ಆ್ಯಪ್ನಗರ

ಕಿಶನ್‌ಗಂಗಾ: ವಿಶ್ವ ಬ್ಯಾಂಕ್‌ಗೆ ಪಾಕ್‌ ದೂರು

ಕಾಶ್ಮೀರದಲ್ಲಿ ಕಿಶನ್‌ಗಂಗಾ ಜಲವಿದ್ಯುತ್‌ ಯೋಜನೆ ಉದ್ಘಾಟಿಸುವ ಮೂಲಕ ಭಾರತವು ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನವು ವಿಶ್ವಬ್ಯಾಂಕ್‌ಗೆ ದೂರು ಸಲ್ಲಿಸಿದೆ.

Vijaya Karnataka 23 May 2018, 9:10 am
ವಾಷಿಂಗ್ಟನ್‌: ಕಾಶ್ಮೀರದಲ್ಲಿ ಕಿಶನ್‌ಗಂಗಾ ಜಲವಿದ್ಯುತ್‌ ಯೋಜನೆ ಉದ್ಘಾಟಿಸುವ ಮೂಲಕ ಭಾರತವು ಸಿಂಧೂ ಜಲ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಪಾಕಿಸ್ತಾನವು ವಿಶ್ವಬ್ಯಾಂಕ್‌ಗೆ ದೂರು ಸಲ್ಲಿಸಿದೆ.
Vijaya Karnataka Web Kishan Ganga


ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 330 ಮೆಗಾವ್ಯಾಟ್‌ ಸಾಮರ್ಥ್ಯ‌ದ ಕಿಶನ್‌ಗಂಗಾ ಜಲವಿದ್ಯುತ್‌ ಯೋಜನೆ ಉದ್ಘಾಟಿಸಿದ ಬೆನ್ನಲ್ಲೇ ಅಟಾರ್ನಿ ಜನರಲ್‌ ಅಶ್ತರ್‌ ಆಸಫ್‌ ಅಲಿ ನೇತೃತ್ವದ ನಾಲ್ವರು ಸದಸ್ಯರ ಪಾಕಿಸ್ತಾನಿ ನಿಯೋಗವು ವಿಶ್ವಬ್ಯಾಂಕ್‌ ಅಧಿಕಾರಿಗಳನ್ನು ಭೇಟಿ ನೀಡಿ, ದೂರು ಸಲ್ಲಿಸಿದೆ.

ಪಾಕಿಸ್ತಾನಕ್ಕೆ ಹರಿಯುವ ನದಿಗೆ ಅಡ್ಡಲಾಗಿ ಕಟ್ಟುವ ಅಣೆಕಟ್ಟೆಯಿಂದಾಗಿ ನೀರಿನ ಹರಿವಿಗೆ ಅಡ್ಡಿಯಾಗುತ್ತದೆ ಎಂಬ ಪಾಕಿಸ್ತಾನದ ಪ್ರತಿಭಟನೆ ನಡುವೆಯೇ ಜಲವಿದ್ಯುತ್‌ ಯೋಜನೆಯನ್ನು ಭಾರತ ಆರಂಭಿಸಿದೆ. ''ವಿವಾದದ ಕುರಿತು ಎರಡೂ ದೇಶಗಳ ನಡುವೆ ನಿರ್ಣಯವಿಲ್ಲದೇ ಉದ್ಘಾಟನೆಗೊಂಡಿರುವ ಈ ಯೋಜನೆಯು, ನದಿ ನೀರಿನ ಬಳಕೆಯನ್ನು ನಿಯಂತ್ರಿಸುವ 1960ರ ಸಿಂಧೂ ಜಲ ಒಪ್ಪಂದದ ಉಲ್ಲಂಘನೆಯಾಗಿದೆ,'' ಎಂದು ಪಾಕ್‌ ವಿದೇಶಾಂಗ ಸಚಿವಾಲಯ ಪ್ರತಿಪಾದಿಸಿದೆ.

''ಸಿಂಧೂ ಜಲ ಒಪ್ಪಂದವು ಮಾನವ ಅಗತ್ಯಗಳನ್ನು ಪೂರೈಸಲು ಮತ್ತು ಅಭಿವೃದ್ಧಿಯ ಗುರಿಗಳನ್ನು ಸಾಧಿಸಲು ಪರಿಣಾಮಕಾರಿ ಜಲ ನಿರ್ವಹಣೆಯ ಪ್ರಸ್ತುತ ಮತ್ತು ಭವಿಷ್ಯದ ಸವಾಲುಗಳನ್ನು ಪರಿಹರಿಸಲು ಭಾರತ, ಪಾಕಿಸ್ತಾನಗಳಿಗೆ ಸಹಕಾರಿ ಚೌಕಟ್ಟನ್ನು ಒದಗಿಸಿದೆ. ಪಾಕಿಸ್ತಾನ ನಿಯೋಗ ವ್ಯಕ್ತಪಡಿಸಿರುವ ಕಳವಳವನ್ನು ಗಮನದಲ್ಲಿಟ್ಟುಕೊಂಡು ಮತ್ತು ಒಪ್ಪಂದದಲ್ಲಿನ ಅವಕಾಶಗಳನ್ನು ಗಣನೆಗೆ ತೆಗೆದುಕೊಂಡು ಸೌಹಾರ್ದಯುತ ತೀರ್ಮಾನಕ್ಕೆ ಬರಲಾಗುತ್ತದೆ,'' ಎಂದು ವಿಶ್ವಬ್ಯಾಂಕ್‌ ವಕ್ತಾರರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ