ಆ್ಯಪ್ನಗರ

ಖಾಸಗಿ ಚಂದ್ರಯಾನ ಕೈಗೊಂಡ ಮೊದಲ ರಾಷ್ಟ್ರ ಇಸ್ರೇಲ್‌!

ಅಂದು ಗೂಗಲ್‌ ಆಹ್ವಾನಿಸಿದ್ದ ವಿಶ್ವ ಮಟ್ಟದ ಲೂನಾರ್‌ ಎಕ್ಸ್‌ಪ್ರೈಜ್‌ ಸ್ಪರ್ಧೆಗಾಗಿ ಸಿದ್ಧ ಪಡಿಸಿದ್ದ ಬೆರ್ಷೀಟ್‌ ಯೋಜನೆ ಇಂದು ಚಂದ್ರಯಾನ ಕೈಗೊಳ್ಳುವ ಮೂಲಕ ವಿನೂತನ ದಾಖಲೆಯನ್ನು ಇಸ್ರೇಲ್‌ ಸಂಶೋಧಕರ ತಂಡ ನಿರ್ಮಿಸಿದೆ.

Agencies 23 Feb 2019, 12:40 pm
ಜೆರುಸಲೇಮ್‌: ಎಲ್ಲವೂ ಯೋಜನೆ ಪ್ರಕಾರ ನಡೆದರೆ ಖಾಸಗಿಯಾಗಿ ಅಭಿವೃದ್ಧಿ ಪಡಿಸಿದ ಉಪಗ್ರವನ್ನು, ಖಾಸಗಿ ರಾಕೆಟ್‌ ಮೂಲಕ ಖಾಸಗಿ ಉಡಾವಣಾ ಕೇಂದ್ರದಿಂದ ಚಂದ್ರಯಾನ ಕೈಗೊಂಡ ಮೊದಲ ರಾಷ್ಟ್ರ ಇಸ್ರೇಲ್‌ ಎಂಬ ಶ್ಲಾಘನೆಗೆ ಗುರಿಯಾಗಲಿದೆ.
Vijaya Karnataka Web Beresheet


ಫೆಬ್ರವರಿ 22ರಂದು ಫ್ಲೋರಿಡಾದ ಕೇಪ್‌ ಕೆನಾವೆರಲ್‌ ಏರ್‌ ಫೋರ್ಸ್‌ ಸ್ಟೇಷನ್‌ನಿಂದ ಸ್ಪೇಸ್‌ಎಕ್ಸ್‌ ಫಾಲ್ಕನ್‌ 9 ರಾಕೆಟ್‌ ಖಾಸಗಿ ಉಪಗ್ರಹವನ್ನು ಹೊತ್ತು ನಭಕ್ಕೆ ಹಾರಿದೆ. ಏಪ್ರಿಲ್‌ 11ಕ್ಕೆ ಚಂದ್ರನನ್ನು ತಲುಪಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಯೋಜನೆಗೆ ಬೆರ್ಷೀಟ್‌ ಎಂದು ಹೆಸರಿಡಲಾಗಿದ್ದು, 2010ರಲ್ಲಿ ನಡೆದ ಗೂಗಲ್‌ ಲೂನಾರ್‌ ಎಕ್ಸ್‌ಪ್ರೈಜ್‌ ಸ್ಪರ್ಧೆಗೆ ಸಿದ್ಧ ಪಡಿಸಿದ್ದಾಗಿತ್ತು. ಈ ಸ್ಪರ್ಧೆಯಲ್ಲಿ ಪ್ರೈಜ್‌ ಗೆಲ್ಲದಿದ್ದರೂ, ಸ್ಪೂರ್ತಿ ಪಡೆದ ಬೆರ್ಷೀಟ್‌ ತಂಡ ಚಂದ್ರಯಾನ ಕೈಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದೆ.

ಬೆರ್ಷೀಟ್‌ ಎಂಬುದು ಹೀಬ್ರು ಮೂಲದಿಂದ ಬಂದ ಪದವಾಗಿದ್ದು, 'ಆರಂಭ' ಎಂಬ ಅರ್ಥವನ್ನು ಹೊಂದಿದೆ. ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾದ ಬೆಂಬಲದೊಂದಿಗೆ ಇಸ್ರೇಲ್‌ನ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳಾದ ಸ್ಪೇಸ್‌ಐಎಲ್‌ ಮತ್ತು ಇಸ್ರೇಲ್‌ ಏರೋಸ್ಪೇಸ್‌ ಇಂಡಸ್ಟ್ರಿ ಜತೆಯಾಗಿ ಬೆರ್ಷೀಟ್‌ ಯೋಜನೆಗೆ ಕೈಜೋಡಿಸಿವೆ. ಕ್ಯಾಮೆರಾಗಳು, ಮ್ಯಾಗ್ನೋಮೀಟರ್‌ ಸೇರಿದಂತೆ ಅಗತ್ಯ ಪರಿಕರಗಳನ್ನು ಉಪಗ್ರಹದಲ್ಲಿ ಅಳವಡಿಸಲಾಗಿದೆ. ನಾಸಾದ ಸಣ್ಣ ಲೇಸರ್‌ ರೆಟ್ರೋರಿಫ್ಲೆಕ್ಟರ್‌ಅನ್ನು ಜೋಡಿಸಲಾಗಿದ್ದು, ನ್ಯಾವಿಗೇಷನ್‌ ಟೂಲ್‌ಆಗಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಪರೀಕ್ಷಿಸಲು ಮುಂದಾಗಿದೆ.



ಚಂದ್ರಯಾನ 2, ಮಾನವ ಸಹಿತ ಗಗನಯಾನಕ್ಕೂ ಜಿಎಸ್‌ಎಲ್‌ವಿ ಎಂಕೆ3 ಬಳಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ