‌, ಕುಟುಂಬ ಸದಸ್ಯರ ವಿದೇಶ ಪ್ರಯಾಣಕ್ಕೆ ನಿರ್ಬಂಧ


ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಕಾವಲು ದಳವು, ಈ ಐದು ಮಂದಿಯ ಹೆಸರುಗಳನ್ನು, ನಿರ್ಗಮನ ನಿಯಂತ್ರಣ ಪಟ್ಟಿಯಲ್ಲಿ (ಇಸಿಎಲ್‌)ಸೇರ್ಪಡೆಗೊಳಿಸಲು ಮುಂದಾಗಿದೆಯೆಂದು ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.

67 ವರ್ಷದ ಷರೀಫ್‌ ಹಾಗೂ ಅವರ ಕುಟುಂಬಿಕರು ಲಂಡನ್ನಿನಲ್ಲಿ ಆಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಗುರಿಯಾಗಿದ್ದಾರೆ. ಅಘೋಷಿತ ಆದಾಯವನ್ನು ಹೊಂದಿದ ಆರೋಪದಲ್ಲಿ ಪಾಕ್‌ ಸುಪ್ರೀಂಕೋರ್ಟ್‌ ಷರೀಫ್‌ ಅವರನ್ನು ಅನರ್ಹಗೊಳಿಸಿದ್ದರಿಂದ ಅವರು ಜುಲೈನಲ್ಲಿ ಪ್ರಧಾನಿ ಹುದ್ದೆಗೆ ಹುದ್ದೆಗೆ ರಾಜೀನಾಮೆ ನೀಡಿದ್ದರು.

Nawaz Sharif, Family Members May Face Travel Restrictions

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ