ಆ್ಯಪ್ನಗರ

ಮತ್ತೊಂದು ಅವಧಿಗೆ ಜಸಿಂಡಾ ಆರ್ಡೆನ್‌ ನ್ಯೂಜಿಲೆಂಡ್‌ ಪ್ರಧಾನಿ? ಸಮೀಕ್ಷೆಗಳು ಏನು ಹೇಳುತ್ತಿವೆ?

​​ಆರ್ಡೆನ್‌ ಅವರ ದೇಶವ್ಯಾಪಿ ವರ್ಚಸ್ಸು ಕಿಂಚಿತ್ತೂ ಕುಂದಿಲ್ಲ. ಅವರ ಲಿಬರಲ್‌ ಲೇಬರ್‌ ಪಾರ್ಟಿ ಪರ ಶೇ.48ರಷ್ಟು ಜನ ಬೆಂಬಲ ವ್ಯಕ್ತವಾಗಿದೆ. ಜುಡಿತ್‌ ಕೊಲಿನ್‌ ನೇತೃತ್ವದ ಪ್ರತಿಪಕ್ಷ ಕನ್ಸರ್‌ವೇಟಿವ್‌ ನ್ಯಾಷನಲ್‌ ಪಾರ್ಟಿ ಪರ ಶೇ.31ರಷ್ಟು ಮತದಾರರು ಮಾತ್ರ ಒಲವು ತೋರಿದ್ದಾರೆ ಎಂದು ದಿ ನ್ಯೂಸ್‌ ಕಾಲ್ಮರ್‌ ಬ್ರಂಟನ್‌ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

Vijaya Karnataka Web 23 Sep 2020, 7:45 am
ವಿಲ್ಲಿಂಗ್ಟನ್‌: ಮುಂದಿನ ತಿಂಗಳು ನಡೆಯುವ ಸಾರ್ವತ್ರಿಕ ಚುನಾವಣೆಗೆ ನ್ಯೂಜಿಲೆಂಡ್‌ ಸಜ್ಜಾಗಿದೆ. ದಕ್ಷ ಆಡಳಿತ ನೀಡಿದ ಹಾಲಿ ಪ್ರಧಾನಿ ಜಸಿಂಡಾ ಆರ್ಡೆನ್‌ ಮತ್ತೊಂದು ಅವಧಿಗೆ ಅಧಿಕಾರ ಉಳಿಸಿಕೊಳ್ಳಲಿದ್ದಾರೆ ಎಂದು ಚುನಾವಣಾಪೂರ್ವ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
Vijaya Karnataka Web Jacinda Ardern
New Zealand's Prime Minister Jacinda Ardern carries her lunch during an event in Welcome Bay near Tauranga, New Zealand, Tuesday, Sept. 8, 2020. New Zealand will hold a general election on Oct 17. (George Novak/Bay of Plenty Time via AP)


ಆರ್ಡೆನ್‌ ಅವರ ದೇಶವ್ಯಾಪಿ ವರ್ಚಸ್ಸು ಕಿಂಚಿತ್ತೂ ಕುಂದಿಲ್ಲ. ಅವರ ಲಿಬರಲ್‌ ಲೇಬರ್‌ ಪಾರ್ಟಿ ಪರ ಶೇ.48ರಷ್ಟು ಜನ ಬೆಂಬಲ ವ್ಯಕ್ತವಾಗಿದೆ. ಜುಡಿತ್‌ ಕೊಲಿನ್‌ ನೇತೃತ್ವದ ಪ್ರತಿಪಕ್ಷ ಕನ್ಸರ್‌ವೇಟಿವ್‌ ನ್ಯಾಷನಲ್‌ ಪಾರ್ಟಿ ಪರ ಶೇ.31ರಷ್ಟು ಮತದಾರರು ಮಾತ್ರ ಒಲವು ತೋರಿದ್ದಾರೆ ಎಂದು ದಿ ನ್ಯೂಸ್‌ ಕಾಲ್ಮರ್‌ ಬ್ರಂಟನ್‌ ಸಂಸ್ಥೆ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ಪ್ರಧಾನಿ ಅಭ್ಯರ್ಥಿಯಾಗಿ ಆರ್ಡೆನ್‌ ಪರ ಶೇ.54ರಷ್ಟು ಮತ್ತು ಕೊಲಿನ್‌ ಪರ ಶೇ.18ರಷ್ಟು ಮಂದಿ ತಮ್ಮ ಒಲವು ತೋರಿದ್ದಾರೆ. ನ್ಯೂಜಿಲ್ಯಾಂಡ್‌ನ ಯುವ ನಾಯಕಿಯಾಗಿ ಹೊರಹೊಮ್ಮಿರುವ ಪ್ರಧಾನಿ ಜಸಿಂಡಾ ಆರ್ಡೆನ್‌ ಅನೇಕ ಜನಪರ ಕೆಲಸ ಮಾಡಿದ್ದಾರಂತೆ. ಅಲ್ಲದೆ ಕೊರೊನಾ ಸಮಯದಲ್ಲಿ ಅದನ್ನು ಹತ್ತಿಕ್ಕುವ ಉತ್ತಮ ಕಾರ್ಯಗಳನ್ನು ಮಾಡಿದ್ದರಿಂದ ಜನಪ್ರಿಯತೆ ಹೊಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಅವರ ಪರ ಅಲೆ ಈಗ ನ್ಯೂಜಿಲ್ಯಾಂಡಿನಾದ್ಯಂತ ಎದ್ದಿದೆ.

ಬೆಳಕಿಗಾಗಿ ರಾತ್ರಿಯಿಡಿ ಉಗ್ರ ಅಡಗಿರುವ ಮನೆಯ ಸುತ್ತ ಕಾವಲು ಕುಳಿತು, ಬೆಳಗ್ಗೆ ಜೈಷ್‌ ಉಗ್ರನ ಹತ್ಯೆ ಮಾಡಿದ ಸೇನೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ