ಆ್ಯಪ್ನಗರ

ಮನೆ ಬಾಡಿಗೆ ಒಪ್ಪಂದದಲ್ಲಿ ಮಾಲೀಕನ ಹುಟ್ಟುಹಬ್ಬಕ್ಕೆ ಕೇಕ್!

ಮಾಲೀಕರ ಹುಟ್ಟುಹಬ್ಬ ಇರುವ ವಾರಾಂತ್ಯದಲ್ಲಿ ಕೇಕ್ ಕೊಡಬೇಕೆಂದು ಹೇಳಲಾಗಿದೆ! ಅದೂ ವೆನಿಲ್ಲಾ ಕೇಕ್ ಬೇಡವೆಂಬ ಕಂಡೀಷನ್‌ನೊಂದಿಗೆ.

ಏಜೆನ್ಸೀಸ್ 11 Mar 2016, 6:46 pm
ಒಪ್ಪಂದವೊಂದಕ್ಕೆ ಸಹಿ ಮಾಡುವಾಗ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಎಲ್ಲ ವಿವರಗಳನ್ನೂ ಸರಿಯಾಗಿ ಓದಿಕೊಂಡಿರಬೇಕು ಎಂಬುವುದು ಸಾಮಾನ್ಯ ಜ್ಞಾನ. ಇನ್ನು ಮನೆ ಬಾಡಿಗೆ ಒಪ್ಪಂದಕ್ಕೆ ಸಹಿ ಹಾಕುವಾಗ ಸಾಮಾನ್ಯವಾಗಿ ಬಾಡಿಗೆ, ನೀಡಿರುವ ಅಡ್ವಾನ್ಸ್ ಬಗ್ಗೆ ಹಾಗೂ ಮನೆಯಲ್ಲಿರುವ ವಸ್ತುಗಳ ವಿವರವಿರುತ್ತವೆ. ಆದರೆ, ಈ ಒಪ್ಪಂದದಲ್ಲಿ ಮನೆ ಮಾಲೀಕ ಏನೇನು ನಿರ್ಬಂಧನೆ ಹಾಕಿದ್ದಾನೆ ಗೊತ್ತಾ?
Vijaya Karnataka Web oblivious landlord signs lease after tenants slip in amusing clause
ಮನೆ ಬಾಡಿಗೆ ಒಪ್ಪಂದದಲ್ಲಿ ಮಾಲೀಕನ ಹುಟ್ಟುಹಬ್ಬಕ್ಕೆ ಕೇಕ್!


ಮಾಲೀಕರ ಹುಟ್ಟುಹಬ್ಬ ಇರುವ ವಾರಾಂತ್ಯದಲ್ಲಿ ಕೇಕ್ ಕೊಡಬೇಕೆಂದು ಹೇಳಲಾಗಿದೆ! ಅದೂ ವೆನಿಲ್ಲಾ ಕೇಕ್ ಬೇಡವೆಂಬ ಕಂಡೀಷನ್‌ನೊಂದಿಗೆ.

ಕಾಂಟ್ರಾಕ್ಟ್ ಕಾಪಿಯನ್ನು ಪಿಡಿಎಫ್‌ನಲ್ಲಿ ಕಳುಹಿಸುವ ಬದಲಾಗಿ, ಎಡಿಟ್ ಮಾಡಬಲ್ಲ ವರ್ಡ್ ಡಾಕ್ಯುಮೆಂಟ್‌ನಲ್ಲಿ ಕಳುಹಿಸಿದ್ದರಿಂದ ಇಂಥದ್ದೊಂದು ಪ್ರಮಾದಕ್ಕೆ ಕಾರಣವಾಗಿದೆ.

ಈ ಮಾಲೀಕ ಎಲ್ಲಿ ವಾಸಿಸುತ್ತಾರೆಂಬುದು ಗೊತ್ತಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ಕಾರಣ ಈ ಒಪ್ಪಂದದ ಕಾಪಿ ವೈರಲ್ ಆಗಿದ್ದು, 18 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇದು ಕಾನೂನು ಬದ್ಧವೇ ಎಂದೂ ಕೆಲವರು ಕೇಳಿದ್ದಾರೆ.

ಮೂಲ ಒಪ್ಪಂದ ಕಾಪಿಗೆ ಮನೆ ಮಾಲೀಕರು ತಿದ್ದುಪಡಿ ಮಾಡಿದ್ದು, ಇದೀಗ ಅದರಂತೆಯೇ ನಡೆದುಕೊಳ್ಳಲಾಗುತ್ತಿದೆ ಎಂದು ಈ ಒಪ್ಪಂದದ ಕಾಪಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಗ್ಲೋರಿಯಸ್ ಘರ್ಕಿನ್ಸ್ ಎಂಬುವವರು ಉತ್ತರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ