ಆ್ಯಪ್ನಗರ

ಶುಕ್ರ ಗ್ರಹದಲ್ಲಿ ಜೀವ ಸಂಕುಲದ ಕುರುಹು?: ಕುತೂಹಲ ಕೆರಳಿಸಿದ ಗ್ರಹದ ಮೋಡಗಳ ರಾಸಾಯನಿಕ ಪ್ರಕ್ರಿಯೆ!

ಶುಕ್ರ ಗ್ರಹದ ಮೇಲ್ಮೈ ಮೇಲಿರುವ ಮೋಡಗಳಲ್ಲಿ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಿದ್ದು, ಬಣ್ಣರಹಿತ ಸುಡುವ ಅನಿಲವಾದ ಫಾಸ್ಫೈನ್ ಪತ್ತೆಯಾಗಿರುವುದು ಖಗೋಳ ಶಾಸ್ತ್ರಜ್ಞರ ನಿದ್ದೆಗೆಡೆಸಿದೆ. ಶುಕ್ರ ಗ್ರಹದಲ್ಲಿ ನಡೆಯುತ್ತಿರುವ ದ್ಯುತಿರಾಸಾಯನಿಕ ಪ್ರಕ್ರಿಯೆ ಈ ಗ್ರಹದಲ್ಲಿ ಜೀವ ಸಂಕುಲ ಇರುವ ಕುರಿತಾದ ಚರ್ಚೆಗೆ ವೇಗ ನೀಡಿದೆ.

Vijaya Karnataka Web 15 Sep 2020, 8:39 pm
ವಾಷಿಂಗ್ಟನ್: ಭೂಮಿಯನ್ನು ಹೊರತುಪಡಿಸಿ ಅನ್ಯ ಗ್ರಹದಲ್ಲಿ ಜೀವ ಸಂಕುಲದ ಕುರುಹು ಹುಡುಕುತ್ತಿರುವ ಮಾನವ, ಇದಕ್ಕಾಗಿ ಬ್ರಹ್ಮಾಂಡದ ಸಕಲ ಗ್ರಹ ಕಾಯಗಳನ್ನೆಲ್ಲಾ ಜಾಲಾಡುತ್ತಿದ್ದಾನೆ.
Vijaya Karnataka Web Venus 2
ಶುಕ್ರ ಗ್ರಹದ ಮೇಲ್ಮೈ ಮೇಲಿರುವ ಮೋಡಗಳಲ್ಲಿ ರಾಸಾಯನಿಕ ಪ್ರಕ್ರಿಯೆ ಪತ್ತೆ


ಭೂಮಿಯ ಹೊರತಾದ ಗ್ರಹದವೊಂದರಲ್ಲಿ ಜೀವ ಸಂಕುಲ ಎಂದಾಕ್ಷಣ ಅದು ನಮ್ಮಂತಹ ಉನ್ನತ ನಾಗರೀಕತೆಯೇ ಆಗಬೇಕೆಂದೆನಿಲ್ಲ. ಸೂಕ್ಷ್ಮಾಣು ಜೀವಿಗಳ ಕುರುಹು ಸಿಕ್ಕರೂ ಸಾಕು, ಈ ಬ್ರಹ್ಮಾಂಡದಲ್ಲಿ ನಾವು ಏಕಾಂಗಿಯಲ್ಲ ಎಂದು ನಾವು ಸಂತಸದಿಂದ ಕುಣಿದು ಕುಪ್ಪಳಿಸಬಹುದಾಗಿದೆ.

ಅದರಂತೆ ಬ್ರಹ್ಮಾಂಡದಲ್ಲಿ ಜೀವ ಸಂಕುಲದ ಕುರುಹು ಹುಡುಕುತ್ತಿರುವ ಖಗೋಳ ಶಾಸ್ತ್ರಜ್ಞರಿಗೆ, ಭೂಮಿಯ ಸಮೀಪದ ಗ್ರಹ ಶುಕ್ರ ಗ್ರಹದಲ್ಲೇ ಈ ಕುರುಹು ಸಿಗುವ ಸಾಧ್ಯತೆ ದಟ್ಟವಾಗಿದೆ.

ಬ್ರಹ್ಮಾಂಡ ಸೀಳಿದ ನಾಸಾದ 'ಚಂದ್ರ': ದಿಗಂತದ ರಹಸ್ಯಗಳನ್ನು ಅರಿಯುವ ಬಾಹ್ಯಾಕಾಶ ಸಾಧನ!

ಹೌದು, ಶುಕ್ರ ಗ್ರಹದ ಮೇಲ್ಮೈ ಮೇಲಿರುವ ಮೋಡಗಳಲ್ಲಿ ರಾಸಾಯನಿಕ ಪ್ರಕ್ರಿಯೆಗಳು ನಡೆಯುತ್ತಿದ್ದು, ಬಣ್ಣರಹಿತ ಸುಡುವ ಅನಿಲವಾದ ಫಾಸ್ಫೈನ್ ಪತ್ತೆಯಾಗಿರುವುದು ಖಗೋಳ ಶಾಸ್ತ್ರಜ್ಞರ ನಿದ್ದೆಗೆಡೆಸಿದೆ.

ಈ ಕುರಿತು 'ನೇಚರ್ ಆಸ್ಟ್ರಾನಾಮಿ ಜರ್ನಲ್'ನಲ್ಲಿ ಲೇಖನ ಪ್ರಕಟವಾಗಿದ್ದು, ಶುಕ್ರ ಗ್ರಹದಲ್ಲಿ ನಡೆಯುತ್ತಿರುವ ದ್ಯುತಿರಾಸಾಯನಿಕ ಪ್ರಕ್ರಿಯೆ ಈ ಗ್ರಹದಲ್ಲಿ ಜೀವ ಸಂಕುಲ ಇರುವ ಕುರಿತಾದ ಚರ್ಚೆಗೆ ವೇಗ ನೀಡಿದೆ.


ಭೂಮಿಯ ಮೇಲೆ ಫಾಸ್ಫೈನ್ (PH3) ಅನಿಲ ಕೈಗಾರಿಕೆಗಳಿಂದ ಅಥವಾ ಆಮ್ಲಜನಕ ಮುಕ್ತ ಸ್ಥಿತಿಯಲ್ಲಿ ಬುದುಕುವ ಸೂಕ್ಷ್ಮ ಜೀವಿಗಳಿಂದ ಉತ್ಪಾದನೆಯಾಗುತ್ತದೆ. ಆದರೆ ಶುಕ್ರ ಗ್ರಹದಲ್ಲಿ ಕೈಗಾರಿಕಾ ಚಟುವಟಿಕೆಗಳು ನಡೆಯುವುದಿಲ್ಲವಾದ್ದರಿಂದ, ಗ್ರಹದ ಮೇಲ್ಮೈ ಮೋಡಗಳಲ್ಲಿರುವ ಸೂಕ್ಷ್ಮ ಜೀವಿಗಳು ಫಾಸ್ಫೈನ್ ಉತ್ಪಾದನೆಗೆ ಕಾರಣವಾಗಿವೆ ಎಂದು ಬಲವಾಗಿ ನಂಬಲಾಗಿದೆ.

ದೂರದ ಗ್ಯಾಲಕ್ಸಿ ಪತ್ತೆ ಹಚ್ಚಿದ ಭಾರತೀಯ ಖಗೋಳಶಾಸ್ತ್ರಜ್ಞರನ್ನು ಅಭಿನಂದಿಸಿದ ನಾಸಾ!

ಅದಾಗ್ಯೂ ಶುಕ್ರ ಗ್ರಹದಲ್ಲಿ ಸೂಕ್ಷ್ಮಾಣು ಜೀವಿಗಳಿರುವ ಕುರಿತು ಈಗಲೇ ಖಚಿತವಾಗಿ ಏನನ್ನು ಹೇಳಲು ಬರುವುದಿಲ್ಲ ಎಂದೂ ಖಗೋಳ ವಿಜ್ಞಾನಿಗಳು ಸ್ಪಷ್ಟಪಡಿಸಿದ್ದಾರೆ.

ಶುಕ್ರ ಗ್ರಹದ ಪರಿಸ್ಥಿತಿ ಜೀವ ಸಂಕುಲ ಬದಕಲು ಯೋಗ್ಯವಾಗಿಲ್ಲವಾದರೂ, ಮೇಲ್ಭಾಗದ ಮೋಡಗಳ ಸುಮಾರು 53-62 ಕಿ.ಮೀ. ಪ್ರದೇಶ ಸೌಮ್ಯವಾಗಿರುವುದು ಜೀವಿಗಳ ಆವಾಸ ಸ್ಥಾನವಾಗಲು ಯೋಗ್ಯವಾಗಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.

ಸದ್ಯ ಕಂಡುಬಂದಿರುವ ಪ್ರಕ್ರಿಯೆ ನಾವು ಇನ್ನೂ ಅರ್ಥಮಾಡಿಕೊಳ್ಳದ ಕೆಲವು ಅಪರಿಚಿತ ಭೌಗೋಳಿಕ ಅಥವಾ ರಾಸಾಯನಿಕ ಪ್ರಕ್ರಿಯೆ ಎಂದಷ್ಟೇ ಹೇಳಬಹುದು ಎಂದು ಕಾರ್ಡಿಫ್ ವಿಶ್ವವಿದ್ಯಾಲಯದ ಪ್ರೊಫೆಸರ್ ಜೇನ್ ಗ್ರೀವ್ಸ್ ನೇತೃತ್ವದ ಅಂತಾರಾಷ್ಟ್ರೀಯ ಖಗೋಳ ವಿಜ್ಞಾನಿಗಳ ತಂಡ ಸ್ಪಷ್ಟಪಡಿಸಿದೆ.

ಭೂಮಿಯನ್ನು ಹೋಲುವ ಗ್ರಹ ಪತ್ತೆ: ಸೂರ್ಯನ ಗಾತ್ರದಷ್ಟೇ ನಕ್ಷತ್ರ ಸುತ್ತುತ್ತಿದೆ ಈ ಗ್ರಹ!

ಒಟ್ಟಿನಲ್ಲಿ ನಮ್ಮ ನೆರೆಯ ಗ್ರಹದಲ್ಲಿ ರಹಸ್ಯ ರಾಸಾಯನಿಕ ಚಟುವಟಿಕೆ ನಡೆಯುತ್ತಿರುವುದು, ಶುಕ್ರ ಗ್ರಹದಲ್ಲಿ ಜೀವ ಸಂಕುಲ ಬದುಕನ್ನು ಕಟ್ಟಿಕೊಂಡಿದೆಯೇ ಎಂಬ ಹೊಸ ಚರ್ಚೆಯನ್ನು ಹುಟ್ಟು ಹಾಕಿರುವುದಂತೂ ಸತ್ಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ