ಆ್ಯಪ್ನಗರ

ಪಾಕ್‌ ಉಗ್ರರಿಂದ ಭಾರತದ ಮೇಲೆ ದಾಳಿ?

ಭಾರತ ಹಾಗೂ ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಮೂಲದ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ.

ಟೈಮ್ಸ್ ಆಫ್ ಇಂಡಿಯಾ 12 May 2017, 11:02 am
ವಾಷಿಂಗ್ಟನ್‌: ಭಾರತ ಹಾಗೂ ಅಫಘಾನಿಸ್ತಾನದ ಮೇಲೆ ಪಾಕಿಸ್ತಾನ ಮೂಲದ ಉಗ್ರರು ದಾಳಿ ನಡೆಸುವ ಸಾಧ್ಯತೆಯಿದೆ ಎಂದು ಅಮೆರಿಕ ಗುಪ್ತಚರ ಇಲಾಖೆ ಹೇಳಿದೆ.
Vijaya Karnataka Web pak based terror groups plan to attack india afghan us intel chief
ಪಾಕ್‌ ಉಗ್ರರಿಂದ ಭಾರತದ ಮೇಲೆ ದಾಳಿ?


'ಪಾಕ್‌ ಸರಕಾರ ತನ್ನ ದೇಶದಲ್ಲಿರುವ ಉಗ್ರರನ್ನು ಮಣಿಸಲು ವಿಫಲವಾಗಿದ್ದು, ಇದನ್ನೇ ಬಂಡವಾಳವಾಗಿಸಿಕೊಂಡ ಅಲ್ಲಿನ ಉಗ್ರರು ಮುಂದಿನ ದಿನಗಳಲ್ಲಿ ಅಫಘಾನಿಸ್ತಾನ ಹಾಗೂ ಭಾರತದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ' ಎಂದು ಅಮೆರಿಕದ ಗುಪ್ತಚರ ಇಲಾಖೆಯ ಮುಖ್ಯಸ್ಥ ಡೇನಿಯಲ್‌ ಕೋಟ್ಸ್‌ ಹೇಳಿದ್ದಾರೆ.

ತನ್ನ ಅಣು ಶಕ್ತಿ ವೃದ್ಧಿಸಿ ಕೊಳ್ಳಲು ಪಾಕ್‌ ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ನಡುವೆಯೂ ತನ್ನಲ್ಲಿರುವ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಲು ವಿಫಲವಾಗಿದೆ ಎಂದು ಕೋಟ್ಸ್ ಹೇಳಿದ್ದಾರೆ.

ಅಫಘಾನಿಸ್ತಾನದ ಹಳ್ಳಿ ಪ್ರದೇಶಗಳಲ್ಲಿ ತಾಲಿಬಾನ್‌ ಉಗ್ರರು ಪಾರುಪತ್ಯ ಸಾಧಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇದೇ ಅಲ್ಲಿನ ಸರಕಾರಕ್ಕೆ ಮುಳ್ಳಾಗಿ ಪರಿಣಮಿಸಬಹುದು. ತಾಲಿಬಾನ್‌ನ ದಾಳಿ ಸೇರಿದಂತೆ ಹಲವಾರು ವಿಚಾರಗಳಿಂದಾಗಿ ಆಫ್ಘನ್‌ ಮಿಲಿಟರಿ ಪಡೆ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ಕೋಟ್ಸ್‌ ಅಭಿಪ್ರಾಯ ಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ