ಆ್ಯಪ್ನಗರ

ಪಾಕ್‌ ಚುನಾವಣೆ: ಮತ ಎಣಿಕೆ ಆರಂಭ, ಯಾರಿಗೆ ದಕ್ಕುತ್ತೆ ಗದ್ದುಗೆ

ಆರಂಭಿಕ ಮತ ಎಣಿಕೆಯಲ್ಲಿ ಇಮ್ರಾನ್‌ ಖಾನ್‌ ಪಕ್ಷಕ್ಕೆ ಮುನ್ನಡೆ

Vijaya Karnataka Web 25 Jul 2018, 10:25 pm
ಇಸ್ಲಾಮಾಬಾದ್‌: ಪಾಕಿಸ್ತಾನದ ನೂತನ ಅಧ್ಯಕ್ಷರು ಮತ್ತು ಪ್ರಾಂತೀಯ ವಿಧಾನಸಭೆಗೆ ನಡೆದ ಮತದಾನ ಮುಕ್ತಾಯಗೊಂಡಿದ್ದು, ಮತ ಎಣಿಕೆ ಬಿರುಸಾಗಿ ಸಾಗಿದೆ.
Vijaya Karnataka Web ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌


ಆರಂಭಿಕ ಟ್ರೆಂಡ್ಸ್‌ಗಳ ಪ್ರಕಾರ ಇಮ್ರಾನ್ ಖಾನ್‌ ನೇತೃತ್ವದ ಪಿಟಿಐ ಪಕ್ಷಕ್ಕೆ ಇತರೆ ಪಕ್ಷಗಳಿಗಿಂತ ಮುನ್ನಡೆ ಪಡೆದುಕೊಂಡಿದೆ. ಇಮ್ರಾನ್‌ ಖಾನ್‌ ನೇತೃತ್ವದ ಪಿಟಿಐ ಪಕ್ಷ 50ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಪಂಜಾಬ್‌ ಪ್ರಾಂತ್ಯದಲ್ಲಿ ಚುನಾವಣೆ ತೀವ್ರ ಜಿದ್ದಾಜಿದ್ದಿನಿಂದ ಕೂಡಿದೆ. ಈ ನಡುವೆ ಪಕ್ಷೇತರ ಅಭ್ಯರ್ಥಿಗಳು ಕೂಡ ಮುನ್ನಡೆ ಪಡೆದುಕೊಂಡಿದ್ದಾರೆ. ಒಟ್ಟಾರೆ ಮತ ಗಟ್ಟೆ ಸಮೀಕ್ಷೆಗಳ ಪ್ರಕಾರ ಇಮ್ರಾನ್‌ ನೇತೃತ್ವದ ಪಕ್ಷ ಏಕೈಕ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮುವ ಸಾಧ್ಯತೆಗಳು ನಿಚ್ಚಳವಾಗಿವೆ.


ಲಕ್ಷಾಂತರ ಮತದಾರರು 11ನೇ ಸಾರ್ವಜನಿಕ ಚುನಾವಣೆಯಲ್ಲಿ ಭಾಗಿಯಾಗಿದ್ದರು.

ಇಮ್ರಾನ್‌, ಪಿಪಿಪಿಯ ಬಿಲಾವಲ್‌ ಕೂಡ ತಮ್ಮ ಸಮೀಪದ ಪ್ರತಿಸ್ಪರ್ಧಿಗಳಿಗಿಂತ ಮುನ್ನಡೆ ಪಡೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ಮತದಾನ ವೇಳೆ ಕ್ವೆಟ್ಟಾ, ಲಾರ್ಕಾನ, ಖುಜ್ದರ್, ಸ್ವಾಬಿ ಮತ್ತು ಕೋಯಿಸ್ತಾನ್ ಪ್ರದೇಶಗಳಲ್ಲಿ ಕೆಲ ಹಿಂಸಾತ್ಮಕ ಕೃತ್ಯಗಳು ನಡೆದವು. ಘಟನೆಯಲ್ಲಿ 35 ಮಂದಿ ಮೃತಪಟ್ಟಿದ್ದು, 65 ಮಂದಿಗೆ ಗಾಯಗಳಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ