ಆ್ಯಪ್ನಗರ

ನೇಪಾಳದಲ್ಲಿ ತೀವ್ರಗೊಂಡ ರಾಜಕೀಯ ಬಿಕ್ಕಟ್ಟು..! ಕಮ್ಯುನಿಸ್ಟ್‌ ಪಕ್ಷದಿಂದಲೇ ಪ್ರಧಾನಿ ಓಲಿ ಉಚ್ಛಾಟನೆ

ನೇಪಾಳದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿದ್ದು, ಅಲ್ಲಿನ ಪ್ರಧಾನಿ ಕೆಪಿ ಶರ್ಮಾ ಓಲಿ ಅವರನ್ನೇ ಕಮ್ಯುನಿಸ್ಟ್‌ ಪಕ್ಷದಿಂದ ಉಚ್ಛಾಟಿಸಲಾಗಿದೆ. ಕೇಂದ್ರಿಯ ಸಮಿತಿ ಸಭೆ ನಡೆಸಿದ ಪಕ್ಷದ ಭಿನ್ನಮತೀಯ ಗುಂಪು ಓಲಿ ಅವರ ಪಕ್ಷದ ಸದಸ್ಯತ್ವವನ್ನು ರದ್ದುಪಡಿಸಿದೆ.

Agencies 24 Jan 2021, 10:48 pm
ಕಠ್ಮಂಡು: ನೇಪಾಳ ಕಮ್ಯುನಿಸ್ಟ್‌ ಪಕ್ಷದಿಂದ (ಎನ್‌ಸಿಪಿ) ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರನ್ನು ಉಚ್ಚಾಟಿಸಲಾಗಿದೆ. ಪಕ್ಷದ ಭಿನ್ನಮತೀಯ ಗುಂಪು ಭಾನುವಾರ ಕೇಂದ್ರೀಯ ಸಮಿತಿ ಸಭೆ ನಡೆಸಿ ಈ ತೀರ್ಮಾನ ಕೈಗೊಂಡಿದೆ.
Vijaya Karnataka Web KP Sharma Oli
ಕೆಪಿ ಶರ್ಮಾ ಒಲಿ (ಸಂಗ್ರಹ ಚಿತ್ರ)


ಓಲಿ ಅವರ ಪಕ್ಷದ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ ಎಂದು ಎನ್‌ಸಿಪಿ ವಕ್ತಾರ ನಾರಾಯಣ್‌ ಕಾಜಿ ಶ್ರೇಷ್ಠ ಸುದ್ದಿಗಾರರಿಗೆ ತಿಳಿಸಿದ್ದಾರೆ. ಎನ್‌ಸಿಪಿಯ ಸದಸ್ಯರಾಗಲು ಓಲಿಗೆ ಅರ್ಹತೆ ಇಲ್ಲ. ಹಾಗಾಗಿ ಅವರನ್ನು ಉಚ್ಚಾಟಿಸಿ ಶಿಸ್ತಿನ ಕ್ರಮಕ್ಕೆ ಮುಂದಾಗುತ್ತಿದ್ದೇವೆ. ಅವರ ಪಕ್ಷ ವಿರೋಧಿ ಚಟುವಟಿಕೆಗಳ ಪಟ್ಟಿ ಮಾಡಿ ಅದಕ್ಕೆ ಸೂಕ್ತ ಸ್ಪಷ್ಟನೆ ನೀಡುವಂತೆಯೂ ಸೂಚಿಸಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಇನ್ನೂ ಬಂದಿಲ್ಲ ಎಂದು ಎನ್‌ಸಿಪಿ ಭಿನ್ನಮತೀಯ ಗುಂಪಿನ ಮುಖಂಡ ಮಾಧವ್‌ ಕುಮಾರ್‌ ನೇಪಾಳ್‌ ಅವರು ಹೇಳಿದ್ದಾರೆ.

ನೇಪಾಳದಲ್ಲಿ ಸಂಸತ್‌ ವಿಸರ್ಜನೆಯ ನಂತರ ರಾಜಕೀಯ ಬಿಕ್ಕಟ್ಟು ಉಲ್ಬಣವಾಗುತ್ತಿದೆ. ಸಂಸತ್ತನ್ನು ವಿಸರ್ಜಿಸಿ ಹೊಸ ಚುನಾವಣೆಗೆ ಆದೇಶ ನೀಡಿದ ಪ್ರಧಾನಿ ಓಲಿ ಅವರ ನಿರ್ಧಾರವನ್ನು ಕಮ್ಯುನಿಸ್ಟ್‌ ಪಕ್ಷದ ಭಿನ್ನಮತೀಯರ ಬಣವು ಈ ಹಿಂದೆ ಖಂಡಿಸಿ ಬೀದಿಗಿಳಿದು ಎರಡು ಬಾರಿ ಪ್ರತಿಭಟಿಸಿತ್ತು. ಓಲಿಯನ್ನು ಪಕ್ಷದಿಂದ ಹೊರಹಾಕುವ ಬೆದರಿಕೆ ಹಾಕಿತ್ತು.
ಪ್ರಧಾನಿ ಓಲಿಯವರನ್ನೇ ಉಚ್ಛಾಟಿಸಲು ಮುಂದಾದ ನೇಪಾಳ ಕಮ್ಯುನಿಷ್ಟ್ ಪಕ್ಷಕಳೆದ ವರ್ಷ ಡಿ.20 ರಂದು ಸಂಸತ್ತನ್ನು ವಿಸರ್ಜಿಸುವ ಘೋಷಣೆಯನ್ನು ಪ್ರಧಾನಿ ಓಲಿ ಅವರು ಮಾಡಿದ ಬೆನ್ನಿಗೇ 2021ರ ಏ.30 ಮತ್ತು ಮೇ 10ರಂದು ಸಾರ್ವತ್ರಿಕ ಚುನಾವಣೆಗಳನ್ನು ನಡೆಸುವುದಾಗಿ ಚುನಾವಣಾ ಆಯೋಗ ಪ್ರಕಟಿಸಿದೆ. ಸದ್ಯ ಎನ್‌ಸಿಪಿ ಚಿಹ್ನೆಯಾದ 'ಸೂರ್ಯ'ನನ್ನು ಓಲಿ ಬಣಕ್ಕೆ ನೀಡುವುದೊ ಅಥವಾ ಮಾಧವ್‌ ಕುಮಾರ್‌ ಬಣಕ್ಕೆ ನೀಡುವುದೊ ಎಂದು ನಿರ್ಣಯವನ್ನು ಚುನಾವಣಾ ಆಯೋಗ ತೆಗೆದುಕೊಳ್ಳಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ