ಆ್ಯಪ್ನಗರ

ಸ್ವದೇಶಕ್ಕೆ ಮರಳಲ್ಲ: ಷರೀಫ್‌

ಪತ್ನಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿರುವುದರಿಂದ ಈ ಸಮಯದಲ್ಲಿ ತಾವು ಪಾಕಿಸ್ತಾನಕ್ಕೆ ಹಿಂತಿರುಗುವುದಿಲ್ಲ ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ತಿಳಿಸಿದ್ದಾರೆ.

Vijaya Karnataka 25 Jun 2018, 9:24 am
ಲಂಡನ್‌: ಪತ್ನಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಆಸ್ಪತ್ರೆ ಸೇರಿರುವುದರಿಂದ ಈ ಸಮಯದಲ್ಲಿ ತಾವು ಪಾಕಿಸ್ತಾನಕ್ಕೆ ಹಿಂತಿರುಗುವುದಿಲ್ಲ ಎಂದು ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ತಿಳಿಸಿದ್ದಾರೆ.
Vijaya Karnataka Web Shariff


ಗಂಟಲು ಕ್ಯಾನ್ಸರ್‌ನಿಂದಾಗಿ ಕಳೆದ ವರ್ಷದ ಆಗಸ್ಟ್‌ನಲ್ಲಿ 68 ವರ್ಷದ ಕುಲ್ಸೋಮ್‌ ಲಂಡನ್‌ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಜೂನ್‌ 14ರಂದು ಅವರಿಗೆ ಹೃದಯಾಘಾತ ಆದ ಕಾರಣ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ''ವೆಂಟಿಲೇಟರ್‌ ಸಹಾಯದಿಂದ ಉಸಿರಾಟ ಆಡುತ್ತಿರುವ ಕುಲ್ಸೋಮ್‌ ಅನ್ನು ಈ ಪರಿಸ್ಥಿತಿಯಲ್ಲಿ ಬಿಟ್ಟು ನಾನು ಪಾಕಿಸ್ತಾನಕ್ಕೆ ಹಿಂತಿರುಗುವುದು ಸಾಧ್ಯವಿಲ್ಲ,'' ಎಂದು ಷರೀಫ್‌ ತಿಳಿಸಿದ್ದಾರೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಷರೀಫ್‌ ಹಾಗೂ ಅವರ ಪುತ್ರಿ ಮರಿಯಮ್‌ಗೆ ನ್ಯಾಯಾಲಯ ವಿನಾಯಿತಿ ನೀಡಿದ್ದರಿಂದ ಇಬ್ಬರೂ ಜೂನ್‌ 14ರಂದೇ ಲಂಡನ್‌ಗೆ ತೆರಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ