ಆ್ಯಪ್ನಗರ

ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿರುವ ಷರೀಫ್‌

ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ತುರ್ತಾಗಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ.

Vijaya Karnataka 24 Jul 2018, 10:32 am
ಇಸ್ಲಾಮಾಬಾದ್‌: ಜೈಲಿನಲ್ಲಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದು, ತುರ್ತಾಗಿ ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ.
Vijaya Karnataka Web Shariff


ರಾವಲ್ಪಿಂಡಿ ಇನ್ಸಿಟಿಟ್ಯೂಟ್‌ ಆಫ್‌ ಕಾರ್ಡಿಯಾಲಜಿಯ ಮುಖ್ಯ ಕಾರ್ಯನಿರ್ವಾಹಕ ನಿವೃತ್ತ ಮೇಜರ್‌ ಜನರಲ್‌ ಡಾ.ಅಜರ್‌ ಮೆಹಮೂದ್‌ ಕಯಾನಿ ನೇತೃತ್ವದ ವೈದ್ಯರ ತಂಡವು ಅಡಿಯಾಲ ಜೈಲಿಗೆ ಭೇಟಿ ನೀಡಿ, ಷರೀಫ್‌ ಅವರ ವಿವರವಾದ ವೈದ್ಯಕೀಯ ತಪಾಸಣೆ ನಡೆಸಿದ ನಂತರ ವರದಿಯನ್ನು ಸಿದ್ಧಪಡಿಸಿದೆ. ಈ ವರದಿಯನ್ನು ಸದ್ಯ ಪಂಜಾಬ್‌ ಆರೋಗ್ಯ ಕಾರ್ಯದರ್ಶಿಗೆ ಕಳುಹಿಸಲಾಗಿದೆ. ಷರೀಫ್‌ ಅವರನ್ನು ತಕ್ಷ ಣ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಷರೀಫ್‌ ಅವರ ಖಾಸಗಿ ವೈದ್ಯ ಡಾ.ಅದ್ನನ್‌ ಎರಡು ಬಾರಿ ತಪಾಸಣೆ ನಡೆಸಿದರೂ ಖಚಿತವಾಗಿ ತಿಳಿಯಲು ಜೈಲು ಅಧಿಕಾರಿಗಳು ವೈದ್ಯರ ತಂಡವನ್ನು ಕರೆಸಿದರು. ಸುಮಾರು ಒಂದೂವರೆ ಗಂಟೆಗಳ ಕಾಲ ವೈದ್ಯರ ತಂಡ ಷರೀಫ್‌ ಅವರ ತಪಾಸಣೆ ನಡೆಸಿತು. ತಮಗೆ ಎದೆನೋವು ಮತ್ತು ಉಸಿರಾಟದ ತೊಂದರೆ ಇರುವ ಕುರಿತು ಜೈಲು ಅಧಿಕಾರಿಗಳಿಗೆ ಷರೀಫ್‌ ಶನಿವಾರ ಮಾಹಿತಿ ನೀಡಿದ್ದರು. ಈಗ ಪಂಜಾಬ್‌ ಗೃಹ ಇಲಾಖೆಯ ಆದೇಶಕ್ಕಾಗಿ ಜೈಲು ಅಧಿಕಾರಿಗಳು ಕಾಯುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ