ಆ್ಯಪ್ನಗರ

ಅಮೆರಿಕದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಸಂಬಂಧಿ ಕ್ಷಮೆಗೆ ಅಮೆರಿಕ ಹಿಂದೂ ಸಂಘಟನೆಗಳ ಆಗ್ರಹ, ಕಾರಣವೇನು?

ಮಲಾ ಹ್ಯಾರಿಸ್‌ ಅವರನ್ನು ದುರ್ಗಾ ದೇವಿಗೆ ಹೋಲಿಸಿ ವಿವಾದಾತ್ಮಕ ಫೋಟೊವೊಂದನ್ನು ಟ್ವೀಟ್‌ ಮಾಡಿದ್ದ ಕಮಲಾ ಸಂಬಂಧಿ ಮೀನಾ ಹ್ಯಾರಿಸ್‌ ಅವರು ಕ್ಷಮೆಯಾಚಿಸಬೇಕು ಎಂದು ಅಮೆರಿಕದಲ್ಲಿನ ಅನೇಕ ಹಿಂದೂ ಸಂಘಟನೆಗಳು ಆಗ್ರಹಿಸಿವೆ.

Vijaya Karnataka 21 Oct 2020, 7:31 am
ವಾಷಿಂಗ್ಟನ್‌: ಅಮೆರಿಕದ ಉಪಾಧ್ಯಕ್ಷ ಅಭ್ಯರ್ಥಿ ಕಮಲಾ ಹ್ಯಾರಿಸ್‌ ಅವರನ್ನು ದುರ್ಗಾ ದೇವಿಗೆ ಹೋಲಿಸಿ ವಿವಾದಾತ್ಮಕ ಫೋಟೊವೊಂದನ್ನು ಟ್ವೀಟ್‌ ಮಾಡಿದ್ದ ಕಮಲಾ ಸಂಬಂಧಿ ಮೀನಾ ಹ್ಯಾರಿಸ್‌ ಅವರು ಕ್ಷಮೆಯಾಚಿಸಬೇಕು ಎಂದು ಅಮೆರಿಕದಲ್ಲಿನ ಅನೇಕ ಹಿಂದೂ ಸಂಘಟನೆಗಳು ಆಗ್ರಹಿಸಿವೆ.
Vijaya Karnataka Web Kamala Harris


ವಿರೋಧ ವ್ಯಕ್ತವಾಗುತ್ತಿದ್ದಂತೆ ಮೀನಾ ಅವರು ತಮ್ಮ ಟ್ವೀಟ್‌ ಡಿಲೀಟ್‌ ಮಾಡಿದ್ದಾರೆ. ಆದರೂ ಖುದ್ದು ಮೀನಾ ಅವರೇ ವಿಡಿಯೊ ಅಥವಾ ಪತ್ರಿಕಾಗೋಷ್ಠಿ ಮೂಲಕ ಕ್ಷಮೆಯಾಚಿಸಬೇಕು ಎಂದು ಹಿಂದೂ ಅಮೆರಿಕನ್‌ ಪತ್ರಿಷ್ಠಾನದ ಮುಖ್ಯಸ್ಥ ಸುಹಾಗ್‌ ಶುಕ್ಲಾಒತ್ತಾಯಿಸಿದ್ದಾರೆ.

ಪ್ರಜಾಪ್ರಭುತ್ವ ಕಾಯಲ್ಲ!

ಫ್ಲೋರಿಡಾದ ಚುನಾವಣಾ ಪ್ರಚಾರ ರಾರ‍ಯಲಿಯಲ್ಲಿ ಹನಿಮಳೆ ನಡುವೆ ತಾವು ನರ್ತಿಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಬಗ್ಗೆ ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್‌ ಪಕ್ಷದ ಅಮೆರಿಕ ಉಪಾಧ್ಯಕ್ಷ ಚುನಾವಣೆ ಅಭ್ಯರ್ಥಿ ಕಮಲಾ ಹ್ಯಾರಿಸ್‌, ''ಮಳೆಯಾದರೂ ಸರಿ, ಬಿಸಿಲಾದರೂ ಸರಿಯೇ. ಪ್ರಜಾಪ್ರಭುತ್ವ ಯಾರಿಗಾಗಿಯೂ ಕಾಯುತ್ತಾ ಕೂರುವುದಿಲ್ಲ,'' ಎಂದಿದ್ದಾರೆ.

ಮಳೆಯಾದರೂ ಸರಿ, ಬಿಸಿಲಾದರೂ ಸರಿಯೇ ಪ್ರಜಾಪ್ರಭುತ್ವ ಯಾರಿಗೂ ಕಾಯಲ್ಲ - ಕಮಲಾ ಹ್ಯಾರಿಸ್‌

15 ಸೆಕೆಂಡ್‌ಗಳ ವಿಡಿಯೊದಲ್ಲಿ ಕಮಲಾ ಅವರು ತಮ್ಮ ಬೆಂಬಲಿಗರು ಹಿಡಿದಿರುವ ಛತ್ರಿಯ ಕೆಳಗಡೆ ವೇದಿಕೆಯಲ್ಲಿಯೇ ನರ್ತಿಸಿದ್ದಾರೆ. ಈ ಮೂಲಕ ತಮ್ಮ ಪ್ರಚಾರ ಅಭಿಯಾನದಲ್ಲಿ ಹೊಸ ಹುರುಪು ತುಂಬಿ ಮತದಾರರನ್ನು ಸೆಳೆಯಲು ಯತ್ನಿಸಿದ್ದಾರೆ. ಸದ್ಯ ಅಮೆರಿಕದಲ್ಲಿ ಭರ್ಜರಿ ಚುನಾವಣಾ ಪ್ರಚಾರ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ