ಆ್ಯಪ್ನಗರ

ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹತ್ಯೆ ಸಂಚು ವಿಫಲ

ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹತ್ಯೆಗೆ ಯತ್ನಕ್ಕೆ ರೂಪಿಸಿದ್ದ ಸಂಚನ್ನು ಭದ್ರತಾ ಪಡೆ ಭಗ್ನಗೊಳಿಸಿದೆ. ಇಬ್ಬರು ಉಗ್ರರು ಅವರನ್ನು ಹತ್ಯೆ ಮಾಡಲು ಮುಂದಾಗಿದ್ದರು. ಈ ವಿಷಯವನ್ನು ಯುಕೆ ಮೆಟ್ರೊಪಾಲಿಟನ್ ಪೊಲೀಸರು ಬುಧವಾರ ಬಹಿರಂಗಪಡಿಸಿದ್ದಾರೆ.

TNN 6 Dec 2017, 12:49 pm
ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹತ್ಯೆಗೆ ಯತ್ನಕ್ಕೆ ರೂಪಿಸಿದ್ದ ಸಂಚನ್ನು ಭದ್ರತಾ ಪಡೆ ಭಗ್ನಗೊಳಿಸಿದೆ. ಇಬ್ಬರು ಉಗ್ರರು ಅವರನ್ನು ಹತ್ಯೆ ಮಾಡಲು ಮುಂದಾಗಿದ್ದರು. ಈ ವಿಷಯವನ್ನು ಯುಕೆ ಮೆಟ್ರೊಪಾಲಿಟನ್ ಪೊಲೀಸರು ಬುಧವಾರ ಬಹಿರಂಗಪಡಿಸಿದ್ದಾರೆ.
Vijaya Karnataka Web plot to kill uk pm theresa may foiled report
ಬ್ರಿಟನ್ ಪ್ರಧಾನಿ ಥೆರೆಸಾ ಮೇ ಹತ್ಯೆ ಸಂಚು ವಿಫಲ


ಕಳೆದ ವಾರ ಇಬ್ಬರು ವ್ಯಕ್ತಿಗಳು ಥೆರೆಸಾರನ್ನು ಹತ್ಯೆ ಮಾಡಲು ಯೋಜನೆ ರೂಪಿಸಿದ್ದರು, ಅವರನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ. ಆರೋಪಿಗಳನ್ನು ವೆಸ್ಟ್ ಮಿನಿಸ್ಟರ್ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. ನವೆಂಬರ್ 29ರಂದು ಇವರನ್ನು ಕೌಂಟರ್ ಟೆರರ್ ಕಮಾಂಡ್ ಅಧಿಕಾರಿಗಳು ಬಂಧಿಸಿದ್ದರು.

ಆರೋಪಿಗಳನ್ನು ಉತ್ತರ ಲಂಡನ್ ಮೂಲದ ರೆಹಮಾನ್ (20), ಬಿರ್ಮಿಂಗ್‍ಮನ್‍ನ ಇಮ್ರಾನ್ (21) ಎಂದು ಗುರುತಿಸಲಾಗಿದೆ. ಸ್ಥಳೀಯ ಡೌನಿಂಗ್ ಸ್ಟ್ರೀಟ್ ಪ್ರದೇಶದಲ್ಲಿ ಥೆರೆಸಾ ಅವರು ಕಾರಿನಲ್ಲಿ ಪ್ರಯಾಣಿಸುತ್ತಾರೆಂದು ತಿಳಿದು ಸ್ಫೋಟಕಗಳನ್ನು ಬಳಸಿ ಹತ್ಯೆಗೆ ಸಂಚು ರೂಪಿಸಿದ್ದರು. ಅವರ ಮೇಲೆ ಅನುಮಾನ ಬಂದು ಪೊಲೀಸರು ವಶಕ್ಕೆ ಪಡೆದ ಮೇಲೆ ವಿಷಯ ಬಹಿರಂಗವಾಗಿದೆ.

Plot to kill UK PM Theresa May foiled: Sky News https://t.co/qsv2EfxZHS pic.twitter.com/uULAfcXNk1 — Reuters Top News (@Reuters) December 6, 2017 ಕಳೆದ ಹನ್ನೆರಡು ತಿಂಗಳಲ್ಲಿ ಥೆರೆಸಾರನ್ನು ಹತ್ಯೆಗಯ್ಯಲು ಒಂಬತ್ತು ಸಲ ಯೋಜನೆ ರೂಪಿಸಿದ್ದರೆಂದು, ಅವರ ಯೋಜನೆಗಳನ್ನು ಬ್ರಿಟನ್ ಪೊಲೀಸರು ಚಾಕಚಕ್ಯತೆಯಿಂದ ಭಗ್ನಗೊಳಿಸಿದ್ದರು ಎಂದು ಥೆರೆಸಾ ಪ್ರತಿನಿಧಿ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ