ಆ್ಯಪ್ನಗರ

ಫೈಜರ್‌ ಲಸಿಕೆಯಿಂದ ಕೊರೊನಾ ಅಂತ್ಯ: ತಜ್ಞರ ವಿಶ್ವಾಸ

​​"ಈ ಲಸಿಕೆಯು ಮಾನವನ ರೋಗ ನಿರೋಧಕ ಶಕ್ತಿಯ ಜೈವಿಕ ವ್ಯವಸ್ಥೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ. ವಿಶ್ವವನ್ನು ಕೊರೊನಾ ಮುಕ್ತಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ," ಎಂದು ಬಯೋ ಅಂಡ್‌ ಟೆಕ್‌ ಕಂಪನಿ ಮುಖ್ಯಸ್ಥ ಉಗರ್‌ ಸಾಹಿನ್‌ ಹೇಳಿದ್ದಾರೆ.

Agencies 14 Nov 2020, 8:20 pm
ವಾಷಿಂಗ್ಟನ್‌: ತಮ್ಮ ಕಂಪನಿಗಳು ಜಂಟಿಯಾಗಿ ಅಭಿವೃದ್ಧಿಪಡಿಸಿರುವ ಕೋವಿಡ್‌ ಲಸಿಕೆ ಮುಂದಿನ ದಿನಗಳಲ್ಲಿ ವಿಶ್ವದಿಂದ ಕೊರೊನಾ ಪಿಡುಗನ್ನು ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಲಿದೆ ಎಂದು ಜರ್ಮನಿಯ ಬಯೋ ಅಂಡ್‌ ಟೆಕ್‌ ಮತ್ತು ಅಮೆರಿಕದ ಫೈಜರ್‌ ಔಷಧ ತಯಾರಿಕಾ ಕಂಪನಿಗಳು ಹೇಳಿಕೊಂಡಿವೆ.
Vijaya Karnataka Web Pfizer


ಕೋವಿಡ್‌ ಲಸಿಕೆ ಅತ್ಯಂತ ಮಹತ್ವದ ಮೂರನೇ ಹಂತದ ಪ್ರಯೋಗದಲ್ಲಿ ಶೇಕಡ 90ರಷ್ಟು ಪರಿಣಾಮಕಾರಿಯಾಗಿದೆ ಎಂದು ಕಂಪನಿಗಳು ಈಗಾಗಲೇ ಹೇಳಿಕೊಂಡಿವೆ.

"ಈ ಲಸಿಕೆಯು ಮಾನವನ ರೋಗ ನಿರೋಧಕ ಶಕ್ತಿಯ ಜೈವಿಕ ವ್ಯವಸ್ಥೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಬೀರುವುದಿಲ್ಲ ಎಂಬುದು ಈಗಾಗಲೇ ಅನೇಕ ಹಂತದ ಸಂಶೋಧನೆಗಳಿಂದ ತಿಳಿದುಬಂದಿದೆ. ಲಕ್ಷಣ ರಹಿತ ಸೋಂಕಿತರಿಗೂ ಇದು ಪರಿಣಾಮಕಾರಿಯಾಗಲಿದೆ. ವಿಶ್ವವನ್ನು ಕೊರೊನಾ ಮುಕ್ತಗೊಳಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸಲಿದೆ," ಎಂದು ಬಯೋ ಅಂಡ್‌ ಟೆಕ್‌ ಕಂಪನಿ ಮುಖ್ಯಸ್ಥ ಉಗರ್‌ ಸಾಹಿನ್‌ ಹೇಳಿದ್ದಾರೆ.

ಫೈಜರ್‌ ಕೊರೊನಾ ಲಸಿಕೆಗೆ ನೂರಾರು ಅಡ್ಡಿ, ಮೈನಸ್‌ 70 ಡಿಗ್ರಿಯಲ್ಲಿ ವಾಕ್ಸಿನ್‌ ಶೇಖರಿಸಿಡುವುದೇ ಕಷ್ಟ
"ಈಗಾಗಲೇ ಅಭಿವೃದ್ಧಿಪಡಿಸಿರುವ ಲಸಿಕೆಯನ್ನು ವಿವಿಧ ವಯೋಮಾನದ ಹಾಗೂ ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಕೊರೊನಾ ಪೀಡಿತರ ಮೇಲೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಮನುಷ್ಯನ ದೇಹ ಪ್ರವೇಶಿಸಿದ ಬಳಿಕ ವೈರಸ್‌ನ ಬೆಳವಣಿಗೆ ಮತ್ತು ಜೀವಕೋಶಗಳ ಕುರಿತು ಸೂಕ್ಮಾತಿಸೂಕ್ಷ್ಮ ಸಂಗತಿಗಳನ್ನು ವಿಶ್ಲೇಷಿಸಲಾಗಿದ್ದು, ಇದು ಪರಿಣಾಮಕಾರಿ ಲಸಿಕೆಯಾಗುವುದರಲ್ಲಿ ಅನುಮಾನವೇ ಇಲ್ಲ," ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ