ಆ್ಯಪ್ನಗರ

ಸಿಂಗಾಪುರಕ್ಕೆ ಆಗಮಿಸಿದ ಉ. ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್

ಐತಿಹಾಸಿಕ ಅಧ್ಯಕ್ಷೀಯ ಸಭೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭಾನುವಾರ ಸಿಂಗಾಪುರಕ್ಕೆ ಆಗಮಿಸಿದ್ದಾರೆ.

Vijaya Karnataka Web 10 Jun 2018, 3:58 pm
ಸಿಂಗಾಪುರ: ಐತಿಹಾಸಿಕ ಅಧ್ಯಕ್ಷೀಯ ಸಭೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಭಾನುವಾರ ಸಿಂಗಾಪುರಕ್ಕೆ ಆಗಮಿಸಿದ್ದಾರೆ.
Vijaya Karnataka Web kim jong singapore


ಇದೊಂದು ಮಹತ್ವದ ಭೇಟಿಯಾಗಿದ್ದು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜತೆ ಕಿಮ್ ಜಾಂಗ್ ಉನ್ ಭೇಟಿ ಕೂಡ ನಡೆಯಲಿದೆ. ಜತೆಗೆ ದಕ್ಷಿಣ ಕೊರಿಯಾ ಜತೆಗಿನ ಶೀತಲ ಸಮರ ಕೊನೆಗೊಳಿಸುವಿಕೆ ಮತ್ತು ಅಣ್ವಸ್ತ್ರ ತ್ಯಜಿಸುವ ಕುರಿತಂತೆ ನಿರ್ಧಾರ ಹೊರಬೀಳಿದೆ. ಜತೆಗೆ ಕಳೆದ 65 ವರ್ಷಗಳಿಂದ ದಕ್ಷಿಣ ಮತ್ತು ಉತ್ತರ ಕೊರಿಯಾ ಮಧ್ಯೆ ನಡೆಯುತ್ತಿರುವ ಮುಸುಕಿನ ಗುದ್ದಾಟಕ್ಕೆ ಅಂತ್ಯ ಹಾಡಲು ಈ ವೇದಿಕೆಯನ್ನು ಬಳಸಿಕೊಳ್ಳುವ ಸಾಧ್ಯತೆಯಿದೆ.


ಅಮೆರಿಕವು ಉತ್ತರ ಕೊರಿಯಾ ಸಂಪೂರ್ಣ ಅಣ್ವಸ್ತ್ರ ನಿಶಸ್ತ್ರೀಕರಣ ಮಾಡಬೇಕೆಂದು ಒತ್ತಾಯಿಸುತ್ತಿದೆ. ಆದರೆ ಕಿಮ್ ಜಾಂಗ್ ಉನ್ ಅದಕ್ಕೆ ಪೂರ್ಣವಾಗಿ ಒಪ್ಪಿಗೆ ನೀಡುವ ಸಾಧ್ಯತೆಯಿಲ್ಲ ಎನ್ನಲಾಗಿದೆ.

ಕಿಮ್ ಜಾಂಗ್ ಉನ್ ಏರ್ ಚೀನಾ 747 ವಿಮಾನದ ಮೂಲಕ ಸಿಂಗಾಪುರಕ್ಕೆ ಆಗಮಿಸಿದ್ದಾರೆ. ಭಾನುವಾರ ಅವರು ವಿದೇಶಾಂಗ ಸಚಿವ ವಿವಿಯನ್ ಬಾಲಕೃಷ್ಣನ್ ಅವರನ್ನು ಭೇಟಿಯಾಗಲಿದ್ದಾರೆ. ಕಿಮ್ ಜಾಂಗ್ ಆಗಮನದ ಹಿನ್ನೆಲೆಯಲ್ಲಿ ವ್ಯಾಪಕ ಭದ್ರತೆ ಕೈಗೊಳ್ಳಲಾಗಿದ್ದು, ಹೆಚ್ಚುವರಿ ಭದ್ರತಾ ಸಿಬ್ಬಂದಿ ನಿಯೋಜಿಸಲಾಗಿದೆ. ಜತೆಗೆ ಮಾಧ್ಯಮದವರ ಕಣ್ಣಿನಿಂದ ಕಿಮ್ ಜಾಂಗ್‌ರನ್ನು ದೂರವಿಡಲು ಅವರು ತಂಗುತ್ತಿರುವ ಹೋಟೆಲ್ ಬಳಿ ವಿಶೇಷ ಬಂದೋಬಸ್ತ್‌ ವ್ಯವಸ್ಥೆ ಕೈಗೊಳ್ಳಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ