ಆ್ಯಪ್ನಗರ

ಜಾಧವ್‌ ಪರ ವಾದಿಸಲು ಪಾಕ್ ಕೋರ್ಟ್‌ನಿಂದ ಮೂವರು ವಕೀಲರ ನೇಮಕ!

ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪರ ವಾದಿಸಲು ಪಾಕಿಸ್ತಾನ ಕೋರ್ಟ್‌ ಮೂವರು ಹಿರಿಯ ವಕೀಲರನ್ನು ಅಮಿಕಸ್‌ ಕ್ಯುರಿಯಾಗಿ ನೇಮಕ ಮಾಡಿದೆ. ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ನಲ್ಲಿ ಕುಲಭೂಷಣ್‌ ಜಾಧವ್‌ ಅವರಿಗೆ ಗಲ್ಲುಶಿಕ್ಷೆ ವಿಧಿಸಿತ್ತು.

Vijaya Karnataka Web 5 Aug 2020, 3:54 pm
ಇಸ್ಲಾಮಾಬಾದ್‌: ಪಾಕಿಸ್ತಾನದಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪರ ವಾದಿಸಲು ಪಾಕಿಸ್ತಾನ ಕೋರ್ಟ್‌ ಮೂವರು ಹಿರಿಯ ವಕೀಲರನ್ನು ಅಮಿಕಸ್‌ ಕ್ಯುರಿಯಾಗಿ ನೇಮಕ ಮಾಡಿದೆ.
Vijaya Karnataka Web jpg - 2020-08-05T155115.213


ಬೇಹುಗಾರಿಕೆ ಆರೋಪದಲ್ಲಿ ಪಾಕಿಸ್ತಾನ ಸೇನಾ ನ್ಯಾಯಾಲಯ 2017ರ ಏಪ್ರಿಲ್‌ನಲ್ಲಿ ಕುಲಭೂಷಣ್‌ ಜಾಧವ್‌ ಅವರಿಗೆ ಗಲ್ಲುಶಿಕ್ಷೆ ವಿಧಿಸಿತ್ತು. ಜಾಧವ್‌ಗೆ ಎರಡು ಬಾರಿ ರಾಜತಾಂತ್ರಿಕ ಸಂಪರ್ಕ ಕಲ್ಪಿಸಿದ್ದರೂ ಇಲ್ಲದ ಷರತ್ತುಗಳನ್ನು ವಿಧಿಸಿದ್ದ ಪಾಕ್‌, ಇಸ್ಲಾಮಾಬಾದ್‌ ಹೈಕೋರ್ಟ್‌ ಆದೇಶದ ನಂತರ ಮೂರನೇ ಬಾರಿಗೆ ಮುಕ್ತ ರಾಜತಾಂತ್ರಿಕ ಸಂಪರ್ಕ ಕಲ್ಪಿಸಿತ್ತು. ಈಗ ಹೈಕೋರ್ಟ್‌ ಇವರ ಪರ ವಾದಿಸಲು ಮೂವರು ವಕೀಲರನ್ನು ನೇಮಿಸಿದೆ.

ಸಿಜೆ ಅಖ್ತರ್‌ ಮಿನಾಲ್ಹಾ ನೇತೃತ್ವದ ದ್ವಿಸದಸ್ಯ ಪೀಠವು, ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಅಬಿದ್‌ ಹಸನ್‌ ಮಾಂಟೊ, ಸುಪ್ರೀಂ ಕೋರ್ಟ್‌ ಬಾರ್‌ ಅಸೋಸಿಯೇಷನ್‌ ಮಾಜಿ ಮುಖ್ಯಸ್ಥ ಹಮೀದ್‌ ಖಾನ್‌ ಮತ್ತು ಪಾಕಿಸ್ತಾನದ ಮಾಜಿ ಅಟಾರ್ನಿ ಜನರಲ್‌ ಮಖ್ದೂಮ್‌ ಅಲಿ ಖಾನ್‌ ಅವರನ್ನು ಜಾಧವ್‌ ಪ್ರಕರಣದಲ್ಲಿ ವಾದ ಮಂಡಿಸಲು ಅಮಿಕಸ್‌ ಕ್ಯೂರಿಯಾಗಿ ನೇಮಕ ಮಾಡಿದೆ.

ಸ್ಪೋಟದಿಂದ ಬೈರೂತ್‌ನಲ್ಲಿ 3.5 ತೀವ್ರತೆಯ ಭೂಕಂಪ, ಮೂರು ಆಸ್ಪತ್ರೆಗಳು ನಾಶ, ತುರ್ತು ಪರಿಸ್ಥಿತಿ ಘೋಷಣೆ?

ಜಾಧವ್‌ ಅವರಿಗೆ ಪಾಕ್‌ ಸೇನಾ ನ್ಯಾಯಾಲಯ ನೀಡಿದ್ದ ಶಿಕ್ಷೆ ಪ್ರಶ್ನಿಸಲು ವಕೀಲರ ನೆರವು ಪಡೆಯಲು ಅವರಿಗೆ ಪಾಕ್‌ ಅವಕಾಶ ನಿರಾಕರಿಸಿದೆ ಎಂದು ಭಾರತ ಅಂತಾರಾಷ್ಟ್ರೀಯ ಮೊರೆ ಹೋಗಿತ್ತು. ಐಸಿಜೆ ಭಾರತ ಪರ ಆದೇಶ ನೀಡಿತ್ತು. ಇದಾದ ಬಳಿಕ ರಾಜತಾಂತ್ರಿಕ ಸಂಪರ್ಕಕ್ಕೆ ಅವಕಾಶ ಮಾಡಿಕೊಟ್ಟಿತಲ್ಲದೇ, ವಕೀಲರನ್ನೂ ನೇಮಿಸಿದೆ. ಆದರೆ ಜಾಧವ್‌ ಪರ ಭಾರತೀಯ ವಕೀಲರನ್ನು ನೇಮಿಸಲು ಇಸ್ಲಾಮಾಬಾದ್‌ ಹೈಕೋರ್ಟ್‌ ಅವಕಾಶ ನೀಡದಿರುವ ಬಗ್ಗೆ ಜಾಲತಾಣಗಳಲ್ಲಿಅಸಮಾಧಾನ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ