ಆ್ಯಪ್ನಗರ

ದ.ಕೊರಿಯಾದೊಂದಿಗೆ ರಾಜಕೀಯ ಸಂವಹನ ನಿಲ್ಲಿಸಿದ ಉ.ಕೊರಿಯಾ: ಕಿಮ್ ಜಾಂಗ್ ಹೊಸ ದಾಳ!

ದಕ್ಷಿಣ ಕೊರಿಯಾ ವಿರುದ್ಧದ ತನ್ನ ಹಗೆತನವನ್ನು ಮತ್ತೆ ಮುನ್ನೆಲೆಗೆ ತಂದಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್, ಗಡಿಯಲ್ಲಿ ತನ್ನ ದೇಶದ ವಿರುದ್ಧ ಕರಪತ್ರ ಹಂಚಲಾಗುತ್ತಿದೆ ಎಂಬ ಕಾರಣ ನೀಡಿ ಆ ದೇಶದೊಂದಿಗೆ ರಾಜಕೀಯ ಹಾಗೂ ಸಾಮಾಜಿಕ ಸಂವಹನವನ್ನು ನಿಲ್ಲಿಸುವ ನಿರ್ಧಾರ ಕೈಗೊಂಡಿದ್ದಾನೆ.

Vijaya Karnataka Web 9 Jun 2020, 9:41 am
ಪ್ಯಾಂಗ್ಯಾಂಗ್: ಗಡಿಯಲ್ಲಿ ಉತ್ತರ ಕೊರಿಯಾದ ವಿರುದ್ಧ ದಕ್ಷಿಣ ಕೊರಿಯಾದ ಸಾಮಾಜಿಕ ಹೋರಾಟಗಾರರು ಕರಪತ್ರ ಹಂಚುತ್ತಿದ್ದಾರೆ ಎಂಬ ಕಾರಣಕ್ಕೆ ದಕ್ಷಿಣ ಕರಿಯಾದೊಂದಿಗೆ ರಾಜಕೀಯ ಹಾಗೂ ಮಿಲಿಟರಿ ಸಂವಹನ ಕಡಿತಗೊಳಿಸಲು ಉತ್ತರ ಕೊರಿಯಾ ನಿರ್ಧರಿಸಿದೆ.
Vijaya Karnataka Web Kim Jong Un
ಸಂಗ್ರಹ ಚಿತ್ರ


2018ರಲ್ಲಿ ದಕ್ಷಿಣ ಕೊರಿಯಾ ಹಾಗೂ ಉತ್ತರ ಕೊರಿಯಾ ನಡುವಿನ ಒಪ್ಪಂದದ ಬಳಿಕ, ಉಭಯ ದೇಶಗಳ ನಡುವೆ ಹಗೆತನ ತುಸು ಕಡಿಮೆಯಾಗಿತ್ತು. ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಊನ್ ಹಾಗೂ ದ.ಕೊರಿಯಾ ಅಧ್ಯಕ್ಷ ಮೂನ್ ಜೇ ನೇತೃತ್ವದಲ್ಲಿ ನಡೆದ ಒಪ್ಪಂದ ಐತಿಹಾಸಿಕ ಎಂದೇ ವಿಶ್ಲೇಷಿಸಲಾಗಿತ್ತು.

ಕಿಮ್ ಇದ್ದರೂ ಕಷ್ಟ, ಇರದಿದ್ದರೂ ಕಷ್ಟ: ಉ.ಕೊರಿಯಾ ಸರ್ವಾಧಿಕಾರಿ ಸತ್ತರೆ ಅಣು ಯುದ್ಧ ಸಂಭವ?

ಆದರೆ ಇದೀಗ ಗಡಿಯಲ್ಲಿ ಉ.ಕೊರಿಯಾದ ಸರ್ವಾಧಿಕಾರಿ ಸರ್ಕಾರವನ್ನು ವಿರೋಧಿಸಿ, ದ.ಕೊರಿಯಾದ ಸಾಮಾಜಿಕ ಹಕ್ಕುಗಳ ಹೋರಾಟಗಾರರು ಗಡಿಯಲ್ಲಿ ಕರಪತ್ರಗಳನ್ನು ಹಂಚುತ್ತಿದ್ದಾರೆ ಎನ್ನಲಾಗಿದೆ.

ಈ ನಡೆಯನ್ನು ವಿರೋಧಿಸಿರುವ ಉ.ಕೊರಿಯಾ, ಈ ಕೂಡಲೇ ದ.ಕೊರಿಯಾದೊಂದಿಗೆ ಎಲ್ಲಾ ರಾಜಕೀಯ ಹಾಗೂ ಮಿಲಿಟರಿ ಸಂವಹನವನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.

ದ. ಕೊರಿಯಾ ಯುದ್ಧಕೋರರಿಗೆ ಎಚ್ಚರಿಕೆ ನೀಡಲು ಕ್ಷಿಪಣಿ ಪರೀಕ್ಷೆ: ಉ. ಕೊರಿಯಾ

ಈ ಕುರಿತು ಮಾಹಿತಿ ನೀಡಿರುವ ಉ.ಕೊರಿಯಾ ಸರ್ಕಾರಿ ಮಾಧ್ಯಮ, 2018ರ ಒಪ್ಪಂದವನ್ನು ಬದಿಗಿರಿಸಿ ದ.ಕೊರಿಯಾದೊಂದಿಗೆ ಎಲ್ಲಾ ರಾಜಕೀಯ ಹಾಗೂ ಮಿಲಿಟರಿ ಸಂವಹನವನ್ನು ರದ್ದುಗೊಳಿಸಿರುವುದಾಗಿ ಸ್ಪಷ್ಟಪಡಿಸಿದೆ.

ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನಡುವಿನ ಅಣು ಒಪ್ಪಂದವೂ ವಿಫಲಗೊಂಡಿದ್ದು, ಇದಾದ ಬಳಿಕ ಹಂತ ಹಂತವಾಗಿ ದ.ಕೊರಿಯಾದೊಂದಿಗೆ ಸಂವಹನವನ್ನು ಕಡಿತ ಮಾಡಲಾಗಿದೆ.

ಮೊನ್ನೆ ಕಾಣಿಸಿಕೊಂಡಾತ ಕಿಮ್ ಜಾಂಗ್ ಉನ್ ಅಲ್ಲವಾ?: ಬೆಚ್ಚಿ ಬೀಳಿಸಿದ ಡುಪ್ಲಿಕೇಟ್ ವಾದ!

ಈ ಹಿನ್ನೆಲೆಯಲ್ಲಿ ದ. ಕೊರಿಯಾದೊಂದಿಗಿನ ಭೂ, ಸಮುದ್ರ ಹಾಗೂ ವಾಯುಗಡಿಯನ್ನು ಸೀಲ್ ಮಾಡಿರುವ ಉ.ಕೊರಿಯಾ, ಶತ್ರು ರಾಷ್ಟ್ರದೊಂದೊಗೆ ಯಾವುಯದೇ ರಾಜಕೀಯ ಹಾಗೂ ಮಿಲಿಟರಿ ಸಂವಹನಕ್ಕೆ ಅವಕಾಶ ಇಲ್ಲ ಎಂದು ಘೋಷಿಸಿದೆ.

ಕಿಮ್ ಜಾಂಗ್ ಉನ್‌ರ ಈ ನಡೆ ಹೊಸ ಆತಂಕವನ್ನು ತಂದೊಡ್ಡಿದ್ದು, ದ.ಕೊರಿಯಾ ಹಾಗೂ ಉ.ಕೊರಿಯಾ ಮತ್ತೆ ಹಗೆತನ ಸಾಧಿಸುವತ್ತ ಹೆಜ್ಜೆ ಹಾಕುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ