ಆ್ಯಪ್ನಗರ

ಕೈ ಕೊಟ್ಟರೆ ವಿಮಾನವನ್ನೇ ಉರುಳಿಸುವೆ...

ತನ್ನನ್ನು ಬಿಟ್ಟು ಹೋದರೆ 200 ಪ್ರಯಾಣಿಕರನ್ನೊಳಗೊಂಡ ವಿಮಾನವನ್ನು ಮಾರ್ಗಮಧ್ಯದಲ್ಲೇ ಪತನಗೊಳಿಸುವುದಾಗಿ ಪೈಲಟ್ ಒಬ್ಬ ಪತ್ನಿಯನ್ನು ಬೆದರಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.

ಏಜೆನ್ಸೀಸ್ 8 Mar 2016, 4:00 am
ಬರ್ಲಿನ್: ತನ್ನನ್ನು ಬಿಟ್ಟು ಹೋದರೆ 200 ಪ್ರಯಾಣಿಕರನ್ನೊಳಗೊಂಡ ವಿಮಾನವನ್ನು ಮಾರ್ಗಮಧ್ಯದಲ್ಲೇ ಪತನಗೊಳಿಸುವುದಾಗಿ ಪೈಲಟ್ ಒಬ್ಬ ಪತ್ನಿಯನ್ನು ಬೆದರಿಸಿದ ವಿಲಕ್ಷಣ ಘಟನೆ ವರದಿಯಾಗಿದೆ.
Vijaya Karnataka Web overthrow plane
ಕೈ ಕೊಟ್ಟರೆ ವಿಮಾನವನ್ನೇ ಉರುಳಿಸುವೆ...


ರೋಮ್‌ನಿಂದ ಜಪಾನ್‌ಗೆ ಹೊರಡಬೇಕಿದ್ದ ವಿಮಾನದ ಪೈಲಟ್, ಟೇಕಾಫ್‌ಗೆ ಮುನ್ನ ತನ್ನ ಪತ್ನಿಗೆ ಟೆಕ್ಸ್ಟ್ ಮೆಸೇಜ್ ಮೂಲಕ ಈ ಬೆದರಿಕೆ ಹಾಕಿದ್ದಾನೆ. ತನ್ನನ್ನು ಬಿಟ್ಟು ಹೋದರೆ, ವಿಮಾನವನ್ನು ಬೀಳಿಸಿ, ಪ್ರಯಾಣಿಕರೊಂದಿಗೆ ಪ್ರಾಣ ಬಿಡುವುದಾಗಿ ಹೆದರಿಸಿದ್ದಾನೆ.

ಆದರೆ, ಆತನ ಪತ್ನಿಯಿಂದ ವಿಷಯ ತಿಳಿದ ಪೊಲೀಸರು, ರೋಮ್‌ನಿಂದ ವಿಮಾನ ಟೇಕ್ ಆಫ್ ಆಗುವ ಕೆಲ ಕ್ಷಣಗಳ ಮುನ್ನ ಪೈಲಟ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಪ್ರಕರಣ ನಡೆದಿರುವುದು ಕಳೆದ ವರ್ಷದ ಜನವರಿಯಲ್ಲಾದರೂ, ಇದುವರೆಗೂ ಪ್ರಯಾಣಿಕರಿಗೆ ವಿಷಯ ಬಹಿರಂಗಪಡಿಸಿರಲಿಲ್ಲ ಎಂದು ‘ದಿ ಟೈಮ್ಸ್ ’ ಪತ್ರಿಕೆ ವರದಿ ಮಾಡಿದೆ.

ಜರ್ಮನ್ ಪೈಲಟ್ ಒಬ್ಬರು ಉದ್ದೇಶಪೂರ್ವಕವಾಗಿ ವಿಮಾನವನ್ನು ‘ಆಲ್ಪ್ಸ್’ ಪರ್ವತಕ್ಕೆ ಡಿಕ್ಕಿಹೊಡೆಸಿ, 149 ಜನರ ಸಾವಿಗೆ ಕಾರಣವಾದ ಘಟನೆಯ 2 ತಿಂಗಳ ಮುನ್ನವಷ್ಟೇ ಈ ಬೆದರಿಕೆ ಪ್ರಕರಣ ನಡೆದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ