ಆ್ಯಪ್ನಗರ

ವಿಶ್ವ ಏನೇ ಹೇಳಿದರೂ ಜಿಹಾದ್‌ಗೆ ಪಾಕ್‌ ಬೆಂಬಲವಿದೆ : ಇಮ್ರಾನ್‌ ಖಾನ್‌

ಕಾಶ್ಮೀರಿಗಳು ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿರುವ ಹೋರಾ­ಟಕ್ಕೆ ಭಾರತವು 'ಇಸ್ಲಾಮಿಕ್‌ ಭಯೋತ್ಪಾ­ದನೆ' ಹಣೆಪಟ್ಟಿ ಕಟ್ಟಿದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗಂಭೀರ ಆರೋಪ ಮಾಡಿ­ದ್ದಾರೆ. ಇದೇ ವೇಳೆ, ಪಾಕಿಸ್ತಾ­ನದ ಜನತೆ ಮತ್ತು ಸರಕಾರ­ದಿಂದ ಕಾಶ್ಮೀರಿಗಳಿಗೆ ಬೆಂಬಲ ಮುಂದುವರಿಯಲಿದೆ ಎಂದು ಪುನರುಚ್ಛರಿ­ಸಿ­ದ್ದಾರೆ.

Vijaya Karnataka 6 Oct 2019, 7:32 am
ಇಸ್ಲಾಮಾಬಾದ್‌: ಕಾಶ್ಮೀರಿಗಳು ಸ್ವಾತಂತ್ರ್ಯಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಭಾರತವು 'ಇಸ್ಲಾಮಿಕ್‌ ಭಯೋತ್ಪಾದನೆ' ಹಣೆಪಟ್ಟಿಯನ್ನು ಕಟ್ಟಿದೆ ಎಂದು ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಗಂಭೀರ ಆರೋಪ ಮಾಡಿದ್ದಾರೆ. ಇದೇ ವೇಳೆ, ಪಾಕಿಸ್ತಾನದ ಜನತೆ ಮತ್ತು ಸರಕಾರದಿಂದ ಕಾಶ್ಮೀರಿಗಳಿಗೆ ಬೆಂಬಲ ಮುಂದುವರಿಯಲಿದೆ ಎಂದು ಪುನರುಚ್ಛರಿಸಿದ್ದಾರೆ.
Vijaya Karnataka Web imran khan


''ಜಮ್ಮು-ಕಾಶ್ಮೀರ­ದಲ್ಲಿಕಾಶ್ಮೀರಿಗಳ ವೇದನೆಯನ್ನು ನಾನು ಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ. ಅಲ್ಲಿನ ಜನತೆಯು ಎರಡು ತಿಂಗಳಿಂದ ಅಮಾನವೀಯ ಕಫ್ರ್ಯೂ ಅಡಿಯಲ್ಲಿನಲುಗುತ್ತಿದ್ದಾರೆ,'' ಎಂದು ಖಾನ್‌ ಟ್ವೀಟಿಸಿದ್ದಾರೆ.

''ಗಡಿ ನಿಯಂತ್ರಣ ರೇಖೆ ದಾಟಿ ಯಾರಾದರೂ ಮಾನವೀಯತೆ­ಯಿಂದ ಕಾಶ್ಮೀರಿಗಳತ್ತ ಸಹಾಯ ಹಸ್ತ ಚಾಚಿದರೆ ಅಥವಾ ಅವರ ಹೋರಾಟಕ್ಕೆ ಬೆಂಬಲಿಸಿದರೆ, ಅದನ್ನು ಪಾಕ್‌ ಪ್ರಾಯೋ­ಜಿತ 'ಇಸ್ಲಾಮಿಕ್‌ ಭಯೋತ್ಪಾ­ದನೆ' ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ,'' ಎಂದು ಮತ್ತೊಂದು ಟ್ವೀಟ್‌ನಲ್ಲಿಇಮ್ರಾನ್‌ ಆರೋಪಿಸಿದ್ದಾರೆ.

ಕಾಶ್ಮೀರಿಗಳಿಗೆ ನೆರವು ನೀಡುವ ಉದ್ದೇಶದಿಂದ ಗಡಿ ನಿಯಂತ್ರಣ ರೇಖೆ ದಾಟಿ ಶ್ರೀನಗರದತ್ತ ತೆರಳದಂತೆಯೂ ಅವರು ಪಾಕ್‌ ಆಕ್ರಮಿತ ಕಾಶ್ಮಿರದ ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಇತ್ತೀಚೆಗೆ ಅಮೆರಿಕ ಪ್ರವಾಸದಿಂದ ವಾಪಸಾದ ಬಳಿಕ, ''ಕಾಶ್ಮೀರಿಗಳ ಬೆಂಬಲವಾಗಿ ನಿಂತಿರುವವರು 'ಜಿಹಾದ್‌' ಮಾಡುತ್ತಿದ್ದು, ವಿಶ್ವವು ಏನೇ ಹೇಳಿದರೂ ಪಾಕಿಸ್ತಾನ ಅವರಿಗೆ ಬೆಂಬಲ ಮುಂದುವರಿಸಲಿದೆ,'' ಎಂದು ಖಾನ್‌ ಹೇಳಿದ್ದರು.

ಲೋಧಿ ವಜಾ ಅಲ್ಲ, ಬದಲಾವಣೆ: ವಿಶ್ವ ಸಂಸ್ಥೆಯಲ್ಲಿ ದೇಶದ ಕಾಯಂ ಪ್ರತಿನಿಧಿಯಾಗಿದ್ದ ಮಲೀಹಾ ಲೋಧಿ ಅವರನ್ನು ಹುದ್ದೆಯಿಂದ ಕಿತ್ತು ಹಾಕಿದ್ದಲ್ಲ, ಬದಲಾಗಿ ಅವರ ಅವಧಿ ಮುಕ್ತಾಯವಾಗಿದ್ದರಿಂದ ಅವರ ಜಾಗಕ್ಕೆ ಮುನೀರ್‌ ಅಕ್ರಮ್‌ ಅವರನ್ನು ನೇಮಿಸಿದ್ದು ಎಂದು ಪಾಕಿಸ್ತಾನ ಸ್ಪಷ್ಟನೆ ನೀಡಿದೆ.

ಇಮ್ರಾನ್‌ ಖಾನ್‌ ಅವರು ವಿಶ್ವ ಸಂಸ್ಥೆ ಮಹಾಧಿವೇಶನದಲ್ಲಿ ಭಾರತದ ವಿರುದ್ಧ ಆಕ್ಷೇಪವೆತ್ತಿದ ಮರುದಿನವೇ, ಭಾರತ ವಿರೋಧಿ ನಿಲುವಿಗೆ ಹೆಸರಾದ ಖಾನ್‌ ನೇಮಕವಾಗಿದ್ದು ಚರ್ಚೆಗೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ