ಆ್ಯಪ್ನಗರ

ಪ್ರಧಾನಿ ನರೇಂದ್ರ ಮೋದಿ ಅವರಿಗೆ 2018ರ ಸೋಲ್‌ ಶಾಂತಿ ಪ್ರಶಸ್ತಿ ಗೌರವ

ಎರಡು ದಿನಗಳ ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿಗೆ ಗುರುವಾರ ದಕ್ಷಿಣ ಕೊರಿಯಾ ಅಧ್ಷಕ್ಷ ಮೂನ್‌ ಜೇ ಇನ್‌ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಮೋದಿ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುತ್ತಿರುವ ಮೊದಲ ಭಾರತೀಯರಾಗಿದ್ದಾರೆ ಹಾಗೂ ಪ್ರಶಸ್ತಿ ಪುರಸ್ಕೃತ 14ನೇ ವ್ಯಕ್ತಿಯಾಗಿದ್ದಾರೆ.

Vijaya Karnataka 22 Feb 2019, 5:00 am
ಸೋಲ್‌: ಅಂತಾರಾಷ್ಟ್ರೀಯ ಸಹಕಾರ, ಜಾಗತಿಕ ಆರ್ಥಿಕ ಅಭಿವೃದ್ಧಿ, ಮಾನವ ಅಭಿವೃದ್ಧಿ ಕ್ಷೇತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆಯನ್ನು ಪರಿಗಣಿಸಿ ದಕ್ಷಿಣ ಕೊರಿಯಾ ಸರಕಾರ 2018ರ ಸೋಲ್‌ ಶಾಂತಿ ಪ್ರಶಸ್ತಿ ಘೋಷಿಸಿದೆ.
Vijaya Karnataka Web modi


ಎರಡು ದಿನಗಳ ದಕ್ಷಿಣ ಕೊರಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರಿಗೆ ಗುರುವಾರ ದಕ್ಷಿಣ ಕೊರಿಯಾ ಅಧ್ಷಕ್ಷ ಮೂನ್‌ ಜೇ ಇನ್‌ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ಮೋದಿ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಸ್ವೀಕರಿಸುತ್ತಿರುವ ಮೊದಲ ಭಾರತೀಯರಾಗಿದ್ದಾರೆ ಹಾಗೂ ಪ್ರಶಸ್ತಿ ಪುರಸ್ಕೃತ 14ನೇ ವ್ಯಕ್ತಿಯಾಗಿದ್ದಾರೆ.

ಭಾರತದ ಆರ್ಥಿಕ ಅಭಿವೃದ್ಧಿ ಹಾಗೂ ವಿದೇಶಿ ನೀತಿ ಮೂಲಕ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿಗೆ ಮೋದಿ ಅವರ ಕೊಡುಗೆ ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಜತೆಗೆ ಮೋದಿ ಅವರ 'ಆ್ಯಕ್ಟ್ ಈಸ್ಟ್‌ ' ನಿತಿ, ಭ್ರಷ್ಟಾಚಾರ ವಿರೋಧಿ ಮತ್ತು ಸಾಮಾಜಿಕ ಏಕೀಕರಣದ ಪ್ರಯತ್ನಗಳ ಮೂಲಕ ಪ್ರಜಾಪ್ರಭುತ್ವದ ಬೆಳವಣಿಗೆಗೆ ನೀಡಿದ ಮಹತ್ತರ ಕೊಡುಗೆ, ಭಾರತದ ಆರ್ಥಿಕ ವೇಗವನ್ನು ಹೆಚ್ಚಿಸುವ ಮೂಲಕ ಭಾರತೀಯರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕಾರಣಕ್ಕಾಗಿ ಈ ಪ್ರಶಸ್ತಿ ನೀಡಲಾಗಿದೆ.

ವಿಶ್ವಾದ್ಯಂತ ನೂರಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಪ್ರಶಸ್ತಿಗೆ ಶಿಫಾರಸು ಮಾಡಲಾಗಿತ್ತು. ಅಂತಿಮವಾಗಿ ಆಯ್ಕೆ ಸಮಿತಿಯು ಸೋಲ್‌ ಶಾಂತಿ ಪುರಸ್ಕಾರಕ್ಕೆ ಮೋದಿ ಅವರನ್ನು ಆಯ್ಕೆ ಮಾಡಿದೆ. 1990ರಲ್ಲಿ ಸ್ಥಾಪನೆಯಾದ ಸೋಲ್‌ ಶಾಂತಿ ಪುರಸ್ಕಾರಕ್ಕೆ ಇದುವರೆಗೆ ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್‌, ಜರ್ಮನಿ ಪ್ರಧಾನಿ ಏಂಜೆಲಾ ಮಾರ್ಕೆಲ್‌ ಸೇರಿದಂತೆ 13 ಮಂದಿ ಗಣ್ಯರು ಪಾತ್ರರಾಗಿದ್ದಾರೆ.

ಗಾಂಧಿ ಸಂದೇಶಗಳೇ ಅಸ್ತ್ರ:

ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ ಎಂಬ ಎರಡು ದೊಡ್ಡ ಸವಾಲುಗಳನ್ನು ಪ್ರಸ್ತುತ ಮನುಕುಲ ಎದುರಿಸುತ್ತಿದ್ದು, ಈ ಎರಡು ಸವಾಲುಗಳನ್ನು ಎದುರಿಸಲು ಮಹಾತ್ಮ ಗಾಂಧಿ ಅವರ ಬೋಧನೆಗಳು ಮತ್ತು ಮೌಲ್ಯಗಳು ಸಹಕಾರಿಯಾಗಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಮೋದಿ ಅವರು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ ಇನ್‌ ಮತ್ತು ವಿಶ್ವಸಂಸ್ಥೆ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಅವರೊಂದಿಗೆ ಖ್ಯಾತ ಯೊನ್ಸಿ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಮಹಾತ್ಮ ಗಾಂಧಿ ಅವರ ಪ್ರತಿಮೆಯನ್ನು ಉದ್ಘಾಟಿಸಿದರು. ಇದು ದಕ್ಷಿಣ ಕೊರಿಯಾಗೆ ಪ್ರಧಾನಿ ಮೋದಿಯವರ ಎರಡನೇ ಭೇಟಿಯಾಗಿದೆ. ''ವಿಶ್ವಾದ್ಯಂತ ನಾವು ಮಹಾತ್ಮ ಗಾಂಧಿ ಅವರ 150ನೇ ವರ್ಷಾಚರಣೆ ಆಚರಿಸುತ್ತಿದ್ದೇವೆ. ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾದ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಮಹಾತ್ಮಾ ಗಾಂಧಿ ಅವರ ಪ್ರತಿಮೆ ಉದ್ಘಾಟನೆಯಲ್ಲಿ ಪಾಲ್ಗೊಂಡಿರುವುದು ನನ್ನ ಪಾಲಿಗೆ ಹೆಮ್ಮೆಯ ವಿಷಯವಾಗಿದೆ,'' ಎಂದು ಮೋದಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ