ಆ್ಯಪ್ನಗರ

ಹೊಸ ವರ್ಷಕ್ಕೆ ತನ್ನ ರಾಷ್ಟ್ರಗೀತೆಯಲ್ಲಿ ಒಂದು ಪದ ಬದಲಿಸಿದ ಆಸ್ಟ್ರೇಲಿಯಾ: ಕಾರಣ?

ಹೊಸ ವರ್ಷಕ್ಕೆ ಆಸ್ಟ್ರೇಲಿಯಾ ತನ್ನ ರಾಷ್ಟ್ರಗೀತೆಯಲ್ಲಿ ಒಂದು ಪದವನ್ನು ಬದಲಿಸಿದ್ದು, ಪ್ರಧಾನಿ ಸ್ಕಾಟ್ ಮಾರಿಸನ್ ನೇತೃತ್ವದ ಸರ್ಕಾರದ ನಿರ್ಧಾರ ಜಾಗತಿಕ ಗಮನ ಸೆಳೆದಿದೆ.​​​ 'ಫಾರ್ ವಿ ಆರ್ ಯಂಗ್ ಆ್ಯಂಡ್ ಫ್ರೀ' ಬದಲಾಗಿ 'ಫಾರ್ ವಿ ಆರ್ ಒನ್ ಆ್ಯಂಡ್ ಫ್ರೀ' ಆಗಿ ಬದಲಾಯಿಸುವ ನಿರ್ಣಯ ಕೈಗೊಳ್ಳಲಾಗಿದೆ. ಅಂದರೆ ಯಂಗ್ ಬದಲಾಗಿ ಒನ್ ಪದವನ್ನು ಬಳಸಲಾಗಿದೆ.

Vijaya Karnataka Web 1 Jan 2021, 8:25 pm
ಸಿಡ್ನಿ: 2020ಕ್ಕೆ ಗುಡ್‌ಬೈ ಹೇಳಿರುವ ಜಗತ್ತು, 2021ನ್ನು ಅದ್ದೂರಿಯಾಗಿ ಸ್ವಾಗತಿಸಿದೆ. ಭಾರತವೂ ಸೇರಿದಂತೆ ಎಲ್ಲ ದೇಶಗಳಲ್ಲೂ ಅತ್ಯಂತ ವಿಜೃಂಭಣೆಯಿಂದ ಹೊಸ ವರ್ಷವನ್ನು ಬರಮಾಡಿಕೊಳ್ಳಲಾಗಿದೆ.
Vijaya Karnataka Web Australia
ಆಸ್ಟ್ರೇಲಿಯಾದಲ್ಲಿ ಹೊಸ ವರ್ಷಾಚರಣೆ


ಅದರಂತೆ ಆಸ್ಟ್ರೇಲಿಯಾದಲ್ಲೂ 2021ರ ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಗಿದ್ದು, ಈ ಬಾರಿಯ ಹೊಸ ವರ್ಷ ಆಸ್ಟ್ರೇಲಿಯನ್ನರ ಪಾಲಿಗೆ ತುಂಬ ವಿಶಿಷ್ಟವಾಗಿದೆ.

ಹೊಸ ವರ್ಷಕ್ಕೆ ಆಸ್ಟ್ರೇಲಿಯಾ ತನ್ನ ರಾಷ್ಟ್ರಗೀತೆಯಲ್ಲಿ ಒಂದು ಪದವನ್ನು ಬದಲಿಸಿದ್ದು, ಪ್ರಧಾನಿ ಸ್ಕಾಟ್ ಮಾರಿಸನ್ ನೇತೃತ್ವದ ಸರ್ಕಾರದ ನಿರ್ಧಾರ ಜಾಗತಿಕ ಗಮನ ಸೆಳೆದಿದೆ.

ಆಸ್ಟ್ರೇಲಿಯಾದ ರಾಷ್ಟ್ರಗೀತೆಯ ಎರಡನೇ ಸಾಲಿನಲ್‌ಲಿ ಒಂದು ಪದವನ್ನು ತೆಗೆದು ಮತ್ತೊಂದು ಪಪದವನ್ನು ಸೇರಿಸಲಾಗಿದ್ದು, ಹೊಸ ವರ್ಷದಲ್ಲಿ ಈ ನಿರ್ಧಾರ ಕುತೂಹಲ ಕೆರಳಿಸಿದೆ.

100 ಗಿಟಾರ್‌ನಲ್ಲಿ ರಾಷ್ಟ್ರಗೀತೆ ನುಡಿಸಿದ ವಿದ್ಯಾರ್ಥಿಗಳು: ಕೆಎಲ್‌ಇ ಸ್ಕೂಲ್‌ ವಿಶ್ವದಾಖಲೆ

ಹೌದು, 'ಫಾರ್ ವಿ ಆರ್ ಯಂಗ್ ಆ್ಯಂಡ್ ಫ್ರೀ' ಬದಲಾಗಿ 'ಫಾರ್ ವಿ ಆರ್ ಒನ್ ಆ್ಯಂಡ್ ಫ್ರೀ' ಆಗಿ ಬದಲಾಯಿಸುವ ನಿರ್ಣಯ ಕೈಗೊಳ್ಳಲಾಗಿದೆ. ಅಂದರೆ ಯಂಗ್ ಬದಲಾಗಿ ಒನ್ ಪದವನ್ನು ಬಳಸಲಾಗಿದೆ.

ಈ ಕುರಿತು ಮಾತನಾಡಿರುವ ಪ್ರಧಾನಿ ಸ್ಕಾಟ್ ಮಾರಿಸನ್, ಪದ ಬದಲಾವಣೆ ದೇಶದ ಏಕತೆಯ ಪ್ರತಿರೂಪವಾಗಿದೆ ಎಂದು ಹೇಳಿದ್ದಾರೆ. ಮಾರಿಸನ್ ಸರ್ಕಾರದ ಪದ ಬದಲಾವಣೆ ನಿರ್ಧಾರಕ್ಕೆ ಗವರ್ನರ್ ಜನರಲ್ ಡೇವಿಡ್ ಹರ್ಲಿ ಸಮ್ಮಿತಿ ಸೂಚಿಸಿದ್ದಾರೆ.

ಮಾರಕ ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಮತ್ತು ಆಸ್ಟ್ರೇಲಿಯಾ ಕಾಡ್ಗಿಚ್ಚಿನ ಸಂದರ್ಭದಲ್ಲಿ ದೇಶದ ಜನತೆ ತೋರಿರುವ ಅಭೂತಪೂರ್ವ ಏಕತೆಯನ್ನು ಗೌರವಿಸಲು ಕೈಗೊಂಡಿರುವ ಇರ್ಣಯ ಸರಿಯಾಗಿದೆಎ ಎಂದು ಹರ್ಲಿ ಅಭಿಪ್ರಾಯಪಟ್ಟಿದ್ದಾರೆ.

ನಿರರ್ಗಳವಾಗಿ ರಾಷ್ಟ್ರಗೀತೆ ಹಾಡಿದ ಎರಡೂವರೆ ವರ್ಷದ ಪೋರ

ಏಪ್ರಿಲ್ 19, 1984ರಲ್ಲಿ 'ಗಾಡ್ ಸೇವ್ ದಿ' ಕ್ವೀನ್' ಗೀತೆಯ ಬದಲಾಗಿ ಪೀಟರ್ ಡಾಡ್ಸ್ ಮೆಕ್‌ಕಾರ್ಮಿಕ್ ಅವರು 1878 ರಲ್ಲಿ ರಚಿಸಿದ ಗೀತೆಯನ್ನು ಆಸ್ಟ್ರೇಲಿಯಾದ ರಾಷ್ಟ್ರಗೀತೆಯನ್ನಾಗಿ ಸ್ವೀಕರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ