ಆ್ಯಪ್ನಗರ

ಜಪಾನ್‌, ಭಾರತ ಸಂಸ್ಕೃತಿಯಲ್ಲಿ ಸಾಮ್ಯತೆ ಇದೆ: ಮೋದಿ

ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿ ಸೇರಿದಂತೆ ವಿಶ್ವದ ಮಹಾನ್‌ ನಾಯಕರು ಜಪಾನ್‌ಗೆ ಆಗಮಿಸಿದ್ದಾರೆ.

Vijaya Karnataka Web 27 Jun 2019, 6:32 pm
ಕೋಬೆ: ಕೇವಲ ಏಳು ತಿಂಗಳ ಅವಧಿಯಲ್ಲಿ ಮತ್ತೊಮ್ಮೆ ನಿಮ್ಮ ಮುಂದೆ ಆಗಮಿಸಿ ಭಾಷಣ ಮಾಡಲು ಅವಕಾಶ ದೊರೆತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಜಿ-20 ಶೃಂಗ ಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೋಬೆಯ ಹ್ಯುಗೊ ಪ್ರಿಫೆಕ್ಚರ್‌ ಗೆಸ್ಟ್‌ ಹೌಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡಿದರು.


ಕಳೆದ ಬಾರಿ ನಾನು ಜಪಾನ್‌ಗೆ ಬಂದಾಗ ಇಲ್ಲಿ ಫಲಿತಾಂಶ ಪ್ರಕಟವಾಗಿತ್ತು. ಆಗ ನನ್ನ ಸ್ನೇಹಿತ ಶಿಂಜೊ ಅಬೆಗೆ ನೀವು ಅಭೂತಪೂರ್ವ ಬೆಂಬಲ ನೀಡಿದ್ದಿರಿ. ಈಗ ನಾನು ಮತ್ತೆ ನಿಮ್ಮ ಮುಂದಿದ್ದೇನೆ. ನಮ್ಮ ದೇಶದ ಜನರು ನಮಗೆ ಮತ ನೀಡಿ ಬೆಂಬಲ ತೋರಿದ್ದಾರೆ ಎಂದರು.


ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ 61 ಕೋಟಿ ಮತದಾರರು ಬಿಸಿಲು ಲೆಕ್ಕಿಸದೆ ಮತ ಹಾಕಿದ್ದಾರೆ. ಮತದಾನಕ್ಕೆ ನೀವು ಕೂಡ ಪರೋಕ್ಷವಾಗಿ ಬೆಂಬಲ ನೀಡಿರುತ್ತೀರಿ ಎಂದು ಮೋದಿ ಹೇಳಿದರು.

ಜಪಾನ್ ಮತ್ತು ಭಾರತ ಸಂಸ್ಕೃತಿಯಲ್ಲಿ ಸಾಕಷ್ಟು ಸಾಮ್ಯತೆ ಇದೆ. ಶಿಂಜೋ ಅಬೆ ನನ್ನ ಆತ್ಮೀಯ ಸ್ನೇಹಿತರಲ್ಲಿ ಒಬ್ಬರು. ಅವರು ಭಾರತಕ್ಕೆ ಭೇಟಿ ನೀಡಿದಾಗ, ನನ್ನ ಕ್ಷೇತ್ರ ವಾರಾಣಸಿಗೆ ಬಂದಿದ್ದರು. ಗಂಗಾ ಆರತಿಯನ್ನು ಕಣ್ತುಂಬಿಕೊಂಡಿದ್ದರು ಎಂದು ಪ್ರಧಾನಿ ಮೋದಿ ತಿಳಿಸಿದರು.

ಭಾರತ ಈಗ ಯಂಗ್ ಇಂಡಿಯಾ ಹಾಗೂ ನವ ಭಾರತ ಆಗಲು ಹೊರಟಿದೆ. ಇದಕ್ಕೆ ಜಪಾನ್ ಕೂಡ ಸಾಕಷ್ಟು ನೆರವು ನೀಡಿದೆ ಎಂದು ಮೋದಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ