ಆ್ಯಪ್ನಗರ

ದುಬೈನಲ್ಲಿ ಭಾರತೀಯ ಮೂಲದ ಅಪ್ರಾಪ್ತ ಬಾಲಕಿಗೆ ಪಾಕ್ ಪ್ರಜೆಯಿಂದ ಕಿರುಕುಳ

ದುಬೈನಲ್ಲಿ ಪಾಕಿಸ್ತಾನದ ವ್ಯಕ್ತಿಯೊಬ್ಬ ಭಾರತ ಮೂಲದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಾನೆಂಬ ಆರೋಪ ಕೇಳಿ ಬಂದಿದೆ.

Navbharat Times 6 Sep 2019, 3:18 pm
ದುಬೈ: ವಸತಿ ಕಟ್ಟಡದ ಲಿಫ್ಟ್‌ವೊಂದರಲ್ಲಿ ಪಾಕ್ ಪ್ರಜೆಯೊಬ್ಬ ಭಾರತೀಯ ಮೂಲದ ಅಪ್ರಾಪ್ತ ಬಾಲಕಿಗೆ ಕಿರುಕುಳ ನೀಡಿದ್ದಾನೆಂಬ ಆರೋಪ ಕೇಳಿ ಬಂದಿದ್ದು, ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.
Vijaya Karnataka Web dubai


ಖಲೀಜ್ ಟೈಮ್ಸ್ ವರದಿ ಪ್ರಕಾರ, ಜೂನ್ 16ರಂದು ಪಾಕ್ ಮೂಲದ ಡೆಲಿವರಿ ಬಾಯ್ ಒಬ್ಬ ಭಾರತ ಮೂಲದ ಬಾಲಕಿಯನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆಂದು ನ್ಯಾಯಾಲಯದ ಅಭಿಯೋಜಕರು ದೂರಿದ್ದಾರೆ. ಆದರೆ, ಆ ವ್ಯಕ್ತಿ ಆರೋಪವನ್ನು ತಳ್ಳಿ ಹಾಕಿದ್ದಾನೆ.

'ಗಣಿತ ಶಿಕ್ಷಣ ಪಡೆಯಲು ಬಾಲಕಿ ನನ್ನ ಮನೆಗೆ ಬರುತ್ತಿದ್ದಳು. ಈ ಸಂದರ್ಭದಲ್ಲಿ ಅವಳ ಕೆಲ ವಸ್ತುಗಳನ್ನು ಮರೆತು ಬಂದಿದ್ದಳು. ಹೀಗಾಗಿ ಅವಗಳನ್ನು ತೆಗೆದುಕೊಂಡು ಬರುತ್ತೇನೆಂದು ತೆರಳಿದ್ದಳು. ಅವಳ ವಾಪಸ್ ಬಂದಾಗ ಆಕೆಯ ಮುಖದಲ್ಲಿ ಭಯವೇ ಎದ್ದು ಕಾಣುತ್ತಿತ್ತು. ಮತ್ತು ನಡಗುತ್ತಾ, ಅಳುತ್ತಿದ್ದಳು' ಎಂದು ಪೊಲೀಸ್ ತನಿಖೆಯ ವೇಳೆ ಭಾರತೀಯ ಮೂಲದ 34 ವರ್ಷದ ಮಹಿಳೆ (ಶಿಕ್ಷಕಿ) ವಿವರಿಸಿದ್ದಾರೆ.

ನಾನು ಲಿಫ್ಟ್‌ನಲ್ಲಿ ಬರುವಾಗ ವಿಳಾಸ ಕೇಳಿದ ವ್ಯಕ್ತಿಯೊಬ್ಬ ನನ್ನನ್ನು ಗಟ್ಟಿಯಾಗಿ ಹಿಡಿದುಕೊಂಡು ಎಂದು ಬಾಲಕಿ ಶಿಕ್ಷಕಿ ಬಳಿ ಹೇಳಿಕೊಂಡಿದ್ದಾಳೆ. ಕೂಡಲೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆರೋಪಿಯ ಕೃತ್ಯ ಬೆಳಕಿಗೆ ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ