ಆ್ಯಪ್ನಗರ

ನೇಪಾಳ: ನೆಲಕ್ಕೆ ಬಿದ್ದ ಮತ್ತೊಂದು ವಿಮಾನ, 2 ಪೈಲಟ್ ಸಾವು

ಮೂರು ದಿನಗಳೊಳಗೆ ನೇಪಾಳದಲ್ಲಿ ಎರಡನೇ ವಿಮಾನ ದುರಂತ ಸಂಭವಿಸಿದೆ. ಪಶ್ಚಿಮ ನೇಪಾಳದ ಕಾಳಿಕೋಟ್ ಜಿಲ್ಲೆಯ ಚಿಲ್ಕಾಯಾ ಪ್ರದೇಶ ಲಘು ವಿಮಾನ ಪತನಗೊಂಡಿದ್ದು, ಪೈಲಟ್‌ಗಳಿಬ್ಬರೂ ಮೃತಪಟ್ಟಿದ್ದಾರೆ. ಸುದೈವವಶಾತ್ ವಿಮಾನದಲ್ಲಿದ್ದ 11 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.

ಏಜೆನ್ಸೀಸ್ 27 Feb 2016, 4:00 am
ಕಠ್ಮಂಡು: ಮೂರು ದಿನಗಳೊಳಗೆ ನೇಪಾಳದಲ್ಲಿ ಎರಡನೇ ವಿಮಾನ ದುರಂತ ಸಂಭವಿಸಿದೆ. ಪಶ್ಚಿಮ ನೇಪಾಳದ ಕಾಳಿಕೋಟ್ ಜಿಲ್ಲೆಯ ಚಿಲ್ಕಾಯಾ ಪ್ರದೇಶ ಲಘು ವಿಮಾನ ಪತನಗೊಂಡಿದ್ದು, ಪೈಲಟ್‌ಗಳಿಬ್ಬರೂ ಮೃತಪಟ್ಟಿದ್ದಾರೆ. ಸುದೈವವಶಾತ್ ವಿಮಾನದಲ್ಲಿದ್ದ 11 ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ.
Vijaya Karnataka Web nepal plane crashes two pilots killed
ನೇಪಾಳ: ನೆಲಕ್ಕೆ ಬಿದ್ದ ಮತ್ತೊಂದು ವಿಮಾನ, 2 ಪೈಲಟ್ ಸಾವು


ನೇಪಾಳ್‌ಗುಂಜ್‌ನಿಂದ ಮಧ್ಯಾಹ್ನ 12.15ಕ್ಕೆ ಹೊರಟ ಏರ್ ಕಸ್ತಮಂಡಪ್‌ಗೆ ಸೇರಿದ ವಿಮಾನವು ಜುಮ್ಲಾ ಎಂಬಲ್ಲಿಗೆ ತೆರಳುತ್ತಿತ್ತು. ತಾಂತ್ರಿಕ ಸಮಸ್ಯೆ ತಲೆದೋರಿದ್ದರಿಂದ ಪರ್ವತವೊಂದರ ಮೇಲಿದ್ದ ಗದ್ದೆಯೊಂದರಲ್ಲಿ ವಿಮಾನವನ್ನು ಇಳಿಸಲು ನೆಲಕ್ಕೆ ಅಪ್ಪಳಿಸಿದೆ. ವಿಮಾನದ ಮುಖಭಾಗ ಜಜ್ಜಿಹೋಗಿ, ಅಲ್ಲಿದ್ದ ಇಬ್ಬರು ಪೈಲಟ್‌ಗಳು ಅಸುನೀಗಿದ್ದಾರೆ.

ಬುಧವಾರವಷ್ಟೇ ಪರ್ವತಗಳ ದೇಶ ನೇಪಾಳದಲ್ಲಿ ಏರ್ ತಾರಾಗೆ ಸೇರಿದ ಲಘು ವಿಮಾನವೊಂದು ಪತನಗೊಂಡು ಎಲ್ಲ 23 ಪ್ರಯಾಣಿಕರು ಸಾವಿಗೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ