ಆ್ಯಪ್ನಗರ

ವಿಮಾನ ಎಂಜಿನ್‌ಗೆ ಬಡಿದ ಹಕ್ಕಿಗಳು, ತುರ್ತು ಭೂಸ್ಪರ್ಶ ಮಾಡಿ 233 ಮಂದಿ ಜೀವ ಉಳಿಸಿದ ಪೈಲಟ್‌

ವಿಮಾನ ಹಾರಾಟ ಸಂದರ್ಭದಲ್ಲಿ ಹಕ್ಕಿಗಳು ಭಾರಿ ಸಮಸ್ಯೆ ನೀಡುತ್ತವೆ. ಎಂಜಿನ್‌ಗೆ ಹಕ್ಕಿಗಳು ಬಡಿಯುವುದರಿಂದ ತಾಂತ್ರಿಕ ತೊಂದರೆ ಕೂಡ ಕಾಣಿಸಿಕೊಂಡಿದೆ. ಇಂಥ ಸಂದರ್ಭದಲ್ಲಿ ಪೈಲಟ್‌ ತೋರುವ ಸಮಯ ಪ್ರಜ್ಞೆ ಪ್ರಯಾಣಿಕರ ಜೀವ ಉಳಿಸುತ್ತದೆ.

Vijaya Karnataka Web 15 Aug 2019, 8:43 pm
Vijaya Karnataka Web ಹೊಲದಲ್ಲಿ ವಿಮಾನ
ಹೊಲದಲ್ಲಿ ವಿಮಾನ
ಮಾಸ್ಕೊ: ಹಕ್ಕಿಗಳ ಹಿಂಡು ವಿಮಾನದ ಎಂಜಿನ್‌ಗೆ ಬಡಿದಿದ್ದರಿಂದ ಆಗಬಹುದಾದ ದುರಂತವನ್ನು ಪೈಲಟ್‌ ತಮ್ಮ ಸಮಯ ಪ್ರಜ್ಞೆಯ ಮೂಲಕ ತಪ್ಪಿಸಿದ್ದಾರೆ.

ಅಲ್ಲದೇ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿಸುವುದರ ಮೂಲಕ 233 ಪ್ರಯಾಣಿಕರ ಜೀವ ರಕ್ಷಿಸಿದ್ದಾರೆ ಪೈಲಟ್‌ ಈಗ ಹೀರೋ ಎನಿಸಿದ್ದಾರೆ.

ರಷ್ಯಾದ ವಿಮಾನ ಟೇಕಾಫ್‌ ಆಗುತ್ತಿದ್ದಂತೆ ಹಕ್ಕಿಗಳ ಹಿಂಡು ಎಂಜಿನ್‌ಗೆ ಬಡಿಯಿತು. ಇದರಿಂದ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು.

ಇದನ್ನು ಗಮನಿಸಿದ ಕೂಡಲೇ ಸಮೀಪದ ಹೊಲದಲ್ಲಿ ವಿಮಾನವನ್ನು ತುರ್ತು ಭೂ ಸ್ಪರ್ಶ ಮಾಡಿದರು. ವಿಮಾನದಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು.

ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಮಾಡಲು ಪ್ರಯತ್ನಿಸಿದರು. ಇದು ಸಾಧ್ಯವಾಗದ ಕಾರಣ ಸಮೀಪದ ಹೊಲದಲ್ಲಿ ತುರ್ತು ಭೂ ಸ್ಪರ್ಶ ಮಾಡುವ ನಿರ್ಧಾರ ಕೈಗೊಂಡ ಪೈಲಟ್‌ ಪ್ರಯಾಣಿಕರ ಪಾಲಿಗೆ ದೇವರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ