ಆ್ಯಪ್ನಗರ

ಭಯೋತ್ಪಾದಕ ಹಫೀಜ್ ಸಯೀದ್‌ಗೆ ಜೀವಬೆದರಿಕೆ: ಭದ್ರತೆ ಹೆಚ್ಚಿಸಲು ಪಾಕ್ ಆದೇಶ

ಮುಂಬಯಿ ದಾಳಿಗಳ ರೂವಾರಿ ಹಫೀಜ್‌ ಸಯೀದ್‌ನ ಭದ್ರತೆ ಹೆಚ್ಚಿಸುವಂತೆ ಪಂಜಾಬ್‌ ಗೃಹ ಇಲಾಖೆಗೆ ಪಾಕಿಸ್ತಾನಿ ಅಧಿಕಾರಿಗಳು ಸೂಚಿಸಿದ್ದಾರೆ. ಸಯೀದ್‌ ಹತ್ಯೆಗೆ 'ವಿದೇಶಿ ಗುಪ್ತಚರ ಸಂಸ್ಥೆ' ಸಂಚು ಹೂಡಿದೆ ಎಂದು ಪಾಕ್‌ ಆರೋಪಿಸಿದೆ.

Vijaya Karnataka Web 11 Nov 2017, 8:49 pm
ಲಾಹೋರ್‌: ಮುಂಬಯಿ ದಾಳಿಗಳ ರೂವಾರಿ ಹಫೀಜ್‌ ಸಯೀದ್‌ನ ಭದ್ರತೆ ಹೆಚ್ಚಿಸುವಂತೆ ಪಂಜಾಬ್‌ ಗೃಹ ಇಲಾಖೆಗೆ ಪಾಕಿಸ್ತಾನಿ ಅಧಿಕಾರಿಗಳು ಸೂಚಿಸಿದ್ದಾರೆ. ಸಯೀದ್‌ ಹತ್ಯೆಗೆ 'ವಿದೇಶಿ ಗುಪ್ತಚರ ಸಂಸ್ಥೆ' ಸಂಚು ಹೂಡಿದೆ ಎಂದು ಪಾಕ್‌ ಆರೋಪಿಸಿದೆ.
Vijaya Karnataka Web pakistani authorities want beefed up security for hafiz saeed
ಭಯೋತ್ಪಾದಕ ಹಫೀಜ್ ಸಯೀದ್‌ಗೆ ಜೀವಬೆದರಿಕೆ: ಭದ್ರತೆ ಹೆಚ್ಚಿಸಲು ಪಾಕ್ ಆದೇಶ


ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರ (ಎನ್‌ಸಿಟಿಎ) ಪಂಜಾಬ್ ಸರಕಾರಕ್ಕೆ ಬರೆದ ಪತ್ರದಲ್ಲಿ, ಸಯೀದ್‌ ಹತ್ಯೆಗೆ ವಿದೇಶಿ ಬೇಹುಗಾರಿಕೆ ಸಂಸ್ಥೆಯೊಂದು ನಿಷೇಧಿತ ಸಂಘಟನೆಯ ಇಬ್ಬರು ಕಾರ್ಯಕರ್ತರಿಗೆ 8 ಕೋಟಿ ರೂ ಪಾವತಿಸಿದೆ ಎಂದು ಹೇಳಿಕೊಂಡಿದೆ.

ಈಗಾಗಲೇ ಗೃಹಬಂಧನದಲ್ಲಿರುವ ಜಮಾತ್‌ ಉದ್‌-ದಾವಾ ಮುಖ್ಯಸ್ಥ ಸಯೀದ್‌ಗೆ ದೋಷರಹಿತ ಭದ್ರತೆ ಒದಗಿಸುವಂತೆ ಪಾಕ್ ಸರಕಾರ ಆದೇಶಿಸಿದೆ.

1997ರ ಭಯೋತ್ಪಾದನೆ ವಿರೋದಧಿ ಕಾಯ್ದೆಯ ಅನ್ವಯ ಸಯೀದ್‌ ಜನವರಿ 30ರಿಂದ ಲಾಹೋರ್‌ನಲ್ಲಿ ಗೃಹಬಂಧನದಲ್ಲಿದ್ದಾನೆ. ಸಾರ್ವಜನಿಕ ಸುರಕ್ಷತೆ ಕಾಯ್ದೆ ಅಡಿಯಲ್ಲಿ ಆತನ ಗೃಹಬಂಧನವನ್ನು 30 ದಿನಗಳ ಕಾಲ ವಿಸ್ತರಿಸಿ ಗೃಹಸಚಿವಾಲಯ ಆದೇಶಿಸಿತ್ತು.

ಜೆಯುಡಿಯನ್ನು ವಿದೇಶಿ ಭಯೋತ್ಪಾದಕ ಸಂಘಟನೆ ಎಂದು 2014ರಲ್ಲಿ ಅಮೆರಿಕ ಘೋಷಿಸಿತ್ತು. ಅಲ್ಲದೆ ಸಯೀದ್‌ ತಲೆಗೆ 1 ಕೋಟಿ ಡಾಲರ್‌ ಬಹುಮಾನವನ್ನೂ ಪ್ರಕಟಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ