ಆ್ಯಪ್ನಗರ

12 ವರ್ಷಗಳ ಬಳಿಕ ಚೀನಾ ಸಂಪರ್ಕಿಸುವ ಗಡಿ ರಸ್ತೆ ನಿರ್ಮಾಣಕ್ಕೆ ಮುಂದಾದ ನೇಪಾಳ!

ಚೀನಾಗೆ ಹತ್ತಿರವಾಗುವ ತನ್ನ ನೀತಿಗೆ ಮತ್ತೆ ವೇಗ ನೀಡಿರುವ ನೇಪಾಳ, 12 ವರ್ಷಗಳ ಬಳಿಕ ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ. ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಡಾರ್ಚುಲಾ-ಟಿಂಕರ್ 83 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ನೇಪಾಳ ಮರುಚಾಲನೆ ನೀಡಿದೆ.

Vijaya Karnataka Web 24 May 2020, 3:00 pm
ಕಠ್ಮಂಡು: ಭಾರತದ ಐತಿಹಾಸಿಕ ಕಸಹೋದರ ರಾಷ್ಟ್ರ ನೇಪಾಳ ಚೀನಾದ ಕುಮ್ಮಕ್ಕಿನಿಂದ ಹಿರಿಯ ಸಹೋದರನಿಂದ ದೂರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ.
Vijaya Karnataka Web Road
ಸಂಗ್ರಹ ಚಿತ್ರ


ಇತ್ತೀಚಿಗಷ್ಟೇ ಭಾರತದ ಪ್ರದೇಶಗಳನ್ನೂ ಸೇರಿಸಿ ಹೊಸ ಗಡಿ ನಕ್ಷೆ ಬಿಡುಗಡೆ ಮಾಡಿದ್ದ ನೇಪಾಳ, ಲಿಪುಲೇಖ್ ಹಾಗೂ ಕಾಲಾಪಾನಿ ತನ್ನದೆಂದು ವಾದಿಸತೊಡಗಿದೆ.

ಕೈಲಾಸ ಮಾನಸ ಸರೋವರದ ಸುಗಮ ಯಾತ್ರೆಗಾಗಿ ಭಾರತ ನಿರ್ಮಿಸಿರುವ 80 ಕಿ.ಮೀ ಉದ್ದದ ನೂತನ ರಸ್ತೆಗೆ ನೇಪಾಳ ಕ್ಯಾತೆ ತೆಗೆದಿದೆ. ತನನ ಭೂಭಾಗದಲ್ಲಿ ಭಾರತ ರಸ್ತೆ ನಿರ್ಮಿಸಿದೆ ಎಂದು ನೇಪಾಳ ಗಂಭೀರ ಆರೋಪ ಹೊರಿಸುವ ಹಂತಕ್ಕೂ ತಲುಪಿದೆ.

ನೀನಾ ಚೀನಾ -11: ಚೀನಾ ಕುಮ್ಮಕ್ಕಿಲ್ಲದೆ ಭಾರತದ ನೆಲವನ್ನು ತನ್ನದು ಎಂದೀತೇ ನೇಪಾಳ?

ಈ ಮಧ್ಯೆ ಚೀನಾಗೆ ಹತ್ತಿರವಾಗುವ ತನ್ನ ನೀತಿಗೆ ಮತ್ತೆ ವೇಗ ನೀಡಿರುವ ನೇಪಾಳ, 12 ವರ್ಷಗಳ ಬಳಿಕ ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ನಿರ್ಮಾಣ ಕಾರ್ಯಕ್ಕೆ ಮುಂದಾಗಿದೆ.

ಹೌದು, ಚೀನಾ ಗಡಿಗೆ ಸಂಪರ್ಕ ಕಲ್ಪಿಸುವ ಡಾರ್ಚುಲಾ-ಟಿಂಕರ್ 83 ಕಿ.ಮೀ ಉದ್ದದ ಹೆದ್ದಾರಿ ನಿರ್ಮಾಣ ಕಾರ್ಯಕ್ಕೆ ನೇಪಾಳ ಮರುಚಾಲನೆ ನೀಡಿದೆ. ಚೀನಾದೊಂದಿಗೆ ವ್ಯಾಪಾರ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ 12 ವರ್ಷಗಳ ಬಳಿಕ ರಸ್ತೆ ನಿರ್ಮಾಣ ಕಾರ್ಯವನ್ನು ಪುನರಾರಂಭಿಸಿರುವುದಾಗಿ ನೇಪಾಳ ಹೇಳಿದೆ.

2008 ರಲ್ಲಿ ಮಂಜೂರಾಗಿದ್ದ ರಸ್ತೆ ನಿರ್ಮಾಣ ಯೋಜನೆ, ಕಠಿಣ ಭೂಪ್ರದೇಶ ಹಾಗೂ ಹವಾಮಾನ ಪರಿಸ್ಥಿತಿಯಿಂದ ಕಾಮಗಾರಿಯನ್ನು ನಿಲ್ಲಿಸಲಾಗಿತ್ತು. ಆದರೆ ಈ ಹೆದ್ದಾರಿ ನಿರ್ಮಾಣಕ್ಕೆ ನೇಪಾಳ ಮತ್ತೆ ಚಾಲನೆ ನೀಡಿದೆ.

ನೀವು ಗೆರೆ ಎಳೆದ ಮಾತ್ರಕ್ಕೆ ಅದು ನಿಮ್ಮದಾಗಲ್ಲ: ನೇಪಾಳ ನಕ್ಷೆ ಕಸದ ಬುಟ್ಟಿಗೆ ಎಂದ ಭಾರತ!

ಚೀನಾದೊಂದಿಗೆ ಸುಗಮ ವ್ಯಾಪಾರಕ್ಕಾಗಿ ಈ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ನೇಪಾಳ ಮೇಲ್ನೋಟಕ್ಕೆ ಹೇಳುತ್ತಿದೆಯಾದರೂ, ಭಾರತಕ್ಕೆ ತಾನು ಚೀನಾಗೆ ಹತ್ತಿರವಾಗುತ್ತಿರುವ ಸಂದೇಶ ರವಾನಿಸಲು ನೇಪಾಳ ಬಯಸಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಒಟ್ಟಿನಲ್ಲಿ ಸಕಾರಣವಿಲ್ಲದೇ ಭಾರತದೊಂದಿಗೆ ಗಡಿ ಕ್ಯಾತೆ ತೆಗೆದಿರುವ ನೇಪಾಳ, ಈ ಕಾರಣಕ್ಕೆ ಚೀನಾಗೆ ಹತ್ತಿರವಾಗಲು ಬಯಿಸಿರುವುದು ತನ್ನ ಭವಿಷ್ಯಕ್ಕೆ ಮಾರಕ ಎಂಬುದುನ್ನು ಅರಿಯಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ