ಆ್ಯಪ್ನಗರ

ಸಿಖ್‌ ಯಾತ್ರಿಕರಿಗೆ ಕಾರ್ತಾರ್ಪುರ ಗಡಿ ಮುಕ್ತಗೊಳಿಸಿದ ಪಾಕಿಸ್ತಾನ

ವೀಸಾ ಇಲ್ಲದೆ ಭಾರತದ ಸಿಖ್‌ ಯಾತ್ರಿಕರು ಕಾರ್ತಾಪುರದ ಐತಿಹಾಸಿಕ ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಲು ಕಾರ್ತಾರ್ಪುರ ಗಡಿಯನ್ನು ಶೀಘ್ರದಲ್ಲೇ ಪಾಕಿಸ್ತಾನ ತೆರೆಯಲಿದೆ.

Vijaya Karnataka 8 Sep 2018, 10:03 am
ಇಸ್ಲಾಮಾಬಾದ್‌: ವೀಸಾ ಇಲ್ಲದೆ ಭಾರತದ ಸಿಖ್‌ ಯಾತ್ರಿಕರು ಕಾರ್ತಾಪುರದ ಐತಿಹಾಸಿಕ ದರ್ಬಾರ್‌ ಸಾಹಿಬ್‌ ಗುರುದ್ವಾರಕ್ಕೆ ಭೇಟಿ ನೀಡಲು ಕಾರ್ತಾರ್ಪುರ ಗಡಿಯನ್ನು ಶೀಘ್ರದಲ್ಲೇ ಪಾಕಿಸ್ತಾನ ತೆರೆಯಲಿದೆ.
Vijaya Karnataka Web Sidhu


ಈ ಕುರಿತು ಮಾಹಿತಿ ನೀಡಿದ ಪಾಕಿಸ್ತಾನದ ಮಾಹಿತಿ ಸಚಿವ ಫವಾದ್‌ ಚೌಧರಿ, ಸಿಖ್‌ ಯಾತ್ರಿಕರು ಪ್ರವೇಶಿಸಲು ಕಾರ್ತಾರ್ಪುರ ಗಡಿಯನ್ನು ಶೀಘ್ರದಲ್ಲೇ ತೆರೆಯಲಾಗುವುದು ಎಂದು ತಿಳಿಸಿದರು. ಸಂಚಾರಕ್ಕೆ ಕಾರ್ತಾರ್ಪುರ ಗಡಿ ಮುಕ್ತಗೊಳಿಸಿದ ಪಾಕಿಸ್ತಾನದ ಈ ನಿರ್ಧಾರಕ್ಕೆ ಕಾಂಗ್ರೆಸ್‌ ಮುಖಂಡ ನವಜೋತ್‌ ಸಿಂಗ್‌ ಸಿಧು ಸೇರಿದಂತೆ ಸಿಖ್‌ ಸಮುದಾಯ ಹರ್ಷ ವ್ಯಕ್ತಪಡಿಸಿದೆ. ಇಮ್ರಾನ್‌ ಖಾನ್‌ ಪ್ರಮಾಣ ವಚನ ಸ್ವೀಕಾರಕ್ಕೆ ಪಾಕಿಸ್ತಾನಕ್ಕೆ ತೆರಳಿದ್ದ ಕಾಂಗ್ರೆಸ್‌ ನಾಯಕ ನವಜೋತ್‌ ಸಿಂಗ್‌ ಸಿಧು, ಕಾರ್ತಾರ್ಪುರ ಗಡಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಪಾಕ್‌ ಸೇನಾ ಮುಖ್ಯಸ್ಥ ಜನರಲ್‌ ಕಮರ್‌ ಜಾವೇದ್‌ ಬಾಜ್ವಾ ಅವರಿಗೆ ಮನವಿ ಮಾಡಿದ್ದರು.

ಕರ್ತಾರ್ಪುರ ಗುರುದ್ವಾರ ಭಾರತದ ಗಡಿ ಸಮೀಪ ಪಂಜಾಬ್‌ ಪ್ರಾಂತ್ಯದ ನರೋವಾಲ್‌ ಜಿಲ್ಲೆಯಲ್ಲಿದೆ. ಇಲ್ಲೇ ಸಿಖ್‌ ಧರ್ಮ ಸ್ಥಾಪಕ ಗುರುನಾನಕ್‌ ಅವರು ಇಹಲೋಕ ತ್ಯಜಿಸಿದರು ಎಂದು ನಂಬಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ