ಆ್ಯಪ್ನಗರ

ಅಮೆರಿಕ ಚುನಾವಣೆ: ಹಿಂಸಾಚಾರದ ಭೀತಿ, ಶ್ವೇತಭವನಕ್ಕೆ ಬಿಗಿ ಭದ್ರತೆ

​​ವಾಷಿಂಗ್ಟನ್‌ನಲ್ಲಿರುವ ಶ್ವೇತಭವನಕ್ಕೆ ಇರುವೆಯೂ ನುಸುಳದಷ್ಟು ಬಿಗಿ ಕಾವಲು ಕಲ್ಪಿಸಲಾಗಿದ್ದು, ಅಧ್ಯಕ್ಷರ ವಾಸದ ಕಟ್ಟಡದ ಸುತ್ತ ಹತ್ತು ಅಡಿ ಎತ್ತರದ ತಾತ್ಕಾಲಿಕ ಗೋಡೆಯನ್ನೂ ನಿರ್ಮಿಸಲಾಗಿದೆ.

Agencies 3 Nov 2020, 9:59 pm
ವಾಷಿಂಗ್ಟನ್‌: ಭಾರಿ ಪೈಪೋಟಿಯಿಂದ ಕೂಡಿರುವ ಈ ಬಾರಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆಯು ದೇಶಾದ್ಯಂತ ಹಿಂಸಾಚಾರದ ಆತಂಕದ ಅಲೆಯನ್ನು ಸೃಷ್ಟಿ ಮಾಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶ್ವೇತ ಭವನ, ಪ್ರಮುಖ ವಾಣಿಜ್ಯ ಕಟ್ಟಡಗಳು ಸೇರಿದಂತೆ ಹಲವೆಡೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
Vijaya Karnataka Web White House


ಟ್ರಂಪ್‌-ಬೈಡೆನ್‌ ನಡುವೆ ಹಿಂದೆಂದೂ ಕಾಣದಷ್ಟು ತುರುಸಿನ ಪೈಪೋಟಿ ಏರ್ಪಟ್ಟಿದೆ. ಮತದಾನ ದಿನವಾದ ಮಂಗಳವಾರ ಅತೃಪ್ತರ ಗುಂಪುಗಳು ದಾಂಧಲೆಗೆ ಇಳಿಯಬಹುದು ಎನ್ನುವ ಮುನ್ನೆಚ್ಚರಿಕೆಯನ್ನು ಗುಪ್ತಚರ ಸಂಸ್ಥೆಗಳು ನೀಡಿವೆ. ಈ ಹಿನ್ನೆಲೆಯಲ್ಲಿ ಸರಕಾರದ ಪ್ರಮುಖ ಕಟ್ಟಡಗಳಿಗೆ ಸೋಮವಾರ ಸಂಜೆಯಿಂದಲೇ ಪೊಲೀಸ್‌ ಭದ್ರತೆ ಒದಗಿಸಲಾಗಿದೆ.

ವಾಷಿಂಗ್ಟನ್‌ನಲ್ಲಿರುವ ಶ್ವೇತಭವನಕ್ಕೆ ಇರುವೆಯೂ ನುಸುಳದಷ್ಟು ಬಿಗಿ ಕಾವಲು ಕಲ್ಪಿಸಲಾಗಿದೆ. ಅಧ್ಯಕ್ಷರ ವಾಸದ ಕಟ್ಟಡದ ಸುತ್ತ ಹತ್ತು ಅಡಿ ಎತ್ತರದ ತಾತ್ಕಾಲಿಕ ಗೋಡೆ ನಿರ್ಮಿಸಲಾಗಿದೆ.

ಅಮೆರಿಕದ ಮತದಾನ ಕೇಂದ್ರಗಳಲ್ಲಿ 'ಲಾಂಗ್ ಕ್ಯೂ': ಮನಸ್ಸಿನ ನಿರ್ಧಾರ ಮತವಾಗಿ ಪರಿವರ್ತನೆ!
ಹಿಂಸಾಚಾರದ ಭೀತಿಯಿಂದ ನ್ಯೂಯಾರ್ಕ್‌, ವಾಷಿಂಗ್ಟನ್‌, ಚಿಕಾಗೊ, ಬಾಸ್ಟನ್‌ ಸೇರಿದಂತೆ ಪ್ರಮುಖ ನಗರಗಳಲ್ಲಿ ಅಂಗಡಿ ಮುಂಗಟ್ಟುಗಳು ದಿನವಿಡೀ ಬಾಗಿಲು ಹಾಕಿವೆ. ಎಲ್ಲೆಡೆ ಅಘೋಷಿತ ಬಂದ್‌ ವಾತಾವರಣ ನಿರ್ಮಾಣಗೊಂಡಿದೆ. ರಾಷ್ಟ್ರೀಯ ತುರ್ತು ಸಂದರ್ಭಗಳಿಗೆ ಸ್ಪಂದಿಸಲೆಂದು ರಾಷ್ಟ್ರೀಯ ಭದ್ರತಾ ಪಡೆಯ 600 ತುಕಡಿಗಳನ್ನು ಸನ್ನದ್ಧವಾಗಿ ಇರಿಸಲಾಗಿದೆ. ಈ ನಡುವೆಯೇ, ಹಲವೆಡೆ ಕಲ್ಲು ತೂರಾಟ, ಖಾಸಗಿ ಸ್ವತ್ತು ನಾಶ ಪಡಿಸಿ ದಾಂಧಲೆ ಎಬ್ಬಿಸಿದ ಪ್ರಕರಣಗಳು ನಡೆದಿವೆ. ಪರಿಸ್ಥಿತಿ ಕೈಮೀರದಂತೆ ಭದ್ರತಾ ಪಡೆಗಳು ಎಚ್ಚರ ವಹಿಸಿವೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ