ಆ್ಯಪ್ನಗರ

ಗಡಿ ಉದ್ವಿಗ್ನತೆ ಪ್ರಯತ್ನ ಬೇಡ: ಪ್ರಧಾನಿ ಮೋದಿ ಲಡಾಖ್ ಭೇಟಿಗೆ ಚೀನಾ ಪ್ರತಿಕ್ರಿಯೆ!

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಲಡಾಖ್ ಭೇಟಿಯಿಂದ ಕಂಗಾಲಾಗಿರುವ ಚೀನಾ, ಎರಡೂ ದೇಶಗಳ ನಡುವೆ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳು ಮುಂದುವರೆದಿವೆ ಎಂದು ತಣ್ಣಗಿನ ಪ್ರತಿಕ್ರಿಯೆ ನೀಡಿದೆ.

Vijaya Karnataka Web 3 Jul 2020, 1:41 pm
ಬೀಜಿಂಗ್: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಲಡಾಖ್ ಭೇಟಿಯಿಂದ ಕಂಗಾಲಾಗಿರುವ ಚೀನಾ, ಈ ದಿಢೀರ್ ಭೇಟಿಗೆ ಏನು ಪ್ರತಿಕ್ರಿಯೆ ನೀಡಬೇಕು ಎಂಬುದು ಗೊತ್ತಾಗದೇ ಒದ್ದಾಡುತ್ತಿದೆ.
Vijaya Karnataka Web China
ಸಂಗ್ರಹ ಚಿತ್ರ


ಪ್ರಧಾನಿ ಮೋದಿ ಲಡಾಖ್‌ನ ಮುಂಚೂಣು ಸೇನಾ ನೆಲೆಗಳಿಗೆ ಭೇಟಿ ನೀಡುತ್ತಿದ್ದಂತೇ ಎಚ್ಚೆತ್ತುಕೊಂಡಿರುವ ಚೀನಾ, ಗಡಿ ಘರ್ಷಣೆ ಹಾಗೂ ಗಡಿ ತಕರಾರಿನ ಕುರಿತು ಭಾರತದೊಂದಿಗೆ ಶಾಂತಿಯುತ ಮಾತುಕತೆಗಳು ಮುಂದುವರೆದಿವೆ ಎಂದು ಹೇಳಿದೆ.

ಪ್ರಧಾನಿ ಮೋದಿ ಲಡಾಖ್ ಭೇಟಿ ಗೌಪ್ಯವಾಗಿ ಇಟ್ಟಿದ್ದೇಕೆ?: ಅಚ್ಚರಿಯಲ್ಲಿ ಮುಳುಗಿದ ಚೀನಾ!

ಈ ಕುರಿತು ಬೀಜಿಂಗ್‌ನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಚೀನಾ ವಿದೇಶಾಂಗ ಇಲಾಖೆ ವಕ್ತಾರ ಜಾವೋ ಲಿಜಿಯಾನ್, ಭಾರತ-ಚೀನಾ ನಡುವಿನ ಶಾಂತಿ ಮಾತುಕತೆಗಳು ಫಲ ನೀಡುವ ಹಂತಕ್ಕೆ ಬಂದಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.


ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಲು ಕಾರಣವಾಗುವ ಯಾವುದೇ ವರ್ತನೆಯನ್ನು ಎರಡೂ ಸೇನಾ ಪಡೆಗಳು ತೋರಬಾರದು ಎಂದು ಮನವಿ ಮಾಡಿರುವ ಜಾವೋ ಲಿಜಿಯಾನ್, ಪ್ರಧಾನಿ ಮೋದಿ ಭೇಟಿಯನ್ನು ಪರೋಕ್ಷವಾಗಿ ಉದ್ರೇಕಕಾರಿ ಎಂದು ಹೇಳಿರುವುದು ಸ್ಪಷ್ಟ.

ಲಡಾಖ್‌ಗೆ ಅಚ್ಚರಿಯ ಭೇಟಿ ನೀಡಿದ ಪ್ರಧಾನಿ ಮೋದಿ: ಗಡಿ ವಸ್ತುಸ್ಥಿತಿ ಅವಲೋಕನ!

ಭಾರತ-ಚೀನಾ ನಡುವಿನ ಮಿಲಿಟರಿ ಮತ್ತು ರಾಜತಾಂತ್ರಿಕ ಮಾತುಕತೆಗಳು ಅಂತಿಮ ಹಂತ ತಲುಪಿದ್ದು, ಈ ಸಂದರ್ಭದಲ್ಲಿ ಎರಡೂ ಪಕ್ಷ ಆಕ್ರಮಣಕಾರಿ ವರ್ತನ ತೋರುವುದು ಸಲ್ಲ ಎಂದು ಜಾವೋ ಲಿಜಿಯಾನ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ