ಆ್ಯಪ್ನಗರ

ಪೊಂಪಿಯೊ ಸಂಧಾನದಿಂದಲೇ ತಪ್ಪಿದ ಭಾರತ-ಪಾಕ್‌ ಯುದ್ಧ!

ಉಭಯ ದೇಶಗಳ ನಡುವೆ ಉದ್ಭವಿಸಿದ್ದ ಯುದ್ಧದ ಭೀತಿಯನ್ನು ಹೋಗಲಾಡಿಸಲು ಪೊಂಪಿಯೊ ನೇರವಾಗಿ ರಾಜತಾಂತ್ರಿಕ ಸಂಧಾನ ನಡೆಸಿದರು ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಾಬರ್ಟ್‌ ಪಲ್ಲಾಡಿನೊ ಹೇಳಿದ್ದಾರೆ.

Vijaya Karnataka 7 Mar 2019, 5:00 am
ವಾಷಿಂಗ್ಟನ್‌: ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನ ವಾತಾವರಣ ಶಮನಗೊಳಿಸುವ ನಿಟ್ಟಿನಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪೊಂಪಿಯೊ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೊಂಡಿದೆ.
Vijaya Karnataka Web pompeo


ಪುಲ್ವಾಮಾ ಉಗ್ರ ದಾಳಿ, ಪಾಕಿಸ್ತಾನದ ಬಾಲಾಕೋಟ್‌ನಲ್ಲಿರುವ ಜೈಷೆ ಮೊಹಮದ್‌ ಉಗ್ರ ನೆಲೆಗಳ ಮೇಲೆ ಭಾರತದಿಂದ ನಡೆದ ವಾಯು ದಾಳಿ ಹಾಗೂ ಪಾಕ್‌ನಿಂದ ಪೈಲಟ್‌ ಅಭಿನಂದನ್‌ ವರ್ಧಮಾನ್‌ ಸೆರೆ ಬಳಿಕ ಉಭಯ ದೇಶಗಳ ನಡುವೆ ಉದ್ಭವಿಸಿದ್ದ ಯುದ್ಧದ ಭೀತಿಯನ್ನು ಹೋಗಲಾಡಿಸಲು ಪೊಂಪಿಯೊ ನೇರವಾಗಿ ರಾಜತಾಂತ್ರಿಕ ಸಂಧಾನ ನಡೆಸಿದರು ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಾಬರ್ಟ್‌ ಪಲ್ಲಾಡಿನೊ ಹೇಳಿದ್ದಾರೆ.

''ಹಾನೊಯ್‌ನಲ್ಲಿದ್ದ ಪೊಂಪಿಯೊ ಪೋನ್‌ ಮೂಲಕ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಮತ್ತು ಪಾಕ್‌ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್‌ ಖುರೇಷಿ ಅವರೊಂದಿಗೆ ಮಾತುಕತೆ ನಡೆಸಿದರು,'' ಎಂದು ತಿಳಿಸಿದ್ದಾರೆ.

ಇದೇವೇಳೆ, ''ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭರವಸೆ ನೀಡಿದಂತೆ ತನ್ನ ದೇಶದಲ್ಲಿ ಕಾರ್ಯ ನಿರ್ವಹಿಸುತ್ತೀರುವ ಉಗ್ರ ಸಂಘಟನೆಗಳ ವಿರುದ್ಧ ಪಾಕಿಸ್ತಾನ ಸೂಕ್ತ ಕ್ರಮಕೈಗೊಳ್ಳುವಂತೆ ಅಮೆರಿಕ ಒತ್ತಾಯಿಸುತ್ತದೆ,'' ಎಂದೂ ರಾಬರ್ಟ್‌ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ