ಆ್ಯಪ್ನಗರ

ಮಾಲ್ಡೀವ್ಸ್‌ಗೆ ಮೋದಿ ಭೇಟಿ, ಅಧ್ಯಕ್ಷರಿಗೆ ಕ್ರಿಕೆಟ್ ಬ್ಯಾಟ್‌ ಗಿಫ್ಟ್‌ ಮಾಡಿದ ಪಿಎಂ

ಪ್ರಧಾನಿ ಮೋದಿ ಅವರು ಟೀಮ್‌ ಇಂಡಿಯಾ ಆಟಗಾರರು ಸಹಿ ಮಾಡಿರುವ ಕ್ರಿಕೆಟ್‌ ಬ್ಯಾಟ್‌ ಅನ್ನು ಇಬ್ರಾಹಿಂ ಮೊಹಮದ್‌ ಸೊಲಿಹ್‌ ಅವರಿಗೆ ಉಡುಗೊರೆಯಾಗಿ ನೀಡಿದರು.

Vijaya Karnataka Web 8 Jun 2019, 8:48 pm
ಮಾಲೆ: ಭಾರತ ಮತ್ತು ಮಾಲ್ಡೀವ್ಸ್‌ ನಡುವಿನ ಸಹಕಾರ ಸಂಬಂಧ ಇನ್ನಷ್ಟು ಗಟ್ಟಿಯಾಗಬೇಕು. ಈ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
Vijaya Karnataka Web ಬ್ಯಾಟ್‌ ಗಿಫ್ಟ್‌ ಮಾಡಿದ ಮೋದಿ
ಬ್ಯಾಟ್‌ ಗಿಫ್ಟ್‌ ಮಾಡಿದ ಮೋದಿ


ಪ್ರಧಾನಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ವಿದೇಶ ಪ್ರವಾಸ ಕೈಗೊಂಡಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರಮೋದಿ ಎರಡು ದಿನಗಳ ಮಾಲ್ಡೀವ್ಸ್ ಹಾಗೂ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾರೆ..

ಪ್ರವಾಸದ ಮೊದಲ ಭಾಗವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದಾರೆ.

ಮೋದಿಗೆ ಮಾಲ್ಡೀವ್ಸ್‌ನ ಅತ್ಯುನ್ನತ ರೂಲ್‌ ಆಫ್‌ ನಿಶಾನ್‌ ಇಜುದ್ದಿನ್‌ ಪುರಸ್ಕಾರ


ಮಾಲೆಯಲ್ಲಿ ಮಾಲ್ಡೀವ್ಸ್‌ನ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಮತ್ತು ಇತರ ಪ್ರಮುಖ ನಾಯಕರೊಂದಿಗೆ ವಿಸ್ತೃತ ಮಾತುಕತೆ ನಡೆಸಿದರು.

ಆಟೊಗ್ರಾಫ್‌ ಬ್ಯಾಟ್‌


ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಟೀಮ್‌ ಇಂಡಿಯಾ ಆಟಗಾರರು ಸಹಿ ಮಾಡಿರುವ ಕ್ರಿಕೆಟ್‌ ಬ್ಯಾಟ್‌ ಅನ್ನು ಇಬ್ರಾಹಿಂ ಮೊಹಮದ್‌ ಸೊಲಿಹ್‌ ಅವರಿಗೆ ಉಡುಗೊರೆಯಾಗಿ ನೀಡಿದರು.



ಇದಕ್ಕೂ ಮುನ್ನ ಮಾಲೆಯಲ್ಲಿ ಮೋದಿ ಅವರಿಗೆ ಭಾರತೀಯ ಸಮುದಾಯ ಅಭೂತಪೂರ್ವ ಸ್ವಾಗತ ಕೋರಿತು.

ಅಲ್ಲದೆ ಅಲ್ಲಿನ ಸಂಸತನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಎರಡೂ ದೇಶಗಳ ನಡುವಿನ ವಿವಿಧ ವಲಯಗಳ ಸಹಕಾರ ಬಲವರ್ಧನೆ ನಿಟ್ಟಿನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಯಿತು. ಇದೇ ಸಂದರ್ಭದಲ್ಲಿ ಹಲವು ಪ್ರಮುಖ ಒಪ್ಪಂದಗಳಿಗೆ ಸಹಿಬೀಳುವ ನಿರೀಕ್ಷೆ ಇದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ