ಆ್ಯಪ್ನಗರ

ಅತಿ ದೂರ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಉ.ಕೊರಿಯ

ಉತ್ತರ ಕೊರಿಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರ ಮುಂದುವರೆದಿರುವಂತೆಯೇ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಉತ್ತರ ಕೊರಿಯಾ ಬುಧವಾರ ಇನ್ನೊಂದು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷೆ ಮಾಡಿ ಉದ್ಧಟತನ ಮೆರೆದಿದೆ.

TNN 29 Nov 2017, 10:46 am
ಸಿಯೋಲ್: ಉತ್ತರ ಕೊರಿಯಾ ಮತ್ತು ಅಮೆರಿಕ ನಡುವಿನ ಶೀತಲ ಸಮರ ಮುಂದುವರೆದಿರುವಂತೆಯೇ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಉತ್ತರ ಕೊರಿಯಾ ಬುಧವಾರ ಇನ್ನೊಂದು ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಪರೀಕ್ಷೆ ಮಾಡಿ ಉದ್ಧಟತನ ಮೆರೆದಿದೆ.
Vijaya Karnataka Web north korea launches icbm in possibly its longest range test yet
ಅತಿ ದೂರ ವ್ಯಾಪ್ತಿಯ ಕ್ಷಿಪಣಿ ಉಡಾಯಿಸಿದ ಉ.ಕೊರಿಯ


ಕಳೆದ ಬಾರಿಗಿಂತಲೂ ಅಧಿಕ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯನ್ನು ಹಾರಿಸಿರುವ ಉತ್ತರ ಕೊರಿಯಾ ಸುಮಾರು 950 ಕಿ.ಮೀ (590 ಮೈಲಿ) ಕ್ರಮಿಸಿದೆ. ಈ ಕ್ಷಿಪಣಿ ಪರೀಕ್ಷೆ ಉತ್ತರ ಕೊರಿಯಾದಲ್ಲಿ ಉದ್ವಿಗ್ನತೆಯನ್ನು ಹುಟ್ಟು ಹಾಕಿದ್ದು, ಅಮೆರಿಕ ಇನ್ನಷ್ಟು ನಿರ್ಬಂಧಗಳನ್ನು ಹೇರುವ ಸಾಧ್ಯತೆಗಳಿವೆ.

ಪ್ರಸ್ತುತ ಉತ್ತರ ಕೊರಿಯಾ ಪ್ರಯೋಗಿಸಿರುವ ಈ ಹ್ವಾಸಾಂಗ್-15 ಖಂಡಾಂತರ ಕ್ಷಿಪಣಿ ಆ ದೇಶದ ಬತ್ತಳಿಕೆಯಲ್ಲಿರುವ ಕ್ಷಿಪಣಿಗಳಲ್ಲೇ ಅತ್ಯಂತ ದೂರಗಾಮಿ ಪ್ರಬಲ ಕ್ಷಿಪಣಿ ಎಂದು ಹೇಳಲಾಗುತ್ತಿದೆ. ಅಲ್ಲದೆ ಅಣ್ವಸ್ತ್ರ ಸಿಡಿತಲೆಯನ್ನು ಸಾಗಿಸಬಲ್ಲ ಸಾಮರ್ಥ್ಯ ಕ್ಷಿಪಣಿಗಿದೆ ಎನ್ನಲಾಗಿದೆ.

ಕ್ಷಿಪಣಿ ಪರೀಕ್ಷೆಯ ಬೆನ್ನಲ್ಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಇದನ್ನು ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ