ಆ್ಯಪ್ನಗರ

ಪಾಕಿಸ್ತಾನದ 11 ಉಗ್ರ ಸಂಘಟನೆಗಳ ನಿಷೇಧ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಒಳಾಡಳಿತ ಸಚಿವ ಇಜಾಝ್ ಶಾ ನಡುವೆ ನಡೆದ ಚರ್ಚೆಯ ವೇಳೆ 11 ಉಗ್ರ ಸಂಘಟನೆಗಳ ನಿಷೇಧದ ನಿರ್ಣಯವನ್ನು ಕೈಗೊಳ್ಳಲಾಯಿತು.

Vijaya Karnataka Web 12 May 2019, 11:49 am
ಇಸ್ಲಾಮಾಬಾದ್‌: 2008ರ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಮುಂದಾಳತ್ವದ ಜಮಾತ್ ಉದ್ ದಾವಾ ಹಾಗೂ ಫಲಾಹ್ ಇ ಇನ್‌ಸಾನಿಯತ್‌ ಫೌಂಡೇಷನ್ - ಎಫ್ ಐ ಎಫ್ ಸೇರಿದಂತೆ 11 ಉಗ್ರ ಸಂಘಟನೆಗಳನ್ನು ಪಾಕಿಸ್ತಾನ ನಿಷೇಧಿಸಿದೆ.
Vijaya Karnataka Web ಉಗ್ರ ಸಂಘಟನೆ
ಉಗ್ರ ಸಂಘಟನೆ


ಮೇ 1 ರಂದು ಪಾಕಿಸ್ತಾನ ಮೂಲದ ಜೈಷೆ ಮೊಹಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿತು.

ಜಮಾತ್ ಉದ್ ದವಾ ಮತ್ತು ಅದರ ದತ್ತಿ ಶಾಖೆಯಾದ ಫಲಾಹ್ ಇನ್‌ಸಾನಿಯತ್ ಫೌಂಡೇಷನ್‌ ಅನ್ನು ಉಗ್ರ ಸಂಘಟನೆಯಾಗಿ ಘೋಷಿಸಬೇಕೆಂದು ಜಾಗತಿಕ ಒತ್ತಡದ ಹಿನ್ನೆಲೆಯಲ್ಲಿ ಪಾಕಿಸ್ತಾನ ಫೆಬ್ರವರಿಯಲ್ಲಿ ಈ ಎರಡು ಉಗ್ರ ಸಂಘಟನೆಗಳನ್ನು ನಿಷೇಧಿಸಿತ್ತು.

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಒಳಾಡಳಿತ ಸಚಿವ ಇಜಾಝ್ ಶಾ ನಡುವೆ ನಡೆದ ಚರ್ಚೆಯ ವೇಳೆ 11 ಉಗ್ರ ಸಂಘಟನೆಗಳ ನಿಷೇಧದ ನಿರ್ಣಯವನ್ನು ಕೈಗೊಳ್ಳಲಾಯಿತು.

ಪಾಕಿಸ್ತಾನದ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರ - ನ್ಯಾಕ್ಟಾ ತನ್ನ ವೆಬ್‌ಸೈಟ್‌ನಲ್ಲಿ ಘೋಷಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ