ಆ್ಯಪ್ನಗರ

ಕಾಶ್ಮೀರ ವಿಚಾರದಲ್ಲಿ ಪಾಕ್ ಪ್ರಯತ್ನ ವಿಫಲ: ಮೋದಿ ಸಾಮರ್ಥ್ಯದ ಮುಂದೆ ಮಂಡಿಯೂರಿದ ಇಮ್ರಾನ್‌

ಕಾಶ್ಮೀರದ ವಿಚಾರದಲ್ಲಿ ಪಾಕಿಸ್ತಾನ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿವೆ ಎಂದು ಇಮ್ರಾನ್ ಖಾನ್ ಒಪ್ಪಿಕೊಂಡಿದ್ದಾರೆ.

PTI 26 Sep 2019, 6:56 am
ನ್ಯೂಯಾರ್ಕ್: ಜಮ್ಮ-ಕಾಶ್ಮೀರ ವಿಚಾರವನ್ನು ಜಾಗತಿಕ ಮಟ್ಟದ ವಿಚಾರವನ್ನಾಗಿಸುವಲ್ಲಿಪಾಕಿಸ್ತಾನ ನಡೆಸಿದ ಪ್ರಯತ್ನಗಳು ವಿಫಲವಾಗಿವೆ ಎಂದು ಪ್ರಧಾನಿ ಇಮ್ರಾನ್‌ ಖಾನ್‌ ಒಪ್ಪಿಕೊಂಡಿದ್ದಾರೆ.
Vijaya Karnataka Web imran khan


370ನೇ ವಿಧಿ ರದ್ದು ಬಳಿಕ ಹಲವು ಜಾಗತಿಕ ವೇದಿಕೆಗಳಲ್ಲಿ ಭಾರತದ ವಿರುದ್ಧ ದೂರು ನೀಡಲು ಯತ್ನಿಸಿದರೂ, ಅಲ್ಲೆಲ್ಲಾಭಾರತಕ್ಕೆ ಬೆಂಬಲ ದೊರೆತ ಹಿನ್ನೆಲೆಯಲ್ಲಿಇಮ್ರಾನ್‌ ಖಾನ್‌ ಅಸಹಾಯಕತೆ ಮತ್ತು ಹತಾಶೆ ವ್ಯಕ್ತಪಡಿಸಿದ್ದಾರೆ.

''ಅಂತಾರಾಷ್ಟ್ರೀಯ ಸಮುದಾಯದ ನಡೆಯಿಂದ ನನಗೆ ನಿರಾಸೆಯಾಗಿದೆ. ಪ್ರಧಾನಿ ಮೋದಿ ಅವರ ಮೇಲೆ ಇನ್ನೂ ಜಾಗತಿಕ ಸಮುದಾಯ ಒತ್ತಡ ಹೇರುತ್ತಿಲ್ಲ. ಆದರೆ ಪಾಕಿಸ್ತಾನ ಮಾತ್ರ ತನ್ನ ಪ್ರಯತ್ನವನ್ನು ಮುಂದುವರಿಸಲಿದೆ,'' ಎಂದು ಇಮ್ರಾನ್‌ ಹೇಳಿದ್ದಾರೆ.

''ಭಾರತದ ಆರ್ಥಿಕ ಸ್ಥಿತಿಗತಿ ಮತ್ತು ಜಾಗತಿಕ ಪ್ರಾಬಲ್ಯದ ಹಿನ್ನೆಲೆಯೂ ಜಾಗತಿಕ ಸಮುದಾಯದ ಮೇಲೆ ಪರಿಣಾಮ ಬೀರಿದೆ. ಹೀಗಾಗಿಯೇ ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ಅಳಲು ಅಂತಾರಾಷ್ಟ್ರೀಯ ಸಮುದಾಯದ ಕಿವಿಗೆ ಬೀಳುತ್ತಿಲ್ಲ,'' ಎಂದು ಇಮ್ರಾನ್‌ ಆರೋಪಿಸಿದ್ದಾರೆ.

ಯುದ್ಧ ಆಯ್ಕೆಯಲ್ಲ

ಕಾಶ್ಮೀರ ವಿಚಾರವಾಗಿ ಭಾರತದ ಮೇಲೆ ಯುದ್ಧ ಸಾರುವುದು ಪಾಕಿಸ್ತಾನದ ಆಯ್ಕೆಯಲ್ಲಎಂದು ಇಮ್ರಾನ್‌ ಹೇಳಿದ್ದಾರೆ. ''ನಾವು ಭಾರತದ ಮೇಲೆ ದಾಳಿ ನಡೆಸಲು ಸಾಧ್ಯವಿಲ್ಲ. ಅದು ನಮ್ಮ ಆಯ್ಕೆಯಲ್ಲಎಂಬುದು ಸ್ಪಷ್ಟ. ಅದರ ಹೊರತಾಗಿ ಸಾಧ್ಯವಾದ ಉಳಿದೆಲ್ಲಾಪ್ರಯತ್ನಗಳನ್ನು ಮಾಡುತ್ತಿದ್ದೇವೆ. ''ಕಳೆದ 50 ದಿನದಿಂದ 9,00,000 ಯೋಧರು ಕಾಶ್ಮೀರದ ಜನತೆಯನ್ನು ಕೂಡಿ ಹಾಕಿದ್ದಾರೆ. ಅಲ್ಲಿಏನು ನಡೆಯುತ್ತಿದೆ ಎಂಬುದನ್ನು ಹೊರಜಗತ್ತಿಗೆ ಗೊತ್ತಾಗದಂತೆ ಮಾಧ್ಯಮಗಳ ಮೇಲೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ,'' ಎಂದು ಖಾನ್‌ ಆರೋಪಿಸಿದ್ದಾರೆ.

ಗುಟೆರ್ರೆಸ್‌ಗೆ ಪಾಕ್‌ ಸಚಿವನ ಪತ್ರ


ಜಮ್ಮು-ಕಾಶ್ಮೀರದಲ್ಲಿ370ನೇ ವಿಧಿ ರದ್ದತಿಗೆ ಸಂಬಂಧಿಸಿದಂತೆ ಭಾರತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತೀರ್ಮಾನಗಳನ್ನು ಉಲ್ಲಂಘಿಘಿಸಿದೆ ಎಂದು ದೂರಿ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮಹಮೂದ್‌ ಖುರೇಷಿ ಅವರು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಭದ್ರತಾ ಮಂಡಳಿ ಮುಖ್ಯಸ್ಥರಿಗೆ ಪತ್ರ ಬರೆದಿದ್ದಾರೆ.

ಟೆರರಿಸ್ತಾನದೊಂದಿಗೆ ಮಾತುಕತೆ ಅಸಾಧ್ಯ


ನ್ಯೂಯಾರ್ಕ್: ಪಾಕಿಸ್ತಾನದ ಜತೆ ಮಾತನಾಡಲು ಭಾರತಕ್ಕೆ ಯಾವುದೇ ಅಭ್ಯಂತರವಿಲ್ಲ. ಆದರೆ, 'ಟೆರರಿಸ್ತಾನ'ದ ಜತೆ ಮಾತುಕತೆ ಅಸಾಧ್ಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌. ಜೈಶಂಕರ್‌ ಹೇಳಿದ್ದಾರೆ.

ಇದೇ ವೇಳೆ ಕಾಶ್ಮೀರ ವಿಚಾರವಾಗಿ ಭಾರತದ ವಿರುದ್ಧ ಹೋರಾಟಕ್ಕಾಗಿ ಪಾಕಿಸ್ತಾನ ಭಯೋತ್ಪಾದನೆಯ ದೊಡ್ಡ ಕಾರ್ಖಾನೆಯನ್ನೇ ತೆರೆದಿದೆ ಎಂದು ಅವರು ಆಪಾದಿಸಿದ್ದಾರೆ.

ನ್ಯೂಯಾರ್ಕ್ನಲ್ಲಿ'ಏಷಿಯಾ ಸೊಸೈಟಿ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿಭಾಗವಹಿಸಿ ಮಾತನಾಡಿದ ಅವರು, ''ಪಾಕಿಸ್ತಾನ ದ್ವಂದ್ವ ನಡೆಗಳನ್ನು ಬಿಟ್ಟು ನೈಜ ಉದ್ದೇಶದಿಂದ ಮಾತುಕತೆಗೆ ಮುಂದೆ ಬಂದರೆ ನಮ್ಮ ಅಭ್ಯಂತರವಿಲ್ಲ,'' ಎಂದರು. ಇದೇ ವೇಳೆ, 370ನೇ ವಿಧಿ ರದ್ದು ಮೂಲಕ ಭಾರತ ಯಾವುದೇ ಅಂತಾರಾಷ್ಟ್ರೀಯ ಗಡಿಗಳನ್ನು ಮಾರ್ಪಾಡು ಮಾಡಿಲ್ಲ. ಬದಲಿಗೆ ಅದು ತನ್ನ ಗಡಿಯೊಳಗಿನ ಆಂತರಿಕ ವಿಚಾರಕ್ಕೆ ಸಂಬಂಧಿಸಿದ ನಿರ್ಣಯ,'' ಎಂದು ಜೈಶಂಕರ್‌ ಸಮರ್ಥಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ